ಹುಬ್ಬಳ್ಳಿ-ಧಾರವಾಡ ಸುದ್ದಿ
ಡಾ. ಚೆಟ್ಟಿ ವಿರುದ್ಧ ಭುಗಿಲೆದ್ದ ಆಕ್ರೋಶ;  ಕೃಷಿ ವಿ.ವಿ.ಬೋಧನಾ ಸಿಬ್ಬಂದಿಯಿಂದ ಅನಿರ್ಧಿಷ್ಟ ಧರಣಿ

ಡಾ. ಚೆಟ್ಟಿ ವಿರುದ್ಧ ಭುಗಿಲೆದ್ದ ಆಕ್ರೋಶ; ಕೃಷಿ ವಿ.ವಿ.ಬೋಧನಾ ಸಿಬ್ಬಂದಿಯಿಂದ ಅನಿರ್ಧಿಷ್ಟ ಧರಣಿ

ಧಾರವಾಡ : ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಬೋಧನಾ ಸಿಬ್ಬಂದಿಗಳು ಅನಿರ್ಧಿಷ್ಠಾವಧಿ ಧರಣಿ ಆರಂಭಿಸಿದ್ದಾರೆ.
ಕೃಷಿ ವಿಶ್ವವಿದ್ಯಾಲಯದ ಶಿಕ್ಷಕರ ಕಲ್ಯಾಣ ಸಂಘದ ಆಶ್ರಯದಲ್ಲಿ ಆಡಳಿತ ಭವನದ ಎದುರು ಶಿಕ್ಷಕರು ಧರಣಿ ಆರಂಭಿಸಿದರು. ಇದೇ ವೇಳೆ ವಿಶ್ವವಿದ್ಯಾಲಯದ ಅಧೀನದ ಶಿರಸಿ,ಸಂಕೇಶ್ವರ, ಮದರಖಂಡಿ, ಹನಮನಮಟ್ಟಿ, ವಿಜಯಪುರ ಸೇರಿದಂತೆ 34 ಸಂಶೋಧನಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಧರಣಿ ಆರಂಭಿಸುವ ಮೂಲಕ ಕೃಷಿ ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಬೋಧಕ ಸಿಬ್ಬಂದಿ ತಮ್ಮ ಆಕ್ರೋಶ ಹೊರ ಹಾಕಿದರು.


ಬಡ್ತಿ ಇನ್ನಿತರ ವಿಷಯಗಳಲ್ಲಿ ತಾರತಮ್ಯ ನೀತಿ, ಯುಜಿಸಿ ನಿಯಮಗಳ ಪಾಲಿಸದಿರುವುದು, ಅಧಿಕಾರಿಗಳ ನೇಮಕಾತಿಯಲ್ಲಿ ನಿಯಮ ಉಲ್ಲಂಘನೆ, ರಜೆ ಸೌಲಭ್ಯಗಳಲ್ಲಿ ಕೊರತೆ ಸೇರಿದಂತೆ ಇನ್ನೂ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಶಿಕ್ಷಕರು ಆಗ್ರಹಿಸುತ್ತಿದ್ದಾರೆ.


ಶಿಕ್ಷಕರ ಕಲ್ಯಾಣ ಸಂಘದ ಅಧ್ಯಕ್ಷ ಡಾ.ಐ.ಕೆ.ಕಾಳಪ್ಪನವರ, ಪ್ರಧಾನ ಕಾರ್ಯದರ್ಶಿ ಡಾ.ಮಹಾಂತೇಶ ನಾಯಕ, ಡಾ.ವಿಜಯಕುಮಾರ ಎ.ಜಿ., ಡಾ. ಗಿರಿತಮ್ಮನವರ, ಡಾ. ರಾಮನಗೌಡ ಪಾಟೀಲ, ಡಾ. ಕರೀಕಟ್ಟಿ, ಡಾ. ನಾಗಪ್ಪ ಗೋವನಕೊಪ್ಪ, ಡಾ.ಆರ್.ಎಚ್.ಪಾಟೀಲ, ಡಾ.ಮಂಜುಳಾ ಎನ್., ಡಾ.ವೀಣಾ ಜಾಧವ, ಸುರೇಖಾ ಸಂಕನಗೌಡರ ಸೇರಿದಂತೆ ೧೫೦ಕ್ಕೂ ಅಧಿಕ ಶಿಕ್ಷಕರು ಧರಣಿಯಲ್ಲಿ ಭಾಗವಹಿಸಿದ್ದಾರೆ.

ವಿಶ್ವವಿದ್ಯಾಲಯ ಧನಸಹಾಯ ಆಯೋಗ, ಸಕರಾರದ ನಿಯಮಾವಳಿಗಳನ್ನು ಅನುಷ್ಠಾನಗೊಳಿಸುವಲ್ಲಿ ಕುಲಪತಿ ಡಾ.ಎಂ.ಬಿ.ಚೆಟ್ಟಿ ಆಸಕ್ತಿ ತೋರಿಸದಿರುವುದು ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಕೃವಿವಿ ಆಡಳಿತದಲ್ಲಿ ಡಾ.ಚೆಟ್ಟಿ ಅವರ ಕಾರ್ಯನಿರ್ವಹಣೆ ಬಗ್ಗೆ ಬೋಧನಾ ಸಿಬ್ಬಂದಿ ಬೇಸತ್ತು ಈ ಹಿಂದೆಯೇ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದರು. ಪರಿಸ್ಥಿತಿಯ ಗಂಭೀರತೆ ಅರಿತ ಡಾ.ಚೆಟ್ಟಿ ಅವರು, ಬೋಧನಾ ಸಿಬ್ಬಂದಿ ಬಳಿ ಮಾಡಿಕೊಂಡ ವಿನಂತಿ ಪರಿಣಾಮ ಪ್ರತಿಭಟನೆ ರದ್ದಾಗಿತ್ತು.
ಬೋಧನಾ ಮತ್ತು ಅಧಿಕಾರಿಗಳ ವರ್ಗಾವಣೆಯಲ್ಲಿ ಸ್ವಜನಪಕ್ಷಪಾತ, ವಿಶ್ವವಿದ್ಯಾಲಯದ ಆಡಳಿತದಲ್ಲಿ ಸಬಂಧಿಸಿದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಮತ್ತು ಮನಬಂದಂತೆ ಕೈಕೊಳ್ಳುವ ದಿಢೀರ್ ನಿರ್ಣಯಗಳಿಂದ ಬೋಧನಾ ಸಿಬ್ಬಂದಿ ಮಾತ್ರವಲ್ಲದೇ ಬೋಧಕೇತರ ಸಿಬ್ಬಂದಿ ಕೂಡ ರೋಸಿಹೋಗಿದ್ದು, ಈ ಬೆಳವಣಿಗೆ ಭವಿಷ್ಯದಲ್ಲಿ ಯಾವ ಹಂತ ತಲುಪುವುದೋ ಕಾದು ನೋಡಬೇಕಾಗಿದೆ.
ಕುಲಪತಿ ಡಾ.ಚೆಟ್ಟಿ ವಿರುದ್ದ ಮಹಿಳೆಯೊಬ್ಬರ ಮಾನಭಂಗ ಯತ್ನ,ಕೊಲೆ ಬೆದರಿಕೆ ಆರೋಪ ಇದ್ದು ಈಗಾಗಲೇ ಈ ಪ್ರಕರಣ ನ್ಯಾಯಾಲಯದ ಅಂಗಳದಲ್ಲಿದೆ

administrator

Related Articles

Leave a Reply

Your email address will not be published. Required fields are marked *