ಹುಬ್ಬಳ್ಳಿ-ಧಾರವಾಡ ಸುದ್ದಿ
ಅಕ್ರಮ ಬಡಾವಣೆಗಳಿಗೆ ಹುಡಾ ಶಾಕ್

ಅಕ್ರಮ ಬಡಾವಣೆಗಳಿಗೆ ಹುಡಾ ಶಾಕ್

ಧಾರವಾಡ : ನಗರದ ಹೊರವಲಯದಲ್ಲಿನ ಮಾಳಾಪೂರ ಮತ್ತು ಗುಲಗಂಜಿಕೊಪ್ಪ ಗ್ರಾಮಗಳ ಹದ್ದಿನಲ್ಲಿನ ಅಕ್ರಮ ಬಡಾವಣೆಗಳನ್ನು ತೆರವುಗೊಳಿಸುವ ಕಾರ್ಯವನ್ನು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರವತಿಯಿಂದ ಇಂದು ಬೆಳಗ್ಗೆ ಕೈಕೊಳ್ಳಲಾಯಿತು.


ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರ ನೇತೃತ್ವದಲ್ಲಿ ಅಧಿಕಾರಿಗಳು, ಪೊಲೀಸ್ ಬಂದೋಬಸ್ತ್ ನೊಂದಿಗೆ ತೆರವುಗೊಳಿಸಿದರು.
ಮಾಳಾಪೂರ ಮತ್ತು ಗುಲಗಂಜಿಕೊಪ್ಪ ಹದ್ದಿನಲ್ಲಿನ ರಿ.ಸ.ನಂ. 118 ರಲ್ಲಿನ ಸೈಯ್ಯದ ಇಸ್ಮಾಯಿಲ್ ಶೇತಸನದಿ ಎಂಬುವರ 4 ಎಕರೆ 29 ಗುಂಟೆ, ರಿ.ಸ.ನಂ. 43/1 ರಲ್ಲಿನ ನಾಗಪ್ಪ ಬಸಪ್ಪ ಸವದತ್ತಿಯವರ 39 ಗುಂಟೆ 15 ಆಣೆ, ರಿ.ಸ.ನಂ. 43/2 ರಲ್ಲಿನ ನೀಲವ್ವ ಬಸಪ್ಪ ಸವದತ್ತಿಯವರ 39 ಗುಂಟೆ 15 ಆಣೆ, ರಿ.ಸ.ನಂ. 43/3 ರಲ್ಲಿನ ಬಸಪ್ಪ ನಾಗಪ್ಪ ಸವದತ್ತಿಯವರ 1 ಎಕರೆ 35 ಗುಂಟೆ, ರಿ.ಸ.ನಂ. 34/1 ರಲ್ಲಿನ ದಾದಾಕಲಂದರ ಮೌಲಾಸಾಬ ಹಂಚಿನಮನಿಯವರ 31 ಗುಂಟೆ 9.5 ಆಣೆ ಮತ್ತು ರಿ.ಸ.ನಂ. 37/1 ರಲ್ಲಿನ ಅನ್ವರಸಾಬ ಮಲ್ಲೂರಿಯವರ 1 ಎಕರೆ 38 ಗುಂಟೆ ಜಮೀನನಲ್ಲಿನ ಅಕ್ರಮ ನಿವೇಶನಗಳನ್ನು ಜೆಸಿಬಿಗಳ ಮೂಲಕ ತೆರವುಗೊಳಿಸಲಾಯಿತು.


ರಿ.ಸ.ನಂ. 118 ರಲ್ಲಿನ ಸೈಯ್ಯದ ಇಸ್ಮಾಯಿಲ್ ಶೇತಸನದಿ ಎಂಬುವರ 4 ಎಕರೆ 29 ಗುಂಟೆ ಜಮೀನಿನಲ್ಲಿ ರಚಿಸಿದ್ದ ಅಕ್ರಮ ಸ್ವದೇಶ ಲೇಔಟ್ ತೆರವುಗೊಳಿಸುತ್ತಿದ್ದ ಸಂದರ್ಭದಲ್ಲಿ ಜಮೀನು ಮಾಲಕರು ಮತ್ತು ನಿವೇಶನ ಖರೀದಿಸಿದವರಿಂದ ತೀವೃ ವಿರೋಧ ಉಂಟಾಯಿತು. ಒಂದು ಹಂತದಲ್ಲಿ ನಿವೇಶನಗಳಿಗೆ ಕಾಕಲಾಗಿದ್ದ ಕಲ್ಲುಗಳನ್ನು ತೆಗೆಯುತ್ತಿದ್ದ ಜೆಸಿಬಿ ಮುಂದೆ ಮೆಹಬೂಬ ಪಠಾಣ ಎಂಬುವರು ಮಲಗಿ ಆಕ್ರೋಷವ್ಯಕ್ತಪಡಿಸಿದರು.
ನಮಗೆ ಸೂಕ್ತ ಸಮಯಾವಕಾಶ ಕೊಡಿ. ಲೇಔಟ್‌ಗಳನ್ನು ಅಧಿಕೃತಗೊಳಿಸಿಕೊಳ್ಳುತ್ತೇವೆ. ಈ ರೀತಿ ಹೇಳದೇ ಕೇಳದೇ ತೆರವು ಮಾಡಲು ಬಂದರೆ ಹೇಗೆ? ನಾವು ಕೂಲಿ, ನಾಲಿ ಮಾಡಿ ಪ್ಲಾಟ್ ಖರೀದಿಸಿದ್ದೇವೆ ಎಂದು ಲೇಔಟ್ ಮಾಲೀಕರು ಮತ್ತು ಪ್ಲಾಟ್ ಕೊಂಡುಕೊAಡವರು ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರೊಂದಿಗೆ ತೀವ್ರ ವಾಗ್ವಾದ ಕೂಡ ನಡೆಸಿದರು.
ಬಳಿಕ ಅಧ್ಯಕ್ಷ ಕಲಬುರ್ಗಿ ಮತ್ತು ಆಯುಕ್ತ ಕುಮ್ಮಣ್ಣರ ಅವರು ಸಾರ್ವಜನಿಕರನ್ನು ಸಮಾಧಾನಪಡಿಸಿ ಅಧೀಕೃತಗೊಳಿಸಲು ಅರ್ಜಿ ಸಲ್ಲಿಸಿದರೆ ಅಗತ್ಯ ಸಹಕಾರ ನೀಡುವುದಾಗಿ ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರು, ಅಕ್ರಮ ನಿವೇಶನಗಳನ್ನು ಪ್ರಾಧಿಕಾರದಿಂದ ಸಕ್ರಮಗೊಳಿಸಿಕೊಳ್ಳುತ್ತೇವೆ. ಈಗ ಹಾಕಲಾಗಿರುವ ಕಲ್ಲು ಹಾಗೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಹುಡಾದಲ್ಲಿ ಅರ್ಜಿ ಹಾಕಿ ಅಧಿಕೃತವಾಗಿ ಲೇಔಟ್ ಮಾಡುತ್ತೇವೆ ಎಂದು ಲಿಖಿತ ರೂಪದಲ್ಲಿ ಕೊಟ್ಟರೆ ತೆರವು ಕಾರ್ಯಾಚರಣೆ ನಿಲ್ಲಿಸುತ್ತೇವೆ ಎಂದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಲೇಔಟ್ ಮಾಲೀಕರು ಆ ರೀತಿ ಲಿಖಿತ ರೂಪದಲ್ಲಿ ಭರವಸೆ ಕೊಟ್ಟಿದ್ದರಿಂದ ತೆರವು ಕಾರ್ಯಾಚರಣೆ ನಿಲ್ಲಿಸಲಾಯಿತು.
ಹುಡಾ ಸದಸ್ಯರಾದ ಸುನೀಲ ಮೋರೆ, ಮೀನಾಕ್ಷಿ ವಟಂಮುರಿ, ಆಯುಕ್ತ ನಿಂಗಪ್ಪ ಕುಮ್ಮಣ್ಣವರ, ನಗರ ಯೋಜಕ ವಿವೇಕ ಕಾರೇಕಾರ, ಮುಕುಂದ ಜೋಶಿ ಇನ್ನಿತರ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.

ಶಾಸಕ ಅಮೃತ ದೇಸಾಯಿ ಅವರಿಂದ ದ್ವೇಷದ ರಾಜಕಾರಣ: ಆರೋಪ

ಧಾರವಾಡ: ಅಕ್ರಮ ಬಡಾವಣೆಗಳ ತೆರವುಗೊಳಿಸುವ ವಿಷಯದಲ್ಲಿ ಶಾಸಕ ಅಮೃತ ದೇಸಾಯಿ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಆರೋಪಿಸಿದರು.


ಮಾಳಾಪೂರ ಹದ್ದಿನಲ್ಲಿನ ರಿಸ.ನಂ. 118 ರಲ್ಲಿನ ಸೈಯ್ಯದ ಇಸ್ಮಾಯಿಲ್ ಶೇತಸನದಿ ಎಂಬುವರ 4 ಎಕರೆ 29 ಗುಂಟೆ ಜಮೀನನ್ನು ಕೊಲೆಯಾಗಿ ರುವ ಫ್ರುಟ್ ಇರ್ಫಾನ್ ಖರೀದಿಸಿ, ಜಮೀನು ಮಾಲಿಕರಿಗೆ ಪುಡಿಗಾಸು ನೀಡಿ ಕೈತೆಳೆದುಕೊಂಡಿದ್ದನು. ಕೆಲ ದಿನಗಳ ನಂತರ ಆತನ ಕೊಲೆಯಾ ಯಿತು. ಇದರಿಂದ ಸದರಿ ಜಮೀನನಲ್ಲಿನ ನಿವೇಶನ ಖರೀದಿಸಿದ ಬಡವರು ಸಂಕಷ್ಟಕ್ಕೆ ಸಿಲುಕಿದರು. ನಂತರ ಮೈನುದ್ಧಿನ್ ನದಾಫ್ ಎಂಬುವರು ಮಧ್ಯೆ ಪ್ರವೇಶಿಸಿ, ನಿವೇಶನ ಖರೀದಿಸಿದವರು ಮತ್ತು ಜಮೀನು ಮಾಲಿಕರನ್ನು ಉಳಿಸಲು ಶ್ರಮಿಸಿದರು. ಆಗ ನಗರಾಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಆಡಳಿತ ಅಥವಾ ಶಾಸಕರು ನೆರವಿಗೆ ಬರಲಿಲ್ಲ. ಈಗ ಮೈನುದ್ಧಿನ್ ನದಾಫ್ ಅವರ ತಾಯಿ ಕಾಂಗ್ರೆಸ್ ಪಕ್ಷದಿಂದ ಮಹಾನಗರ ಪಾಲಿಕೆ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.ಅಲ್ಲದೇ ತಮ್ಮ ನೇತೃತ್ವದಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಶಾಸಕ ಅಮೃತ ದೇಸಾಯಿ ಅವರ ಅಸಮಾಧಾನಕ್ಕೆ ಕಾರಣ ವಾಗಿದೆ. ಹೀಗಾಗಿ ಅಕ್ರಮ ಬಡಾವಣೆಗಳ ವಿಷಯವನ್ನು ಇತ್ತೀಚೆಗೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದಾರೆ.
ಶಿಸ್ತುಬದ್ಧ ಮತ್ತು ಕಾನೂನು ಬದ್ಧ ನಿವೇಶನಳ ರಚನೆಗೆ ಸೂಕ್ತ ಕಾಯ್ದೆ ತರಲು ಶಾಸಕರು ಪ್ರಯತ್ನಿಸಲಿ. ಇಲ್ಲದಿದ್ದರೆ ಕ್ರಮ ಬಡಾವಣೆಗಳಲ್ಲಿ ಜೀವನ ಸಾಗಿಸುತ್ತಿರುವ ಧಾರವಾಡ-೭೧ ಕ್ಷೇತ್ರದ ನಗರ ಭಾಗದಲ್ಲಿರುವ 90 ಸಾವಿರ ಜನ ಮತದಾರರು ತಕ್ಕ ಉತ್ತರ ಕೊಡಲಿದ್ದಾರೆ ಎಂದರು.
ನಗರದಲ್ಲಿ ಹಲವಾರು ಅಕ್ರಮ ಬಡಾವಣೆಗಳು ತಲೆ ಎತ್ತುತ್ತಿವೆ. ಬಡವರು ತಮಗೆ ಸೂರುಗಳನ್ನು ಪಡೆಯಲು ಕಡಿಮೆ ದರದಲ್ಲಿ ಖರೀದಿ ಮಾಡುತ್ತಿ ದ್ದಾರೆ. ಆದರೆ, ಅಕ್ರಮ ಬಡಾವಣೆಗಳನ್ನು ನಿರ್ಮಿಸುವ ಮೊದಲು ನಗರಾಭಿವೃದ್ಧಿ ಪ್ರಾಧಿಕಾರ ತಡೆಯಲು ಪ್ರಯತ್ನ ಮಾಡುತ್ತಿಲ್ಲ. ನಿವೇಶನ ರಚಿಸಿ, ಬಡವರಿಗೆ ಮಾರಾಟ ಮಾಡಿದ ಬಳಿಕ ತೆರವು ಗೊಳಿಸಲು ಮುಮದಾಗುತ್ತಿದೆ. ಸೂಕ್ತ ಕಾನೂನು ರಚಿಸಿಬೇಕು ಮತ್ತು ಬಡವರಿಗೆ ನಿವೇಶನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಈ ದಿಸೆಯಲ್ಲಿ ಜನಪ್ರತಿನಿಧಗಳು ಕಾರ್ಯೋನ್ಮುಖವಾಗಬೇಕು ಎಂದು ಆಗ್ರಹಿಸಿದರು.

 

administrator

Related Articles

Leave a Reply

Your email address will not be published. Required fields are marked *