ಹುಬ್ಬಳ್ಳಿ-ಧಾರವಾಡ ಸುದ್ದಿ
ಮಾನಭಂಗ, ಕೊಲೆ ಯತ್ನ ಪ್ರಕರಣ: 22ಕ್ಕೆ ತೀರ್ಪು; ಹಲವು ಆರೋಪಗಳ ಸುಳಿಯಲ್ಲಿ ಚೆಟ್ಟಿ!

ಮಾನಭಂಗ, ಕೊಲೆ ಯತ್ನ ಪ್ರಕರಣ: 22ಕ್ಕೆ ತೀರ್ಪು; ಹಲವು ಆರೋಪಗಳ ಸುಳಿಯಲ್ಲಿ ಚೆಟ್ಟಿ!

ಹುಬ್ಬಳ್ಳಿ :  ಉತ್ತರ ಕರ್ನಾಟಕದ ರೈತ ಸಮುದಾಯದ ಪ್ರಾತಿನಿಧಿಕ ಸಂಸ್ಥೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಮಹಾದೇವ ಚೆಟ್ಟಿ ವಿರುದ್ದ ಮಹಿಳೆಯೊಬ್ಬರ ಮೇಲೆ ಮಾನಭಂಗ,ಕೊಲೆಗೆ ಪ್ರಯತ್ನಿಸಿದ ಪ್ರಕರಣದ ವಿಚಾರಣೆ ಮುಕ್ತಾಯಗೊಂಡಿದ್ದು ದಿ.22ಕ್ಕೆ ಆದೇಶ ಹೊರ ಬೀಳಲಿದೆ.

ಧಾರವಾಡದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣ ವಾದ ಪ್ರತಿವಾದಗಳು  ನಿನ್ನೆ ದಿ. 11 ರಂದು ಮುಕ್ತಾಯಗೊಂಡಿದ್ದು ಆದೇಶವನ್ನು 22ರಂದು ಪ್ರಕಟಿಸುವದಾಗಿ ಹೇಳಲಾಗಿದೆ.

2014ರಲ್ಲಿ ಧಾರವಾಡ ಉಪನಗರ ಠಾಣೆಯಲ್ಲಿ  ಬಸವರಾಜ ಗಿರೆಣ್ಣವರ, ಮಂಜುನಾಥ ಗಿರೆಣ್ಣವರ, ಅಭಿನೇತ್ರಿ ಮಹಾದೇವ ಚೆಟ್ಟಿ, ಮಹಾದೇವ ಚೆಟ್ಟಿ ಸೇರಿದಂತೆ 10 ಜನರ ವಿರುದ್ಧ  ಎಫ್‌ಐಆರ್ (ನಂ. 0159/2014) ದಾಖಲಾಗಿತ್ತು. ನಟಾಲಿಯಾ ಅಲಿಯಾಸ್ ನೇತ್ರಾ ಬಸವರಾಜ ಗಿರೆಣ್ಣವರ ದೂರು ದಾಖಲಿಸಿದ್ದರಲ್ಲದೇ  ತಮ್ಮ ಪತಿ,ಮೈದುನರು ಹಾಗೂ ಹಾಲಿ ಕೃಷಿ ವಿ.ವಿ.ಕುಲಪತಿ ಮಹಾದೇವ ಚೆಟ್ಟಿ ಮುಂತಾದವರ ಕುಮ್ಮಕ್ಕಿನಿಂದ ನಿರಂತರ ದೈಹಿಕ ಹಲ್ಲೆ, ಮಾನಸಿಕ ಹಿಂಸೆ, ವರದಕ್ಷಿಣೆ ನೀಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ಬೈದಾಡಿ ರಿವಾಲ್ವರ್ ತೋರಿಸಿ ಕೊಲೆಗೆ ಪ್ರಯತ್ನಿಸಿರುವುದಾಗಿ ಹೇಳಿದ್ದಾರೆ.

ಮಹಾದೇವ ಚೆಟ್ಟಿಯ ಪತ್ನಿ ಅಭಿನೇತ್ರಿ ಚೆಟ್ಟಿ ಮಧ್ಯಸ್ಥಿಕೆಯಲ್ಲಿ ತಮ್ಮ ವಿವಾಹ 19-06-2011ರಂದು ಬಸವರಾಜ ಗಿರೆಣ್ಣವರ ಆಗಿದ್ದು ತದನಂತರ ತನ್ನ ಪತಿ ಇತರರ ಕುಮ್ಮಕ್ಕಿನಿಂದ ಕೊಲೆಗೆ ಯತ್ನಿಸಿದ್ದು ಮನೆಯಲ್ಲಿ ಯಾರೂ ಇಲ್ಲದೆ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ಚಾಲೂ ಮಾಡಿ ಕೊಲೆಗೆ ಸಹ ಯತ್ನಿಸಿದ್ದಾಗಿ ಆರೋಪಿಸಿದ್ದರು.

ಕೆಳ ಹಂತದ ನ್ಯಾಯಾಲಯದಲ್ಲಿ  ಪ್ರಕರಣ ಮುಚ್ಚಿ ಹಾಕುವ ಯತ್ನ ಆರೋಪಿಗಳು ನಡೆಸಿದ್ದರೂ ನಟಾಲಿಯಾ ಅವರು ನಾಲ್ಕನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರಿಂದ ಪ್ರಕರಣಕ್ಕೆ ಮತ್ತೆ ಮರುಜೀವ ಬಂದು ವಿಚಾರಣೆಗೆ ಬಂದಿತ್ತು.ಅಲ್ಲದೇ ಪ್ರಕರಣದಲ್ಲಿ ಕುಲಪತಿಯವರಿಗೆ ಸಮನ್ಸ ಸಹ ಜಾರಿಯಾಗಿತ್ತು.

ಹಲವು ಆರೋಪಗಳ ಸುಳಿಯಲ್ಲಿ ಚೆಟ್ಟಿ!

1989ರಲ್ಲಿ ನಿಗಧಿತ ವಿದ್ಯಾರ್ಹತೆಯಿಲ್ಲದೇ ಪರಿಶಿಷ್ಠರಿಗೆ ಮೀಸಲಾಗಿದ್ದ ಸಹ ಪ್ರಾಧ್ಯಾಪಕ ಹುದ್ದೆ ಪಡೆದಿದ್ದಾರೆಂಬ ಆರೋಪ ಚೆಟ್ಟಿಯವರ ಮೇಲಿದ್ದು ಕೊಲೆ ಯತ್ನದಂತ ಗಂಭೀರ ಪ್ರಕರಣವಿದ್ದರೂ  ಅದನ್ನು ಮುಚ್ಚಿಟ್ಟು ಕುಲಪತಿ ಹುದ್ದೆಗೆ ಪರಿಗಣಿಸಲಾಯಿತೆಂಬುದನ್ನು ಈಗಾಗಲೇ ಕೃಷಿ ವಿವಿ ಎಸ್‌ಸಿ ಎಸ್ ಟಿ ನೌಕರರ ಸಂಘದ ಪತ್ರಿಕಾಗೋಷ್ಠಿಯ ಮೂಲಕ  ಜಾತಕ ಬಹಿರಂಗಪಡಿಸಿದ್ದಾರೆ.

ಕೆಲ ತಿಂಗಳುಗಳ ಹಿಂದೆ  ಕಾರವಾರ ರಸ್ತೆಯಲ್ಲಿ ಮಹಿಳಾ ಉದ್ಯೋಗಿಗಳಿಬ್ಬರು ಮೃತ ಪಟ್ಟ ಘಟನೆಯಲ್ಲೂ ಕೃಷಿ ವಿ.ವಿ.ಕುಲಪತಿ ಹೆಸರು ತಳುಕು ಹಾಕಿಕೊಂಡು ಅನೇಕ ಸಂಘಟನೆಗಳು ಕುಲಪತಿ ಹಠಾವೋ ವಿ.ವಿ.ಬಚಾವೋ ಆಂದೋಲನಕ್ಕೆ ಮುಂದಾಗಿದ್ದವು.ಈಗ ಕುಲಪತಿಯವರ ಹಠಮಾರಿ ಧೋರಣೆಯಿಂದ ವಿ.ವಿ. ಶಿಕ್ಷಕರ ಧರಣಿ ಸಹ ಮುಂದುವರಿಯುವಂತಾಗಿದೆ.

administrator

Related Articles

Leave a Reply

Your email address will not be published. Required fields are marked *