ಹುಬ್ಬಳ್ಳಿ-ಧಾರವಾಡ ಸುದ್ದಿ
ಆರ್‌ಎಸ್‌ಎಸ್ ಅಲ್ಪಸಂಖ್ಯಾತ ವಿರೋಧಿ: ಸಿದ್ದರಾಮಯ್ಯ

ಆರ್‌ಎಸ್‌ಎಸ್ ಅಲ್ಪಸಂಖ್ಯಾತ ವಿರೋಧಿ: ಸಿದ್ದರಾಮಯ್ಯ

ಹುಬ್ಬಳ್ಳಿ: ದೇಶ ವಿಭಜನೆ, ಸಮಾಜ ವಿಭಜನೆ ಕೆಲಸವನ್ನು ಆರ್.ಎಸ್.ಎಸ್ ಮಾಡುತ್ತಿದೆ.ಅದು ಕೋಮುವಾದಿ ಸಂಘಟನೆ.ಮನುಸ್ಮೃತಿ, ಶ್ರೇಣಿಕೃತ ಸಂಘಟನೆ ಹಾಗಾಗಿ 1971ರಿಂದಲೂ ವಿರೋಧಿಸುತ್ತಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.


ನಗರದಲ್ಲಿಂದು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದ ಅವರು ಆರ್ ಎಸ್ ಎಸ್ ಅಲ್ಪಸಂಖ್ಯಾತ ವಿರೋಧಿ.ಆ ಪಕ್ಷದಲ್ಲಿ ಒಬ್ಬ ಮುಸ್ಲಿಂ ಎಂ.ಎಲ್.ಎ ಇದ್ದಾರಾ ಎಂದು ಪ್ರಶ್ನಿಸಿದರಲ್ಲದೇ, ಈಶ್ವರಪ್ಪನಂತವರು, ಮುಸ್ಲಿಂರು ಬಂದು ಆಫೀಸ್‌ನಲ್ಲಿ ಕಸ ಹೊಡಿಲಿ ಅಂತಾರೆ ಸಂವಿಧಾನ ಬದಲಾವಣೆ ಮಾಡ್ತಿನಿ ಅಂತಾರೆ ಸಂವಿಧಾನದ ವಿರುದ್ಧ ಇರುವವರು ಆರ್.ಎಸ್.ಎಸ್ ನವರು ಎಂದರು.

ಸಂಗೂರು ಮೈಶುಗರ್ ಕಾರ್ಖಾನೆ ಬಗೆಗೆ ಕೇಳಿದಾಗ ಆ ಕಾರ್ಖಾನೆಗೆ ಅಧ್ಯಕ್ಷರಾಗಿದ್ದವರು ಯಾರು ಎಂದು ಪ್ರಶ್ನಿಸಿದರಲ್ಲದೇ ಅಧ್ಯಕ್ಷ ಉದಾಸಿ, ಸಜ್ಜನ ಉಪಾಧ್ಯಕ್ಷರಾಗಿದ್ದವರು
ಕಾಂಗ್ರೆಸ್ ನವರು ಯಾಕೆ ಕಾರ್ಖಾನೆ ಹಾಳು ಮಾಡ್ತಾರೆ. ರೈತರಿಗೆ ಅನ್ಯಾಯ ಆಗಿದೆ, ಅದಕ್ಕೆ ಯಾರು ಹೊಣೆ? ಎಂದರು.
ಪೆಟ್ರೋಲ್, ಡಿಸೇಲ್ ದರ ಹೆಚ್ಚಳ ವಿಚಾರದಲ್ಲಿ ದರ ಹೆಚ್ಚಳ ಬಿಸಿ ನಿಮಗೆ ತಟ್ಟಿಲ್ವಾ? ಎಂದು ಕೇಳಿದರಲ್ಲದೇ ಟ್ಯಾಕ್ಸ್ ಹಾಕೋದನ್ನು ಕಡಿಮೆ ಮಾಡಿ ಎಂದರು.
ಸೋನಿಯಾ ಗಾಂಧಿಯವರು ಎಐಸಿಸಿ ಎಲೆಕ್ಷನ್ ಘೋಷಣೆ ಮಾಡಿದ್ದಾರೆ, ದಿನಾಂಕ ಎಲ್ಲ ಮಾಡಿದ್ದಾರೆ. ರಾಹುಲ್ ಗಾಂಧಿ ಕೂಡ ತಮ್ಮ ಅಭಿಪ್ರಾಯ ಹೇಳಿದ್ದಾರೆ.
ರಾಹುಲ್ ಗಾಂಧಿ ಅಧ್ಯಕ್ಷರಾಗಲಿ ಎಂದು ಈಗಾಗಲೇ ಹೇಳಿದ್ದೇನೆ.ಈಗಲು ಅದನ್ನೇ ಹೇಳುತ್ತೇನೆ.ಎಂದರಲ್ಲದೇ ಕೇಂದ್ರ ರಾಜಕೀಯದತ್ತ ತಮಗೆ ಆಸಕ್ತಿ ಇಲ್ಲ.ರಾಜ್ಯದಲ್ಲೇ ಸಂತೋಷವಾಗಿದ್ದು, ಇಲ್ಲಿಯೇ ಮುಂದುವರಿಯುವೆ ಎಂದರು.
ಈ ಸಂದರ್ಭದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ, ಮುಖಂಡರಾದ ಅಲ್ತಾಫ್ ಹಳ್ಳೂರ,ಡಾ.ಶರಣಪ್ಪ ಕೊಟಗಿ, ಸದಾನಂದ ಡಂಗನವರ, ಇದ್ದರು.

ಪಕ್ಷದ ಕೆಲಸ, ಮನೆ ಕೆಲಸವವಲ್ಲ

ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಪ್ರಚಾರಕ್ಕೆ ಬರಬಹುದು, ಬರೋದಕ್ಕೆ ಬೇಡ ಯಾರು ಅಂದಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಎಲ್ಲರಿಗೂ ಕರೆದಿದ್ದೇವೆ, ಕಾಂಗ್ರೆಸ್ ಕಚೇರಿಯಿಂದ ಎಲ್ಲರಿಗೂ ಹೇಳಲಾಗಿದೆ. ಇದು ಯಾರ ಮನೆ ಕೆಲಸ ಅಲ್ಲ, ಪಕ್ಷದ ಕೆಲಸ ಎಂದು ಹೇಳಿದರು.

administrator

Related Articles

Leave a Reply

Your email address will not be published. Required fields are marked *