ತೆನೆಹೊತ್ತ ಮಹಿಳೆ ಮಂಜುಳಾ ಯಾತಗೇರಿ
ಹುಬ್ಬಳ್ಳಿ: ಮಹಾನಗರ ಪಾಲಿಕೆಯ 50ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿ ಮಂಜುಳಾ ಗುರುನಾಥ ಯಾತಗೇರಿ ವಾರ್ಡ್ ವ್ಯಾಪ್ತಿಯ ವಾರ್ಡ್ನ ಹೊಸೂರ, ಯಾವಗಲ ಪ್ಲಾಟ್, ತಿಮ್ಮಸಾಗರ ಗುಡಿ ಪ್ರದೇಶಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಇಂದು ಓಣಿಯ ಹಿರಿಯರು, ತಾಯಂದಿರು, ಅಕ್ಕ-ತಂಗಿಯರು, ಅಣ್ಣ-ತಮ್ಮಂದಿರೊ0ದಿಗೆ ಪ್ರಚಾರ ನಡೆಸಿ ರಾಷ್ಟ್ರೀಯ ಪಕ್ಷಗಳಿಂದ ಅಭಿವೃದ್ಧಿ ಅಸಾಧ್ಯವಾಗಿದ್ದು, ವಾರ್ಡಿನ ನಿವಾಸಿಯಾದ ತಮಗೆ ಇಲ್ಲಿನ ವಾಸ್ತವದ ಅರಿವಿದ್ದು, ಸರ್ವಾಂಗೀಣ ಅಭಿವೃದ್ಧಿಗಾಗಿ ಜಾತ್ಯತೀತ ಜನತಾದಳದ ತಮ್ಮ ತೆನೆ ಹೊತ್ತ ಮಹಿಳೆ ಗುರುತಿಗೆ ಮತ ಹಾಕುವ ಮೂಲಕ ವಾರ್ಡಿನ ಅಭಿವೃದ್ಧಿಗೆ ಸಹಕರಿಸಲು ವಿನಂತಿಸಿದರು.
ಈ ಹಿಂದೆ ಪಾಲಿಕೆಯ ಜೆಡಿಎಸ್ನ ಮಾಜಿ ಸದಸ್ಯೆ ಯಲ್ಲಮ್ಮಾ ಹಿರೇಕೇರೂರ ಹಾಗೂ ಗುರುನಾಥ ಗಾಣದಾಳರ ವಾರ್ಡ್ ಅಭಿವೃದ್ಧಿಯ ಕೆಲಸಗಳು ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಈ ವಾರ್ಡ್ ಜಾತ್ಯತೀತ ಜನತಾದಳದ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸುವುದಾಗಿ ಹೇಳಿದರು.
ಪ್ರಚಾರ ಸಂದರ್ಭದಲ್ಲಿ ರೇಣುಕಾ ತೂರಿಹಾಳ, ಫಾತಿಮಾ ಖಾನ್, ಮುಮ್ತಾಜ ರಫಿವಾಲೆ, ಶಾರವ್ವ ಧಾರವಾಡಕರ,ಪರಶುರಾಮ ಊನೂರ, ಈಶ್ವರ ತೆಗ್ಗಿ, ಮಹೇಶ್ವರಿ ಯಾತಗೇರಿ, ಮೀನಾಕ್ಷಿ ರಾಯಣ್ಣವರ, ಮಹಾದೇವಿ ಜಮಲಾಪುರ, ನಾಗರಾಜ ಕನಸಾವಿ,ಹುಸೇನಪ್ಪ ಮಾದರ, ನಿಂಬವ್ವ ವಜ್ಜಲ, ಗುರುನಾಥ ಮದರಿ, ಕೃಷ್ಣಾ ಚಲವಾದಿ, ಸುನೀಲ ಈಟಿ ಮುಂತಾದವರು ಇದ್ದರು.