ಹುಬ್ಬಳ್ಳಿ-ಧಾರವಾಡ ಸುದ್ದಿ
ಚೆಟ್ಟಿ ಹಠಮಾರಿತನ: ಮುಂದುವರಿದ ಧರಣಿ

ಚೆಟ್ಟಿ ಹಠಮಾರಿತನ: ಮುಂದುವರಿದ ಧರಣಿ

ಧಾರವಾಡ: ತಮ್ಮ ನ್ಯಾಯಯುತ ಬೇಡಿಕೆÀಗಳಿಗೆ ಕುಲಪತಿ ಡಾ. ಮಹಾದೇವ ಚೆಟ್ಟಿ ಅವರು ಸಕಾರಾತ್ಮಕವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಅನಿರ್ಧಿಷ್ಠಾವಧಿ ಧರಣಿ ಮುಂದುವರೆಸಲು ತೀರ್ಮಾನಿಸಿರುವುದಾಗಿ ಶಿಕ್ಷಕರ ಕಲ್ಯಾಣ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಮಹಾಂತೇಶ ನಾಯಕ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ದಿ.೪ ರಿಂದ ತಾವು ಕೃವಿವಿ ಆಡಳಿತ ಭವನದ ಎದುರು ಧರಣಿ ನಡೆಸುತ್ತಿದ್ದೇವೆ. ಆದಾಗ್ಯೂ ಕುಲಪತಿಗಳು ತಮ್ಮ ಮತ್ತು ಆಡಳಿತ ಮಂಡಳಿಯ ವ್ಯಾಪ್ತಿಯಲ್ಲಿನ ಬೇಡಿಕೆಗಳನ್ನು ಈಡೇರಿಸಲು ಮುಂದಾಗುತ್ತಿಲ್ಲ. ತಾವು ಅ.೪ ರಂದು ಧರಣಿ ಆರಂಭಿಸಿದ ಮರುದಿನ ಕೆಲವು ಬೇಡಿಕೆಗಳಿಗೆ ಕುಲಪತಿಗಳು ಒಪ್ಪಿಗೆ ನೀಡಿದ್ದಾರೆ. ಆದರೆ, ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನವಾಗ ಬೇಕಿರುವ ಬೇಡಿಕೆಗಳನ್ನು ಆಡಳಿತ ಮಂಡಳಿಯ ಸಭೆಯಲ್ಲಿ ಮಂಡಿಸಿ ತೀರ್ಮಾನ ಕೈಕೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದಾರೆ.
ಈ ಸಂಬAಧ ಸಭಾಪತಿ ಬಸವರಾಜ ಹೊರಟ್ಟಿ ಅವರು ನಿನ್ನೆ ಕುಲಪತಿ ಡಾ.ಮಹಾದೇವ ಚೆಟ್ಟಿ ಮತ್ತು ಶಿಕ್ಷಕರ ಸಂಘದ ಪದಾಧಿಕಾರಿಗಳ ಮಧ್ಯೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ನಾಲ್ಕು ಬೇಡಿಕೆಗಳನ್ನು ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಈಡೇರಿಸಲು ಕುಲಪತಿಗಳು ಒಪ್ಪಿದ್ದಾರೆ. ಆದರೆ, ಇತರ ಬೇಡಿಕೆಗಳನ್ನು ಈಡೇರಿಸದೇ ಸತಾಯಿಸುತ್ತಿದ್ದಾರೆ. ಅಲ್ಲದೇ ಭಾರತೀಯ ಅನುಸಂಧಾನ ಪರಿಷತ್, ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ನಿಯಮಗಳನ್ನು ಮನಬಂದAತೆ ಅರ್ಥೈಸುವ ಮೂಲಕ ಶಿಕ್ಷಕರನ್ನು ವಂಚಿಸುತ್ತಿದ್ದಾರೆAದರು.
ನಿನ್ನೆ ಸಭಾಪತಿ ಬಸವರಾಜ ಹೊರಟ್ಟಿ ಅವರ ಮಧ್ಯಸ್ಥಿಕೆಯಲ್ಲಿ ನಡೆದ ಸಭೆಯಲ್ಲಿ ಕೈಕೊಂಡ ತೀರ್ಮಾನಗಳನ್ನು ಅನುಷ್ಠಾನಗೊಳಿಸುವ ತನಕ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ನಾಯಕ ತಿಳಿಸಿದರು. ಡಾ. ಆರ್.ಎಚ್. ಪಾಟೀಲ, ಡಾ. ಎಸ್.ಆರ್. ಹರಿಕಟ್ಟಿ, ಡಾ.ಮಂಜುಳಾ ಎನ್. ಈ ಸಂದರ್ಭದಲ್ಲಿದ್ದರು.
ಸAಘದ ಅಧ್ಯಕ್ಷ ಡಾ.ಐ.ಕೆ. ಕಾಳಪ್ಪನವರ, ಪ್ರಧಾನ ಕಾರ್ಯದರ್ಶಿ ಡಾ.ಮಹಾಂತೇಶ ನಾಯಕ, ಡಾ.ಚಿದಾನಂದ ಮನಸೂರ, ಡಾ.ರಾಮನಗೌಡ ಪಾಟೀಲ, ಡಾ.ಮಂಜುಳಾ ಎನ್., ಡಾ.ಎಸ್.ಎಂ.ಹೊಸಮನಿ, ಡಾ. ಶರಣು ಬಿರಾದಾರ, ಡಾ.ಶೋಭಾ ಇಮ್ಮಡಿ ಮತ್ತಿತರರು ಧರಣಿಯಲ್ಲಿದ್ದರು.

 

administrator

Related Articles

Leave a Reply

Your email address will not be published. Required fields are marked *