ಹುಬ್ಬಳ್ಳಿ: ನಿಷೇಧಿತ ಪ್ಲಾಸ್ಟಿಕ್ ಯಾಕೆ ತರಿಸುತ್ತಿದ್ದೀರಿ ಎಂದು ಹೇಳಿ ಟ್ರಾನ್ಸಪೋರ್ಟ ಕಂಪನಿಯೊಂದಕ್ಕೆ ನಗರದ ಕಾರ್ಮಿಕ ಮುಖಂಡರೊಬ್ಬರು ಬೆದರಿಕೆಯ ಗಾಳಿ ಪಟ ಹಾರಿಸುತ್ತಿರುವ ವಾಸನೆ ಹೇಸಿಗೆ ಮಡ್ಡಿಯನ್ನು ದಾಟಿ ಈಚೆ ಬರಲಾರಂಬಿಸಿದೆ.
ಅಂಚಟಗೇರಿ ರಸ್ತೆಯಲ್ಲಿರುವ ಟ್ರಾನ್ಸಪೋರ್ಟ್ ಕಂಪನಿಯೊಂದಕ್ಕೆ ಕಾರ್ಮಿಕ ಮುಖಂಡರ ನೇತೃತ್ವದ ’ಪಟಾಲಂ’ ಬೆದರಿಕೆ ಹಾಕಿದೆ ಎನ್ನಲಾಗುತ್ತಿದ್ದು ಒಂದು ವೇಳೆ ತಮ್ಮ ಮಾತಿಗೆ ಬಗ್ಗದೇ ಹೋದಲ್ಲಿ ಪ್ರತಿಭಟನೆ ಮಾಡುವುದಾಗಿ ಹೇಳಿದ್ದು ಭಾರೀ ದೊಡ್ಡ ಮೊತ್ತಕ್ಕೆ ಸಹ ಡಿಮ್ಯಾಂಡ್ ಇಟ್ಟಿದೆ ಎಂಬ ಗುಸು ಗುಸು ದಟ್ಟವಾಗಿದೆ.
ಈಗಾಗಲೇ ಈ ಪ್ರಕರಣದಲ್ಲಿ ’ಮದ್ಯವರ್ತಿ’ಗಳ ಎಂಟ್ರಿಯಾಗಿದ್ದು ವ್ಯವಹಾರ ಮುಗಿಸುವ ಯತ್ನ ಸಹ ನಡೆದಿದೆ ಎನ್ನಲಾಗುತ್ತಿದ್ದು, ಎಷ್ಟಕ್ಕೆ ವಿಜಯಪತಾಕೆ ಧಕ್ಕಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಈಗಾಗಲೇ ಅವಳಿನಗರದಲ್ಲಿ ಪ್ಲಾಸ್ಟಿಕ್ ನಿಷೇಧಿಸಲ್ಪಟ್ಟಿದ್ದರೂ ಸದ್ದಿಲ್ಲದೇ ಈ ಮಾಫಿಯಾ ವ್ಯಾಪಕವಾಗಿ ಮುಂದುವರಿದಿದ್ದು, ಪಂಚ ಠಾಣೆಗಳಿಗೆ, ಅಲ್ಲದೇ ಪಾಲಿಕೆಯ ಅಧಿಕಾರಿಗಳಿಗೆ ಮೂರು ತಿಂಗಳಿಗೊಮ್ಮೆ ಉಡಿ ತುಂಬುವ ಕಾಯಕವೂ ನಿಯಮಿತವಾಗಿ ನಡೆದಿದೆ ಎನ್ನಲಾಗುತ್ತಿದೆ.
ನಗರದಲ್ಲಿ ಸುಮಾರು ೩೫ಕ್ಕೂ ಹೆಚ್ಚು ಪ್ಲಾಸ್ಟಿಕ್ ಹೋಲಸೇಲ್ ವ್ಯಾಪಾರಿಗಳಿದ್ದಾರೆನ್ನಲಾಗುತ್ತಿದೆ.