ಹುಬ್ಬಳ್ಳಿ-ಧಾರವಾಡ ಸುದ್ದಿ
ಮೋದಿ ಯೋಜನೆಗೆ ವರ್ಲ್ಡ್ ಸ್ಕ್ವೇರ್ ಬೆಂಬಲ

ಮೋದಿ ಯೋಜನೆಗೆ ವರ್ಲ್ಡ್ ಸ್ಕ್ವೇರ್ ಬೆಂಬಲ

ಹುಬ್ಬಳ್ಳಿ: ಪ್ರಧಾನಿ ಮೋದಿಯವರಿಗೆ ಸರ್ವರಿಗೆ ಸೂರು ಯೋಜನೆಗೆ ವರ್ಲ್ಡ್‌ಸ್ಕ್ವೇರ್ ಪ್ರಾಪರ್ಟಿಸ್ ಬೆಂಬಲವಾಗಿ ನಿಂತು ಮನೆ ನಿರ್ಮಾಣ ಮಾಡಿ, ಕಡಿಮೆ ದರದಲ್ಲಿ ಜನರಿಗೆ ಹಸ್ತಾಂತರಿಸಲು ಮುಂದಾಗಿದೆ ಎಂದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.


ಇಲ್ಲಿನ ಜೆ.ಕೆ.ಸ್ಕೂಲ್ ಹಿಂಭಾಗದ ವರ್ಲ್ಡ್‌ಸ್ಕ್ವೇರ್ ವಸತಿ ಸಮುಚ್ಚಯಕ್ಕೆ ಭೇಟಿ ನೀಡಿ ಪರೀಶೀಲಿಸಿದರಲ್ಲದೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವರ್ಲ್ಡ್‌ಸ್ಕ್ವೇರ್ ವ್ಯವಸ್ಥಾಪಕ ನಿರ್ದೇಶಕ ಯೋಗೇಶ ಹಬೀಬ್ ಅವರ ನೇತೃತ್ವದಲ್ಲಿ ಸಂಸ್ಥೆ ಕಾನೂನು ಬದ್ದ ರೀತಿಯಲ್ಲಿ ಈಗಾಗಲೇ 250 ಮನೆಗಳನ್ನು ನಿರ್ಮಾಣ ಮಾಡಿದೆ. ಇವುಗಳನ್ನು ಡಿಸೆಂಬರ್ ಅಂತ್ಯಕ್ಕೆ ಗ್ರಾಹಕರಿಗೆ ಹಸ್ತಾಂತರ ಮಾಡುತ್ತಿದೆ ಎಂದರು.


ಈ ವಸತಿ ಸಮುಚ್ಛಯದಲ್ಲಿ ಸಿಂಗಲ್, ಡಬಲ್, ತ್ರಿಬಲ್ ಬೆಡ್ ರೂಮ್ ಮನೆಗಳಿವೆ. ಗ್ರಾಹಕರಿಗೆ ಇಷ್ಟವಾಗುವ ರೀತಿಯಲ್ಲಿ ಡಿಸೈನ್ ಕೂಡಾ ಮಾಡಲಾಗಿದ್ದು, ಸಂಸ್ಥೆ ಪ್ರಧಾನ ಮಂತ್ರಿ ವಸತಿ ಯೋಜನೆಯಡಿ ಪ್ರತಿ ಮನೆಗೆ 2.67 ಲಕ್ಷ ಸಬ್ಸಿಡಿ ಕೂಡಾ ನೀಡುತ್ತಿದ್ದು, ಇದು ತಮ್ಮ ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯಲ್ಲಿ ಆಗುತ್ತಿರುವುದು ಖುಷಿ ತಂದಿದೆ ಎಂದರು.


ಮುಂದೆ ಕುಸುಗಲ್ ರಸ್ತೆಯಲ್ಲಿಯೂ ವರ್ಲ್ಡ್‌ಸ್ಕ್ವೇರ್ ಇದೇ ರೀತಿಯ ಪ್ರಾಜೆಕ್ಟ್ ಮಾಡುವ ಉದ್ದೇಶ ಹೊಂದಿದ್ದಾರೆ. ಇಂದು ಈ ಸಮುಚ್ಚಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದರು.
ವರ್ಲ್ಡ್‌ಸ್ಕ್ವೇರ್ ವ್ಯವಸ್ಥಾಪಕ ನಿರ್ದೇಶಕ ಯೋಗೇಶ ಹಬೀಬ್ ಮಾತನಾಡಿ, ಸಾಮಾನ್ಯ ಜನರಿಗೆ ಉತ್ತಮ ಗುಣಮಟ್ಟದ ಸೂರು ಒದಗಿಸುವ ಉದ್ದೇಶದಿಂದ ಸಂಸ್ಥೆ ಈ ಮನೆ ನಿರ್ಮಾಣ ಕಾರ್ಯ ಮಾಡುತ್ತಿದ್ದು, ಈಗಾಗಲೇ ನಿರ್ಮಿಸಿದ ಮನೆಗಳು ಬುಕಿಂಗ್ ಆಗಿದ್ದು, ಸರ್ಕಾರ ಅನುಮತಿ ನಂತರ ಮತ್ತೆ ನೂತನ ಯೋಜನೆ ಪ್ರಾರಂಭಿಸಲಾಗುವುದು. ಅಲ್ಲದೇ ಗ್ರಾಹಕರಿಗೆ ನಾವೇ ಸಾಲಸೌಲಭ್ಯ ಒದಗಿಸಿ ತಿಂಗಳು ಕಂತುಗಳಲ್ಲಿ ಹಣ ಕಟ್ಟುವ ಸವಲತ್ತುಗಳನ್ನು ಕೂಡ ನೀಡುತ್ತಿದ್ದೇವೆ ಎಂದರು.


ವರ್ಲ್ಡ್‌ಸ್ಕ್ವೇರ್ ನಿರ್ದೇಶಕ ಹರ್ಷವರ್ಧನ ಧಾರವಾಡ ಜಿಲ್ಲೆಯಲ್ಲಿ ಏಕಗವಾಕ್ಷಿ (ಸಿಂಗಲ್ ವಿಂಡೋ ಸಿಸ್ಟಮ್) ಪರಿಣಾಮಕಾರಿಯಾಗಿ ಜಾರಿಗೆಗೊಳಿಸುವಂತೆ ಮನವಿ ಮಾಡಿದಾಗ ಸ್ಪಂದಿಸಿದ ಶೆಟ್ಟರ್, ಈ ಬಗ್ಗೆ ಹು-ಡಾ ಮತ್ತು ಪಾಲಿಕೆ ಆಯುಕ್ತರ ಜೊತೆಗೆ ಚರ್ಚೆ ನಡೆಸುವೆ ಎಂದು ತಿಳಿಸಿದರು.
ಶೆಟ್ಟರ್ ಜತೆ ಹುಡಾ ಅಧ್ಯಕ್ಷ ನಾಗೇಶ ಕಲಬುರಗಿ, ಕಿರಣ ಹಬೀಬ್, ಹರ್ಷವರ್ಧನ, ಪ್ರಿನ್ಸ್, ಮಂಜುನಾಥ ರತನ್ ಮುಂತಾದವರಿದ್ದರು.

administrator

Related Articles

Leave a Reply

Your email address will not be published. Required fields are marked *