ಹುಬ್ಬಳ್ಳಿ: ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿನ ಅನೇಕರು ಪಾಲಿಕೆ ಚುನಾವಣೆಯಲ್ಲಿ ಬಂಡುಕೋರರಾಗಿ ಸ್ಪರ್ಧಿಸಿದ್ದು, ಘಟಾನುಘಟಿಗಳೆಲ್ಲ ಮುಂದುವರಿಯುವುದು ಖಚಿತವಾಗಿದೆ.
ಪಕ್ಷದ ಅಭ್ಯರ್ಥಿ ಗೆಲುವಿಗೆ ತೊಡರಾಗುವ ಅನೇಕರ ಹಿಂದಕ್ಕೆ ಸರಿಸುವ ಯತ್ನಕ್ಕೆ ಉಭಯ ಪಕ್ಷಗಳು ಮುಂದಾಗಿದ್ದರೂ ಕೆಲವರು ಮಾತ್ರ
ಸ್ವಾಭಿಮಾನಿ ನಡೆ, ಪಕ್ಷ ಬದಿಗಿಡಿ ಎನ್ನುವ ಮೂಲಕ ಅನೇಕ ಮಾಜಿ ಕಾರ್ಪೋರೇಟರುಗಳು ಪ್ರಚಾರ ನಡೆಸಿದ್ದು ಯಾವುದೇ ಟಿಕೆಟ್ ಹಂಚಿಕೆಯಲ್ಲಿ ಆದ ಅನ್ಯಾಯಕ್ಕೆ ಪಾಠ ಕಲಿಸಲು ಮುಂದಾಗಿದ್ದಾರೆ.
ಪಕ್ಷದ ಮುಖಂಡರು ಅನೇಕರ ಮೇಲೆ ತೀವ್ರ ಒತ್ತಡ ಹೇರುತ್ತಿದ್ದು, ಇನ್ನು ಕೆಲ ಬಂಡಾಯ ಅಭ್ಯರ್ಥಿಗಳು ಸ್ವಿಚ್ ಆಫ್ ಮಾಡಿದ್ದು, ಇಂದು 4 ರ ನಂತರ ಆನ್ ಆಗುವ ಸಾಧ್ಯತೆಗಳಿವೆ.
ಧಾರವಾಡದ ಮಂಜು ನಡಟ್ಟಿ, ಸರಸ್ವತಿ ಭಂಗಿ, ಮಂಜುನಾಥ ಚೋಳಪ್ಪನವರ, ವಿಜಯಕುಮಾರ ಅಪ್ಪಾಜಿ, ಮಂಜುಳಾ ಅಕ್ಕೂರ, ಲಕ್ಷಿ÷್ಮ ಉಪ್ಪಾರ, ಯಶೋಧಾ ಗಂಡಗಾಳೇಕರ, ಸಂತೋಷ ಶೆಟ್ಟಿ, ಹೂವಪ್ಪ ದಾಯಗೋಡಿ, ಮಹಾಂತೇಶ ಗಿರಿಮಠ ಮುಂತಾದವರು ಬಿಜೆಪಿಗೆ ‘ಮಗ್ಗುಲ ಮುಳ್ಳು’ಗಳಾಗಿದ್ದು, ಅವರ ಮೇಲೆ ಒತ್ತಡ ಫಲಪದವಾಗಿಲ್ಲ ಎನ್ನಲಾಗುತ್ತಿದೆ.
ಶಫಿ ಯಾದಗಿರಿ, ರಶೀದ ಖಾನ, ಗಣೇಟ ಟಗರಗುಂಟಿ, ಚೇತನ ಹಿರೆಕೆರೂರ, ಶಮೀರಖಾನ್, ಚಂದ್ರಿಕಾ ಮೇಸ್ತಿç, ಶೋಭಾ ಕಮತರ, ಹೇಮಲತಾ ಶಿವಮಠ ಮುಂತಾದವರು ಕಣದಲ್ಲಿ ಉಳಿಯಲಿದ್ದಾರೆ.
ಬಿಜೆಪಿಯಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಮಾಧವಿ ಡಂಬಳ, ಶ್ರೀಮತಿ ಶೆಟ್ಟರ್, ರಂಗನಾಯಕ ತಪೇಲಾ ಹಿಂದಕ್ಕೆ ಪಡೆದಿದ್ದಾರೆಂದು ಬಿಜೆಪಿ ಪ್ರಮುಖರು ತಿಳಿಸಿದ್ದಾರೆ.
೫೨ನೇ ವಾರ್ಡಿನಲ್ಲಿ ಕಾಂಗ್ರೆಸ್ ನಿಂದ ಪ್ರಕಾಶ ಕ್ಯಾರಕಟ್ಟಿ, ಬಿಜೆಪಿಯಿಂದ ಉಮೇಶ ದುಶಿ ಸ್ಪರ್ಧೆಗಿಳಿದಿದ್ದು, ಸಂತೋಷ ಶೆಟ್ಟಿ, ಚೇತನ ಹಿರೇಕೆರೂರ ಇಬ್ಬರೂ ಪಕ್ಷೇತರವಾಗಿ ಕಣಕ್ಕಿಳಿದಿರುವುದು, ಅಧಿಕೃತ ಅಭ್ಯರ್ಥಿಗಳಿಗೆ ಅಡ್ಡಗಾಲಾಗಿದ್ದಾರೆ.
೮೨ನೇ ವಾರ್ಡನಲ್ಲೂ ಕಾಂಗ್ರೆಸ್ ಗೆ ಬಂಡಾಯದ ಭೀತಿ ಎದುರಾಗಿದೆ.
ಬಹುಸಂಖ್ಯಾತರಿಗೆ ಮಣೆ ಹಾಕಿದ ಬಿಜೆಪಿ-ಕಾಂಗ್ರೆಸ್
ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿನ ೮೨ ವಾರ್ಡಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಗಳೆರಡೂ ಬಹುತೇಕ ಎಲ್ಲ ಜಾತಿಯ ಜನರಿಗೂ ಟಿಕೆಟ್ ನೀಡಿದ್ದರೂ ಎರಡೂ ಪಕ್ಷಗಳೂ ಬಹುಸಂಖ್ಯಾತ ಲಿಂಗಾಯತರಿಗೆ ಮಣೆ ಹಾಕಿದೆ.
ಬಿಜೆಪಿ ಲಿಂಗಾಯತ ಸಮಾಜದ 15 ಪುರುಷರು ಮತ್ತು 12 ಮಹಿಳೆಯರು ಸೇರಿ 22 ಜನರಿಗೆ ಟಿಕೆಟ್ ನೀಡಿದ್ದರೆ, 12 ಪುರುಷರು ಮತ್ತು 08 ಮಹಿಳೆಯರಿಗೆ ಮಣೆ ಹಾಕಿದೆ.
ಕಾಂಗ್ರೆಸ್ ಟಿಕೆಟ್ ಪಡೆದವರಲ್ಲಿ ಮುಸ್ಲಿಂ ಸಮುದಾಯ ಎರಡನೇ ಸ್ಥಾನದಲ್ಲಿದ್ದು 10 ಮಹಿಳೆಯರು ಮತ್ತು 7 ಪುರುಷರು ಇದ್ದಾರೆ. ಮೂರನೇ ಸ್ಥಾನದಲ್ಲಿ ಕುರುಬ ಸಮುದಾಯಕ್ಕೆ 8 ಸ್ಥಾನ ನೀಡಿದ್ದು ಐವರು ಪುರುಷರು ಮತ್ತು ಮೂವರು ಮಹಿಳೆಯರು ಸೇರಿದ್ದಾರೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ನಿಂದ ಮೂವರು ಬ್ರಾಹ್ಮಣ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮರಾಠಾ ಸಮಾಜದ 7 ಜನ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಎಸ್ ಸಿ ಎಸ್ ಟಿ ಸಮುದಾಯದ 16 ಜನರಿಗೆ ಸ್ಪರ್ಧೆ ಅವಕಾಶ ಸಿಕ್ಕಿದೆ.
ಬಿಜೆಪಿಯಲ್ಲಿ 7 ಬ್ರಾಹ್ಮಣರಿಗೆ ಟಿಕೆಟ್ ನೀಡಲಾಗಿದ್ದು, ಕುರುಬರಿಗೆ ಐವರಿಗೆ ಟಿಕೆಟ್ ನೀಡಲಾಗಿದೆ. ಮರಾಠಾ ಸಮುದಾಯದ 6 ಜನರಿಗೆ ಮಣೆ ಹಾಕಲಾಗಿದ್ದು, ಕೊರಮ, ಮಾದರ, ಮಡಿವಾಳರ, ಬೋವಿ ವಡ್ಡರ, ಗೊಲ್ಲ, ಗೌಳಿ, ಸಮಗಾರ, ಮಾದರ ಮುಂತಾದ ಸಮುದಾಯಗಳಿಗೂ ಪ್ರಾತಿನಿಧ್ಯ ನೀಡಲಾಗಿದೆ.
ಎಸ್ ಎಸ್ ಕೆ ಸಮಾಜ ಕಡೆಗಣನೆ
ಪ್ರಬಲ ಸಹಸ್ರಾರ್ಜುನ ಕ್ಷತ್ರಿಯ ಸಮಾಜಕ್ಕೆ ಬಿಜೆಪಿ ಈ ಬಾರಿ 4 ಸ್ಥಾನ ನೀಡಿದ್ದರೆ, ಕಾಂಗ್ರೆಸ್ ಸಹ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಬಿಜೆಪಿಯ ವೋಟ್ ಬ್ಯಾಂಕ್ ಎಂದೆ ಭಾವಿಸಲಾಗುವ ತಮ್ಮ ಸಮುದಾಯಕ್ಕೆ ಕನಿಷ್ಟ 10 ಸ್ಥಾನ ನೀಡಬೇಕೆಂಬ ಬೇಡಿಕೆಯನ್ನು ಸಮಾಜದ ಪ್ರಮುಖರು ಇಟ್ಟಿದ್ದರೂ ಕೇವಲ 4 ಸ್ಥಾನ ನೀಡಿರುವುದು ಆಘಾತ ತಂದಿದೆ ಎನ್ನಲಾಗುತ್ತಿದೆ.
ಕಳೆದ ಬಾರಿ ಕೇವಲ 67 ವಾರ್ಡಗಳಿದ್ದಾಗ ಬಿಜೆಪಿ ನಾಲ್ಕು ಸ್ಥಾನ ನೀಡಿತ್ತು. ಸೀಮಾ ಲದ್ವಾ ಹೊರತುಪಡಿಸಿ ಡಿ.ಕೆ. ಚವ್ಹಾಣ, ನಾರಾಯಣ ಜರತಾರಘರ, ಲೀನಾ ಮಿಸ್ಕಿನ ಮೂರು ಜನ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಈ ಬಾರಿ 82 ವಾರ್ಡಗಳಾದರೂ ಸಮಾಜದ ಜನ ಹೆಚ್ಚಿರುವ ಮೂರು ವಾರ್ಡಗಳಲ್ಲಿ ಮಾತ್ರ ಟಿಕೆಟ್ ನೀಡಿ ಇನ್ನೊಂದು ಟಿಕೆಟ್ ಸಮಾಜದವರೇ ಇಲ್ಲದೇ ಇರುವ ಕಡೆ ನೀಡಿರುವುದು ಸಮಾಜದ ಕಡೆಗಣನೆ ಮಾಡಿದೆ ಎಂಬ ಮಾತು ಕೇಳಿ ಬಂದಿವೆ. ಅಲ್ಲದೇ ಈ ಬಾರಿ ಎಸ್ ಎಸ್ ಕೆ ಸಮಾಜದ ಹಳಬರೊಬ್ಬರಿಗೂ ದೊರೆತಿಲ್ಲ.