ಹುಬ್ಬಳ್ಳಿ-ಧಾರವಾಡ ಸುದ್ದಿ
ಭೈರಿಕೊಪ್ಪ ಬಳಿ ಮತಾಂತರ ಯತ್ನ?; ಠಾಣೆಗೆ ಫಾದರ್ ಕರೆ ತಂದ ಸ್ಥಳೀಯರು

ಭೈರಿಕೊಪ್ಪ ಬಳಿ ಮತಾಂತರ ಯತ್ನ?; ಠಾಣೆಗೆ ಫಾದರ್ ಕರೆ ತಂದ ಸ್ಥಳೀಯರು

ಹುಬ್ಬಳ್ಳಿ: ಭೈರಿದೇವರಕೊಪ್ಪದ ಬೆಲ್ಲದ ಶೋರೂಮ್ ಹಿಂಬಾಗದ ಸೆಂಟ್ ಜಾನ್ ಪ್ರಾರ್ಥನಾ ಮಂದಿರದಲ್ಲಿ ಮತಾಂತರಕ್ಕೆ ಯತ್ನಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ಫಾದರ್ ಸೋಮಲಿಂಗಪ್ಪ ಎಂಬವರನ್ನು ನವನಗರ ಠಾಣೆಗೆ ಪೊಲೀಸರು ಕರೆ ತಂದಿದ್ದಾರೆನ್ನಲಾಗಿದೆ.


ಇಲ್ಲಿನ ವಿಶ್ವನಾಥ ಬನ್ನೂರ ಸಹಿತ 7-8 ಜನರಿಗೆ ರವಿವಾರದ ವಿಶೇಷ ಪ್ರಾರ್ಥನೆಗೆ ಕರೆದಿದ್ದು ಬಂದ ನಂತರ ನೀವೆಲ್ಲ ಕೆಳ ಜಾತಿಯವರಿದ್ದು ನಿಮ್ಮನ್ನು ಉನ್ನತ ಜಾತಿಗೆ ಸೇರಿಸಲಾಗುವುದು ಎಂದು ಹೇಳಿದಾಗ ಕೆಲವರು ವಿರೋಧ ವ್ಯಕ್ತಪಡಿಸಿ ಸ್ವತಃ ಫಾದರ್‌ನನ್ನೆ ನವನಗರ ಠಾಣೆಗೆ ಕರೆತಂದಾಗ ಕೆಲ ಸ್ಥಳೀಯ ಬಿಜೆಪಿ ಮುಖಂಡರು ಅವರಿಗೆ ಬೆಂಬಲ ವ್ಯಕ್ತಪಡಿಸಿ ಜಾತಿ ನಿಂದನೆ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.


ಪೊಲೀಸರು ಈ ಬಗ್ಗೆ ಎರಡು ಕಡೆಯವರ ವಾದ ಆಲಿಸುತ್ತಿದ್ದಾರೆ. ಈಗಾಗಲೇ ಅವಳಿನಗರದಲ್ಲಿ 112 ಕಡೆ ಇಂತಹ ಪ್ರಾರ್ಥನೆಗಳು ನಡೆಯುತ್ತಿದ್ದು ಮತಾಂತರಗೊಂಡವರಿಂದಲೇ ಇಂತಹ ಕೃತ್ಯ ನಡೆಯುತ್ತಿದೆ ಎನ್ನಲಾಗಿದೆ.

ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಿ

ಗದಗ: ದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ರಾಜ್ಯ ಹಾಗೂ ಕೇಂದ್ರ ಸರಕಾರವನ್ನು ಆಗ್ರಹಿಸಿದರು.


ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುತಾಲಿಕ್ ಅವರು, ಇಡೀ ರಾಜ್ಯಾದ್ಯಂತ ದೊಡ್ಡ ಪ್ರಮಾಣದಲ್ಲಿ ಕ್ರಿಶ್ಚಿಯನ್ ಮತಾಂತರ ಘಟನೆ ಕಂಡು ಬರುತ್ತಿವೆ. ಯಾವುದೇ ಭಯವಿಲ್ಲದೆ ನಿರಂತರವಾಗಿ ಕ್ರಿಶ್ಚಿಯನ್ ಮತಾಂತರ ನಡೆಯುತ್ತಿರೋದು ಅಪಾಯಕಾರಿಯಾಗಿದೆ ಎಂದರು.
ಅಪಾಯದ ಸ್ಥಿತಿಯನ್ನು ಆರ್‌ಎಸ್‌ಎಸ್ ಪ್ರಮುಖ ಭಾಗವತ್ ಸಹ ಉಲ್ಲೇಖ ಮಾಡಿದ್ದಾರೆ. ಹೀಗಾಗಿ ಮತಾಂತರ ನಿಷೇಧ ಕಾಯ್ದೆ ಜಾರಿ ಯಾಗುವ ಅವಶ್ಯಕತೆ ಇದ್ದು, ಇದು ಗಂಭೀರವಾದ ವಿಷಯವಾಗಿದೆ. ಇದು ಮತಾಂತರ ಅಲ್ಲ ದೇಶಾಂತರ ಅಂತ ಸ್ವಾಮಿ ವಿವೇಕಾನಂದರು ಹೇಳಿದ್ದರು.
ಲಂಬಾಣಿ ತಾಂಡಾಗಳನ್ನೇ ಮತಾಂತರಗೊಳಿಸಿರುವ ಉದಾಹರಣೆ ಇವೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.
ಟಿಪ್ಪು ಜಯಂತಿ ವಿಚಾರವಾಗಿ ಸಿಎಂ ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮುತಾಲಿಕ್ ಅವರು, ಸಿಎಂಇಬ್ರಾಹಿಂ ಯಾವಾಗ ಏನೇನೂ ಹೇಳ್ತಾರೆ ಅನ್ನೋದಕ್ಕೆ ವಿಚಿತ್ರ ವ್ಯಕ್ತಿ. ತಮ್ಮ ಸ್ವಾರ್ಥ ಕ್ಕಾಗಿ ಏನೇನೂ ಹೇಳ್ತಾರೆ ಅನ್ನೋದು ಗೊತ್ತಿಲ್ಲ. ಟಿಪ್ಪು ಜಯಂತಿ ರಾಜಕೀಯ ಕಾರಣಕ್ಕೆ ಮಾಡ್ತಿರೋದು ಶತಸಿದ್ಧ. ಮುಸ್ಲಿಂ ಓಟ್ ಬ್ಯಾಂಕ್ ಗಾಗಿಯೇ ಕಾಂಗ್ರೆಸ್ ಏನ್ ಬೇಕಾದರೂ ಮಾಡುತ್ತೆ. ಇಬ್ರಾಹಿಂ ಹೇಳಿರೋದು ಹೊಸದೇನಲ್ಲ ಎಂದರು.
ಆರ್‌ಎಸ್‌ಎಸ್ ಅನ್ನು ತಾಲಿಬಾನ್‌ಗೆ ಹೋಲಿಕೆ ಮಾಡೋದು ಮೂರ್ಖತನ. ತಾಲಿಬಾನ್‌ಗೆ ಹಿಂಸೆಯೇ ಪ್ರಧಾನ ಆದ್ಯತೆ. ಆದರೆ, ಆರ್‌ಎಸ್‌ಎಸ್ ೯೬ ವರ್ಷ ನಿರಂತರವಾಗಿ ಯಾವುದೇ ಅಪರಾಧ ಕೃತ್ಯಗಳಿಲ್ಲದೇ ಶಿಸ್ತು ಬದ್ಧ ವಾಗಿ ಕೆಲಸ ಮಾಡುತ್ತಿದೆ. ಇದಕ್ಕೆ ಹೋಲಿಕೆ ಮಾಡೋದು ಮೂರ್ಖತನ
ಇದು ಹಾಸ್ಯಾಸ್ಪದ ಅಷ್ಟೇ ಎಂದು ಹೇಳಿದರು.

administrator

Related Articles

Leave a Reply

Your email address will not be published. Required fields are marked *