ಹುಬ್ಬಳ್ಳಿ-ಧಾರವಾಡ ಸುದ್ದಿ

22ಕ್ಕೆ ಮಜೇಥಿಯಾ ಫೌಂಡೇಶನ್ 13ನೇ ವಾರ್ಷಿಕೋತ್ಸವ; ಪಂಚರತ್ನಗಳು, ಕೋವಿಡ್ ಸೇನಾನಿಗಳಿಗೆ ಸನ್ಮಾನ

ಹುಬ್ಬಳ್ಳಿ: ಈಗಾಗಲೇ ಸಮಾಜ ಸೇವೆಯಲ್ಲಿ ತನ್ನದೇ ಛಾಪು ಮೂಡಿಸಿ ರಾಜ್ಯ ಮಟ್ಟದಲ್ಲೂ ಸದ್ದು ಮಾಡುತ್ತಿರುವ ಹುಬ್ಬಳ್ಳಿಯ ಮಜೇಥಿಯಾ ಫೌಂಡೇಶನ್ 13 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ದಿ. 22ರಂದು ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.


ಬುಧವಾರ ಸಂಜೆ 4:30ಕ್ಕೆ ನಗರದ ಗುಜರಾತ್ ಭವನದಲ್ಲಿ ಫೌಂಡೇಶನ್ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರತಿಷ್ಠಾನದ ಯಶಸ್ಸಿನ ಪಯಣದಲ್ಲಿ ಜತೆಯಾಗಿ ಸಹಕರಿಸಿದ ಐವರು ಗಣ್ಯರನ್ನು ಸನ್ಮಾನಿಸಲಾಗುವುದು ಎಂದು ಫೌಂಡೇಶನ್ ಅಧ್ಯಕ್ಷೆ ನಂದಿನಿ ಕಶ್ಯಪ್ ಮಜೇಥಿಯಾ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2008 ರಲ್ಲಿ ಪ್ರಾರಂಭಿಸಲಾದ ಮಜೇಥಿಯಾ ಫೌಂಡೇಶನ್ ಹಲವಾರು ಸಮಾಜಮುಖಿ ಕೆಲಸಗಳಿಗೆ ಬೆನ್ನೆಲುಬಾಗಿರುವ ಕನ್ನಯ್ಯಲಾಲ ಠಕ್ಕರ್, ಡಾ.ಜಿ.ಬಿ.ಸತ್ತೂರ, ಹಂಪಿ ವಿ.ವಿ. ಮಾಜಿ ಸಿಂಡಿಕೇಟ್ ಸದಸ್ಯ ಸುಭಾಸಸಿಂಗ್ ಜಮಾದಾರ, ಭಾರತ ವಿಕಾಸ ಪರಿಷತ್‌ನ ಮಂಜುನಾಥ ಭಟ್ ಹಾಗೂ ಫೌಂಡೇಶನ್‌ನ ಕಾರ್ಯದರ್ಶಿ ಅಮರೇಶ ಹಿಪ್ಪರಗಿಯವರಿಗೆ ‘ಅಭಿಮಾನದ ಸನ್ಮಾನ’ ನಡೆಯಲಿದೆ ಎಂದರು.
ಅಂದು ಕೊರೊನಾ ವಾರಿಯರ್ಸ್ ಆಗಿ ಎಲೆ ಮರೆಯ ಕಾಯಿಯಂತೆ ಇರುವ ವೈದ್ಯರಾದ ಡಾ. ಎಸ್.ವೈ. ಮುಲ್ಕಿಪಾಟೀಲ, ಡಾ. ರಾಮ ಕೌಲಗುಡ್, ಡಾ. ಧರ್ಮೆಂದ್ರ ಲದ್ದಡ, ಡಾ. ವಿಕಾಸ ಜೋಶಿ, ಡಾ. ಮುತ್ತಣ್ಣ ರಂಜಣಗಿ, ಡಾ. ರ‍್ಹೀನ್ ಗಾಂಜೇವಾಲೆ, ದಾದಿಯರಾದ ಸುಜಾತಾ ಜಾಪಣ್ಣವರ, ಪ್ರದೀಪ ಕಾಳೆ, ಮುಂಚೂಣಿ ಕಾರ್ಯಕರ್ತರಾದ ಪರಶುರಾಮ ಮಲ್ಯಾಳ, ಸೋಮಶೇಖರ ಕಮಡೊಳ್ಳಿ, ಜ್ಯೋತಿಶ್ರಿ ಜಮ್ಮಲದಿನ್ನಿ, ಅಲ್ಲದೇ ಸಮಾಜ ಸೇವಕರಾದ ಅಣ್ಣಪ್ಪ ಬಾಗಲಕೋಟಿ, ಸಂತೋಷ ಪೂಜಾರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಈಗಾಗಲೇ ಪ್ರತಿಷ್ಠಾನ ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಹಿನ್ನೆಲೆ ಮಹಿಳೆಯರು ಅನುಕೂಲಕ್ಕೆ ವಾಟರ್ ವ್ಹೀಲ್, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಕಾಲು ಕಳೆದುಕೊಂಡ ವ್ಯಕ್ತಿಗಳಿಗೆ ಕೃತಕ ಕಾಲು ಜೋಡಣೆ ಶಿಬಿರ ಆಯೋಜನೆ ಮಾಡಲಾಗಿದೆಯಲ್ಲದೇ
ಲಾಕ್‌ಡೌನ್ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೇಜರ್, ಗ್ರಾಮೀಣ ಭಾಗದಲ್ಲಿ ಆಕ್ಸಿಜನ್ ಸಾಂದ್ರಕಗಳನ್ನು ಒದಗಿಸಲಾಗಿದೆ. ಕೊರೋನಾ ಸಂಖ್ಯೆ ಹೆಚ್ಚಾದಾಗ 21 ಸ್ವಯಂ ಸೇವಕರನ್ನು ಕಿಮ್ಸ್ ನೀಡಿದ್ದೇವೆ. ಮೇ ಐ ಹೆಲ್ಪ ಯೂ ಮೂಲಕ ಕಿಮ್ಸ್ ಗೆ ಗ್ರಾಮೀಣ ಪ್ರದೇಶದಿಂದ ಬರುವ ಜನರಿಗೆ ಸಹಾಯ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜ ಮುಖಿ ಮಾಡುವ ಉದ್ದೇಶ ಹೊಂದಿರುವ ಮಜೇಥಿಯಾ ಫೌಂಡೇಶನ್ ಹೊಂದಿದ್ದು, ಕಿಮ್ಸ್ ಆವರಣದಲ್ಲಿ ಎರಡು ಊಟದ ಮನೆ ನಿರ್ಮಿಸುತ್ತಿದೆ. ಹಿರಿಯ ನಾಗರಿಕರಿಗೆ ವಸತಿ ಗೃಹ ನಿರ್ಮಾಣ, ನಿರುದ್ಯೋಗಿ ಯುವಕರಿಗೆ ಕೌಶಲ್ಯ ನೀಡುವ ಉದ್ದೇಶದಿಂದ ಸ್ಕೀಲ್ ಟ್ರೇನಿಂಗ್ ಸೆಂಟರ್ ಪ್ರಾರಂಭಿಸುವ ಗುರಿ ಹೊಂದಲಾಗಿದೆ ಎಂದುಗೋಷ್ಠಿಯಲ್ಲಿದ್ದ ಡಾ.ರಮೇಶ ಬಾಬು, ಡಾ. ವಿ.ಬಿ.ನಿಟಾಲಿ ವಿವರಿಸಿದರು. ಪ್ರಲ್ಹಾದ್ ರಾವ್, ಅಮರೇಶ ಹಿಪ್ಪರಗಿ ಉಪಸ್ಥಿತರಿದ್ದರು.

 

administrator

Related Articles

Leave a Reply

Your email address will not be published. Required fields are marked *