ಧಾರವಾಡ: ಬಂಧನಕ್ಕೆ ಒಳಗಾಗಿರುವ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್, ಪುತ್ರ ಆರ್ಯನ್ ಖಾನ್ ಪರ ಜಾಮೀನಿಗಾಗಿ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿರುವ ನ್ಯಾಯವಾದಿ ಧಾರವಾಡ ಮೂಲದವರು.
ಆರ್ಯನ್ ಖಾನ್ ಕೇಸ್ ನಡೆಸುತ್ತಿರುವ ಧಾರವಾಡ ಮೂಲದ ವಕೀಲ ಸತೀಶ ಮಾನೆಶಿಂಧೆಯವರು ಸ್ಟಾರ್ ನಟರ ಕೇಸ್ ನಡಿಸೋ ಸ್ಟಾರ್ ಅಡ್ಟೋಕೇಟ್ ಎಂದೇ ಪರಿಚಿತರಾಗಿದ್ದಾರೆ. ಸಂಜಯ ದತ್, ಸಲ್ಮಾನ್ ಖಾನ್ ಮತ್ತು ರಿಯಾ ಚಕ್ರವರ್ತಿಗೆ ಜಾಮೀನು ಕೊಡಿಸಿರುವ ಖ್ಯಾತಿಯನ್ನು ಹೊಂದಿದ್ದಾರೆ.
ಮುಂಬೈ ಬ್ಲಾಸ್ಟ್ ಪ್ರಕರಣದಲ್ಲಿ ಸಿಲುಕಿದ್ದ ಸಂಜಯ ದತ್, ಡ್ರಿಂಕ್ ಆಯಂಡ್ ಡ್ರೈವ್ ಕೇಸ್‌ನಲ್ಲಿ ಸಿಲುಕಿದ್ದ ಸಲ್ಮಾನ್ ಖಾನ್ ಮತ್ತು ಸುಶಾಂತ್ ಸಿಂಗ್ ರಜಪುತ ಕೇಸ್‌ನಲ್ಲಿ ಸಿಲುಕಿದ್ದ ರಿಯಾ ಚಕ್ರವರ್ತಿ ಮೂವರಿಗೂ ಬಿಗ್ ರಿಲೀಫ್ ನೀಡಿದ್ದೇ ವಕೀಲ ಸತೀಶ ಮಾನೆಶಿಂಧೆ. ಈಗ ಶಾರೂಕ್ ಪುತ್ರನ ಪರ ವಾದ ಮಂಡಿಸುತ್ತಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿಯೇ ಕಲಿತ ಸತೀಶ್ ಮಾನೆಶಿಂಧೆ ಇಂದು ರಾಷ್ಟ್ರ ಮಟ್ಟದಲ್ಲಿ ಬೆಳೆದಿರುವ ವಕೀಲರಾಗಿದ್ದಾರೆ. ಗದಗ, ರೋಣ, ವಿಜಯಪುರ, ಧಾರವಾಡ ಎಲ್ಲ ಕಡೆಯೂ ಸರ್ಕಾರಿ ಶಾಲೆ, ಸರ್ಕಾರಿ ಕಾಲೇಜ್‌ಗಳಲ್ಲಿಯೇ ಶಿಕ್ಷಣ ಮುಗಿಸಿದ್ದಾರೆ. ಗದಗ ಮತ್ತು ರೋಣ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ವಿಜಯಪುರ ಸೈನಿಕ ಶಾಲೆಯಲ್ಲಿ ಪ್ರೌಢ ಮತ್ತು ಪಿಯು ಶಿಕ್ಷಣ. ಬಳಿಕ ಧಾರವಾಡದ ಕೆಸಿಡಿಯಲ್ಲಿ ಬಿಕಾಂ ಪದವಿ ಮತ್ತು ಸಿದ್ದಪ್ಪ ಕಂಬಳಿ ಲಾ ಕಾಲೇಜ್‌ನಲ್ಲಿ ಕಾನೂನು ಪದವಿ ಪಡೆದ ಬಳಿಕ ಮುಂಬೈಗೆ ಪ್ರಯಾಣ ಬೆಳೆಸಿದರು.
ಮುಂಬೈನಲ್ಲಿ ರಾಮ ಜೇಠ್ಮಲಾನಿ ಬಳಿ ಹತ್ತು ವರ್ಷ ಪ್ರಾಕ್ಟಿಸ್ ಮಾಡಿರುವ ಸತೀಶ್ ಮಾನಶಿಂಧೆ, ಬಳಿಕ ಪೂರ್ಣ ಪ್ರಮಾಣದ ವಕೀಲರಾದರು. ದೇಶದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಕೆಲವೇ ವಕೀಲರ ಪೈಕಿ ಸತೀಶ್ ಕೂಡ ಒಬ್ಬರಾಗಿದ್ದಾರೆ. ಇಂದಿಗೂ ಧಾರವಾಡ ನಂಟು ಹೊಂದಿರುವ ಹಳೆಯ ಸಂಬಂಧಗಳನ್ನೂ ಇನ್ನೂ ಮರೆತಿಲ್ಲವಾಗಿದೆ. ಮರಿಯದ ಸತೀಶ್, ದೊಡ್ಡ ಮಟ್ಟಕ್ಕೆ ಬೆಳೆದರೂ ಹಳೇ ಸ್ನೇಹಿತರನ್ನು ಮರೆತಿಲ್ಲ.
ವಕೀಲ ಮಾನೆಶಿಂಧೆ ಜೊತೆಗಿನ ನೆನಪು ಮೆಲುಕು ಹಾಕಿರುವ ಗೆಳೆಯರು, ಮುಂಬೈಗೆ ಹೋಗುವ ಗೆಳೆಯರನ್ನೂ ಬ್ಯುಸಿ ಮಧ್ಯೆಯೂ ಭೇಟಿಯಾ ಗೋದನ್ನು ತಪ್ಪಿಸಿಕೊಳ್ಳುವುದಿಲ್ಲ ಎಂದಿದ್ದಾರೆ.