ಹುಬ್ಬಳ್ಳಿ: ತೆಗ್ಗುಗುಂಡಿ, ಧೂಳುಮುಕ್ತ, ಅಲ್ಲದೇ ಹುಬ್ಬಳ್ಳಿ-ಧಾರವಾಡ ಮಹಾನಗರದ ಸರ್ವೋನ್ಮುಖ ಅಭಿವೃದ್ಧಿಯ 23 ಅಂಶಗಳುಳ್ಳ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಿದೆ.
ಪಾಲಿಕೆ ಚುನಾವಣೆ ನಿಮಿತ್ತ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಇಂದು ನಗರದ ಕಾರವಾರ ರಸ್ತೆಯ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ, ಎಐಸಿಸಿಯಿಂದ ಚುನಾವಣಾ ವೀಕ್ಷಕರಾಗಿ ಆಗಮಿಸಿರುವ ಲೋಕಸಭಾ ಸದಸ್ಯ ಕುಲದೀಪ್ ರಾಯ್ ಶರ್ಮಾ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು 2007ರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರದ ಚುಕ್ಕಾಣಿಯನ್ನು ಹಿಡಿದ ಭಾರತೀಯ ಜನತಾಪಕ್ಷ, ಜನಪರ ಬದ್ದತೆ ತೋರದೆ ಜನಸ್ಪಂದನೆ
ಇಲ್ಲದ ಅವೆÊಜ್ಞಾನಿಕ, ಕಳಪೆ ಹಾಗೂ ಅರ್ಧಮರ್ದ ಕಾಮಗಾರಿಗಳನ್ನು ಮಾಡಿ ಮಹಾನಗರದ ಸುವ್ಯವಸ್ಥಿತ ಅಭಿವೃದ್ಧಿಯನ್ನು ನಿಷ್ಕಿçಯ ಮಾಡಿದೆ ಎಂದರು.
ಇAದಿನ ಸಂಚಾರದ ಅವ್ಯವಸ್ಥೆ, ಕಸ ತುಂಬಿದ ಬೀದಿಗಳು, ಹದಗೆಟ್ಟ ರಸ್ತೆಗಳು ಒಂದೊAದು ಮಳೆಗೂ ಕೆರೆಯಂತಾಗುವ ವಸತಿ ಪ್ರದೇಶಗಳು ಮತ್ತು ಅಪೂರ್ಣ ಕಾಮಗಾರಿಗಳು ಇವು ಕಳೆದ 14ವರ್ಷ 2 ತಿಂಗಳಲಿ ಬಿಜೆಪಿ ಆಡಳಿತದಲ್ಲಿದ್ದು ಮಾಡಿದ ಸಾಧನೆ ಎಂದು ಆರೋಪಿಸಿದರು.
ಬಿಜೆಪಿ ಆಡಳಿತದ ವೈಫಲ್ಯ, ಜನರ ದೈನಂದಿನ ಬದುಕನ್ನು ನರಕವನ್ನಾಗಿ ಮಾಡಿಬಿಟ್ಟಿದೆ. 21ನೇ ಶತಮಾನದ ಹುಬ್ಬಳ್ಳಿ-ಧಾರವಾಡ ಮಹಾನಗರ ಎನ್ನುವ ಹೆಗ್ಗಳಿಕೆಗೆ ಪೂರಕವಾಗಿ ಒಂದೇ ಒಂದು ಯೋಜನೆಯನ್ನು ಜನತೆಗೆ ಕೊಡಲಾರದ್ದು ಜನ ಸಂವೇದನಾ ಇಲ್ಲದ ಬಿಜೆಪಿ ಆಡಳಿತದ ದುರಾದೃಷ್ಟ. ಕಾಂಗ್ರೆಸ್ ಪಕ್ಷ ಸದಾ ಜನಪರ ಕಾಳಜಿಯುಳ್ಳ ಪಕ್ಷವಾಗಿದ್ದು, ಅಮೂಲ್ಯ ಮತವನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಕೊಟ್ಟು, ನಿಂತ ನೀರನ್ನು ಬದಲಾಯಿಸಿ ಹೊಸ ಚಿಂತನೆಗೆ ದಾರಿಮಾಡಿ ಕೊಡಬೇಕೆಂದು ವಿನಂತಿಸಿದರು.
ಮಾಜಿ ಸಿಎಂ, ಹಾಲಿ ಸಿಎಂ ಸೇರಿದಂತೆ ಕೇಂದ್ರ ಸಚಿವರು ಇರುವ ನಗರ ಸಂಪೂರ್ಣ ಹಾಳಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರ ಯಾವುದೇ ಅಭಿವೃದ್ಧಿಯಾಗಿಲ್ಲ.
ನಾವು 82 ವಾರ್ಡ್ಗಳಲ್ಲಿ ಅಭ್ಯರ್ಥಿಗಳನ್ನ ನಿಲ್ಲಿಸಿದ್ದೇವೆ
ಎಲ್ಲ ಜನರಿಗೆ ಸಾಮಾಜಿಕ ನ್ಯಾಯದಲ್ಲಿ ಟಿಕೆಟ್ ನೀಡಲಾಗಿದೆ ಎಂದು ಹೇಳಿದರು.
ಉಭಯ ಅಧ್ಯಕ್ಷರಾದ ಅಲ್ತಾಫ ಹಳ್ಳೂರ, ಅನಿಲಕುಮಾರ ಪಾಟೀಲ ಶಾಸಕರಾದ ಶ್ರೀನಿವಾಸ ಮಾನೆ, ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಎ.ಎಂ.ಹಿAಡಸಗೇರಿ, ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಸಂಸದ ಪ್ರೊ.ಐ.ಜಿ.ಸನದಿ, ಸದಾನಂದ ಡಂಗನವರ, ವಸಂತ ಲದವಾ, ಡಾ.ಶರಣಪ್ಪ ಕೊಟಗಿ, ಮೋಹನ ಹಿರೇಮನಿ, ಪಾರಸಮಲ್ ಜೈನ್, ಸ್ವಾತಿ ಮಳಗಿ ಸೇರಿದಂತೆ ಇನ್ನಿತರರಿದ್ದರು.
ಪ್ರಣಾಳಿಕೆಯಲ್ಲೂ ಕೈ ಪಡೆಯೇ ಮುಂದೆ!
ಹುಬ್ಬಳ್ಳಿ: ಪ್ರಸಕ್ತ ಪಾಲಿಕೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಮೊದಲೇ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಇಂದು ಪ್ರಣಾಳಿಕೆಯನ್ನು ಸಹ ಕಮಲ ಪಡೆಗಿಂತ ಮೊದಲೇ ಬಿಡುಗಡೆ ಮಾಡಿದೆ.
ನಾಮಪತ್ರ ಸಲ್ಲಿಸಲು ಕೊನೆಯದಿನದಂದು 12 ಗಂಟೆಗೆ ಅಂತಿಮ ಅಭ್ಯರ್ಥಿಯನ್ನು ಬಿಜೆಪಿ ಪ್ರಕಟಿಸಿದರೆ ಒಂದು ದಿನ ಮೊದಲೇ ಬಂಡಾಯದ ಲಕ್ಷಣಗಳಿದ್ದರೂ ಕೈ ಪಡೆ ಹುರಿಯಾಳುಗಳ ಪಟ್ಟಿ ಅಂತಿಮಗೊಳಿಸಿತ್ತು.
ಕಳೆದ 10 ವರ್ಷಗಳ ಕಾಳ ಪಾಲಿಕೆ ಆಡಳಿತವನ್ನು ಸ್ವಯಂಕೃತ ತಪ್ಪಿನ ಪರಿಣಾಮ ತಾನಾಗೇ ಅಗ್ರ ತಾಂಬೂಲದೊAದಿಗೆ ನೀಡಿದ್ದ ಕಾಂಗ್ರೆಸ್ ಈ ಬಾರಿ ಹೇಗಾದರೂ ಅಧಿಕಾರ ಹಿಡಿಯಲೇ ಬೇಕೆಂಬ ಸಿದ್ದತೆಯಲ್ಲಿದ್ದು ಸಮತಿಯ ಉಸ್ತುವಾರಿಗಳಾಗಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಕಾರ್ಯಾಧ್ಯಕ್ಷ ಧ್ರುವನಾರಾಯಣ, ತನ್ವೀರ ಸೇಠ ಇದ್ದು ಸ್ವತಃ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಆಗಮಿಸುತ್ತಿರುವುದು ಪಾಳೆಯದಲ್ಲಿ ಹೊಸ ಸಂಚಲನ ಹುಟ್ಟು ಹಾಕಿದೆ.
ಪ್ರಣಾಳಿಕೆಯ ಭರವಸೆಗಳು
- ಹುಬ್ಬಳ್ಳಿ-ಧಾರವಾಡ ಮಹಾನಗರದ ಎಲ್ಲಾ ಸರಕಾರಿ ಶಾಲೆಗಳನ್ನು ನವೀಕರಿಸಿ ಆಧುನಿಕರಣ ಮಾಡುವ ಸಂಕಲ್ಪ.
- ಹೆರಿಗೆ ಮತ್ತು ಡಯಾಲಿಸಿಸ್ ಘಟಕದ ವ್ಯವಸ್ಥೆಯುಳ್ಳ ಅತ್ಯಾಧುನಿಕ 100 ಹಾಸಿಗೆಯ ಸುಸಜ್ಜಿತ ಆಸ್ತಪತ್ರೆಯ ನಿರ್ಮಾಣ
- ಹದಗೆಟ್ಟಿರುವ ಬೀದಿ ದೀಪಗಳ ನಿರ್ವಹಣಾ ವ್ಯವಸ್ಥೆಗೆ ಮರುರೂಪ ಮತ್ತು ಹೊರವಲಯದ ಪ್ರದೇಶಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಲು ಕ್ರಮ.
- ಕರೋನಾ ಸಂಕಷ್ಟದ ಸಮಯದಲ್ಲಿ ಜನತೆಯ ಮೇಲೆ ಬೇಜವಾಬ್ದಾರಿ ಯಿಂದ ಬೇಕಾಬಿಟ್ಟಿ ಏರಿಸಿರುವ ಮನೆಯ ಕರವನ್ನು ಕಡಿತಗೊಳಿಸುವ ಮತ್ತು ಪರಷ್ಕರಿಸುವ ಪ್ರಸ್ತಾವನೆಗೆ ಸಂಕಲ್ಪ.
- ಸಾರ್ವಜನಿಕರಿಗೆ ಅಡತಡೆ ಬಾರದಂತೆ ಬೀದಿಬದಿ ವ್ಯಾಪಾರಿಗಳಿಗೆ ತಮ್ಮ ವ್ಯವಹಾರ ನಡೆಸಲು ಸೌಲಭ್ಯಗಳ ಸಹಿತ
ನಿರ್ದಿಷ್ಟ ಸ್ಥಳಾವಕಾಶ ಕಲ್ಪಿಸುವ ಸಂಕಲ್ಪ. - ಪ್ರತಿ ವಾರ್ಡಿನಲ್ಲೂ ಜನತೆಯ ಸುರಕ್ಷತೆಗಾಗಿ ಸಿಸಿ ಕ್ಯಾಮರಾ ಅಳವಡಿಕೆ, ಸುಸಜ್ಜಿತ ಸಮುದಾಯ ಭವನ ಮತ್ತು ಡಿಜಿಟಲ್ ಲಬ್ರರಿವುಳ್ಳ ಗ್ರಂಥಾಲಯ.
- ವಸತಿ, ವಾಣಿಜ್ಯ, ಕೈಗಾರಿಕಾ ಹಾಗೂ ಖುಲ್ಲಾ ನಿವೇಶನಗಳಿಗೆ ಸರಳ ಮತ್ತು ಸ್ನೇಹಪರ ಆಸ್ತಿ ತೆರಿಗೆ ವ್ಯವಸ್ಥೆ ಮತ್ತು ತೆರಿಗೆ ತುಂಬುವ ವ್ಯವಸ್ಥೆಯ ಸರಳೀಕರಣ.
ಮಹಾನಗರದ ಪ್ರತಿವಲಯದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಒಂದು ಆಧುನಿಕ ವ್ಯಾಯಾಮ ಶಾಲೆಗಳನ್ನು (ಜಿಮ್)
ಪ್ರಾರಂಭಿಸುವ ಸಂಕಲ್ಪ. - ವಾಹನಗಳ ದಟ್ಟಣೆ ತಪ್ಪಿಸಲು ಹು.ಧಾ. ಮಹಾನಗರಕ್ಕೆ ಸಂಪೂರ್ಣ ಬೈ-ಪಾಸ್ ವರ್ತುಲ ರಸ್ತೆ ನಿರ್ಮಾಣಕ್ಕೆ ಸಂಕಲ್ಪ
- ಮಹಾನಗರದ ಎಲ್ಲಾ ರಾಜಕಾಲುವೆ ಹಾಗೂ ಸಂಪರ್ಕ ಕಾಲುವೆಗಳಿಗೆ ನೆರಹಾವಳಿಯ ಅವಘಡ ತಡೆಯಲು ತಡೆಗೋಡೆಗಳ ನಿರ್ಮಾಣ.
ಪ್ರತಿ ವಾರ್ಡಿನಲ್ಲೂ ಚಿಕ್ಕ ಮಕ್ಕಳ ಆಟದ ಮತ್ತು ಆಧುನಿಕ ವ್ಯಾಯಾಮ ಸಲಕರಣೆಗಳನ್ನು ಹೊಂದಿದ ಉದ್ಯಾನವನಗಳ ನಿರ್ಮಾಣ - ನೀರಿನ ಕರ ಬಾಕಿ ಉಳಿಸಿಕೊಂಡಿರುವ ಕುಟುಂಬಗಳ ಸಂಪೂರ್ಣ ಬಾಕಿ ಪಾವತಿಗಾಗಿ (ಒಟಿಎಸ್) ಏಕ ಪಾವತಿ ಯೋಜನೆ ಜಾರಿ ಮತ್ತು ಎಲ್ಲ ವಾರ್ಡಗಳಿಗೂ 24×7 ನೀರಿನ ಸಂಪರ್ಕ.
- ವಸತಿರಹಿತ ಬಡಜನರಿಗೆ “ಆಶ್ರಯ ಯೋಜನೆ” ಅಡಿಯಲ್ಲಿ 25 ಸಾವಿರ ಮನೆಗಳ ನಿರ್ಮಾಣಕ್ಕೆ ಪ್ರಸ್ತಾವನೆ.
- ಅಘೋಷಿತ ಕೊಳಚೆ ಪ್ರದೇಶಗಳನ್ನು, ಕೊಳಚೆ ಪ್ರದೇಶಗಳನ್ನಾಗಿ ಘೋಷಣೆ ಮಾಡಲು ಕ್ರಮ ಮತ್ತು ಘೋಷಿತ ಕೊಳಚೆ ಪ್ರದೇಶಗಳಲ್ಲಿ
ತುರ್ತುವದ್ಯಕೀಯ ಸಹಾಯಕ್ಕಾಗಿ ಮಹಾನಗರ ಪಾಲಿಕೆಯ ಆಸ್ಪತ್ರೆ ಮತ್ತು ಈಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆಧುನೀಕರಣ.
ಮಹಾನಗರದ ವ್ಯಾಪ್ತಿಯಲ್ಲಿ ಬರುವ ಕಗಾರಿಕಾ ವಸಾಹತುಗಳಿಗೆ ಹಾಕುವ ತೆರಿಗೆಯಲ್ಲಿ ಹೊಸ ವರ್ಗೀಕರಣ ಮತ್ತು
ತೆರಿಗೆಯಲ್ಲಿ ಬಡ್ಡಿ ಮತ್ತು ದಂಡ ವಿನಾಯಿತಿ ಅಡಿಯಲ್ಲಿ ತೆರಿಗೆ ತುಂಬಲು (ಓಟಿಎಸ್) ಏಕಪಾವತಿ ಸೌಲಭ್ಯ - ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಹೊಸ ಒಳಾಂಗಣ ಕ್ರೀಡಾಂಗಣಗಳ ನಿರ್ಮಾಣ ಮತ್ತು ಇರುವ ಆಟದ ಮೈದಾನಗಳ ಆಧುನಿಕರಣಕ್ಕೆ ಪಣ.
- ಬೆಳೆಯುತ್ತಿರುವ ಅವಳಿ ನಗರದ ಸಾರಿಗೆ ಅಗತ್ಯಗಳಿಗೆ ಪೂರಕವಾಗಿ ಮುಂದಾಲೋಚನೆಯಿಂದ ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಮೆಟ್ರೋ ರಲು ಯೋಜನೆಯ ಪ್ರಸ್ತಾವನೆ
- ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಉಚಿತ ಹೊಲಿಗೆ ಯಂತ್ರ ಮತ್ತು ಅಡುಗೆ ಅನಿಲ ಸಂಪರ್ಕ.
- 2001ಕ್ಕೂ ಪೂರ್ವದಲ್ಲಿ ಅಕ್ರಮವಾಗಿ ನಿರ್ಮಿತ ವಸತಿ ಕಟ್ಟಡಗಳಿಗೆ ಸಕ್ರಮ ಮಾಡುವ ಯೋಜನೆ ಜಾರಿ ಮಾಡಲು ಸಂಕಲ್ಪ
- ಪರಿಶಿಷ್ಟ ಜಾತಿ ಮತ್ತು ಪರಿಶಿಷಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಯೋಜನೆ.
- ಪ್ರತಿಯೊಂದು ವಲಯದಲ್ಲೂ ಕನಿಷ್ಠ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಮಾಡುವ ಸಂಕಲ್ಪ.
- ಹುಬ್ಬಳ್ಳಿ-ಧಾರವಾಡದಲ್ಲಿರುವ ಕೈಗಾರಿಕಾ ವಸಾಹತುಗಳಲ್ಲಿ ನಾಗರಿಕ ಸೌಲಭ್ಯಗಳನ್ನು ಒದಗಿಸಲು ಪಾಲಿಕೆಗೆ ಹಸ್ತಾಂತರಿಸುವ ಪ್ರಕ್ರಿಯೆಗೆ ಪ್ರಸ್ತಾವನೆ.