ಹುಬ್ಬಳ್ಳಿ-ಧಾರವಾಡ ಸುದ್ದಿ

ಸ್ಥಳೀಯ ಸಂಸ್ಥೆ: ಕೈ, ಕಮಲದ ಪಾಳೆಯದಲ್ಲಿ ಬಿರುಸು ಎರಡೂ ಪಕ್ಷಗಳಿಂದಲೂ ತಲಾ 1 ಅಭ್ಯರ್ಥಿ ಸಾಧ್ಯತೆ

 

ಹುಬ್ಬಳ್ಳಿ: ಅವಿಭಾಜ್ಯ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿAದ ಪರಿಷತ್‌ನ ಎರಡು ಸ್ಥಾನಗಳಿಗೆ ಡಿ.10 ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಣೆ ಮಾಡಿದ ಬೆನ್ನ ಹಿಂದೆಯೇ ಬಿಜೆಪಿ ಹಾಗೂ ಕಾಂಗ್ರೆಸ್‌ಗಳಲ್ಲಿ ಚಟುವಟಿಕೆ ತೀವ್ರಗೊಂಡಿದೆ.

ಹಾಲಿ ಸದಸ್ಯ ಪ್ರದೀಪ ಶೆಟ್ಟರ್ ಹಾಗೂ ಇತ್ತೀಚೆಗೆ ಹಾನಗಲ್ ಉಪ ಸಮರದಲ್ಲಿ ಗೆಲುವು ಸಾಧಿಸಿರುವ ಶ್ರಿನಿವಾಸ ಮಾನೆ ಇವರು ಕಳೆದ ಬಾರಿ ಆಯ್ಕೆಯಾದ ಸ್ಥಾನಗಳಿಗೆ ಈ ಬಾರಿ ಹಲವು ಆಕಾಂಕ್ಷಿಗಳಿದ್ದು, ಎರಡೂ ಪಕ್ಷಗಳೂ ತಲಾ ಒಂದೇ ಅಭ್ಯರ್ಥಿಗಳನ್ನು ಹಾಕುವ ಸಾಧ್ಯತೆ ದಟ್ಟವಾಗಿದೆ.

ಮೊದಲ ಬಾರಿಗೆ ಕಾಂಗ್ರೆಸ್ ಪಾಳೆಯದಲ್ಲಿ ಅವಿಭಾಜ್ಯ ಧಾರವಾಡ ಜಿಲ್ಲೆಯಿಂದ ಅಲ್ಪಸಂಖ್ಯಾತರಿಗೆ ಅವಕಾಶ ನೀಡಬೇಕೆಂಬ ಕೂಗು ಕೇಳಿ ಬಂದಿದ್ದು ಈಗಾಗಲೇ ಹಲವು ಆಕಾಂಕ್ಷಿಗಳು ತಮ್ಮ ಅರ್ಜಿ ಸಲ್ಲಿಸಿದ್ದಾರೆ.

  1. ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಧಾರವಾಡ ಅಂಜುಮನ್ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಮಾಜಿ ಪಾಲಿಕೆ ಸದಸ್ಯ ಅಲ್ತಾಫ್ ನವಾಜ್ ಕಿತ್ತೂರ, ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಹುಬ್ಬಳ್ಳಿ ಅಂಜುಮನ್ ಅಧ್ಯಕ್ಷ ಮಹ್ಮದ ಯೂಸೂಫ್ ಸವಣೂರ,   ರಾಜ್ಯ ಉಪಾಧ್ಯಕ್ಷ ಅಲ್ಪ ಸಂಖ್ಯಾತರ ವಿಭಾಗ ಕೆಪಿಸಿಸಿ ಧಾರವಾಡದ ಇಮ್ರಾನ್ ಕಳ್ಳಿಮನಿ, ಸಿ.ಎಸ್. ಮೆಹಬೂಬ ಭಾಷಾ, ಐ.ಜಿ. ಸನದಿ, ಶಾಕೀರ ಸನದಿ ಮುಂತಾದವರು ಆಕಾಂಕ್ಷಿಗಳಾಗಿದ್ದು, ಅಲ್ಲದೇ ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ ಹೆಸರು ಕೇಳಿ ಬರಲಾರಂಭಿಸಿದೆ. ಅಲ್ಪಸಂಖ್ಯಾತರ ಹೊರತು ಪಡಿಸಿ ಹಿರಿಯ ಮುಖಂಡ ಶರಣಪ್ಪ ಕೊಟಗಿ, ಅರವಿಂದ ಕಟಗಿ, ಮಾಜಿ ಸಚಿವ ಬಸವರಾಜ ಶಿವಣ್ಣವರ, ಎಂ.ಎಂ .ಹಿರೆಮಠ, ಆನಂದ ಗಡ್ಡದೇವರಮಠ, ಸದಾನಂದ ಡಂಗನವರ, ಸಚಿನ್ ಪಾಟೀಲ್ ಮುಂತಾದವರು ಅವಕಾಶ ಕೇಳಿದ್ದಾರೆ.

ಬಿಜೆಪಿಯಲ್ಲಿ ಹಾಲಿ ಸದಸ್ಯ, ಮಾಜಿ ಸಿಎಂ ಜಗದೀಶ ಶೆಟ್ಟರ್ ಸಹೋದರ ಪ್ರದೀಪ ಶೆಟ್ಟರ್‌ಗೆ ಬಹುತೇಕ ಟಿಕೆಟ್ ನಿಕ್ಕಿಯಾಗಿದ್ದರೂ, ಹಲವರು ಬೇಡಿಕೆ ಮಂಡಿಸಿದ್ದಾರೆ.

ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಮಾಜಿ ಶಾಸಕ ಅಶೋಕ ಕಾಟವೆ, ಗದಗಿನ ಎಮ್.ಎಸ್. ಕರಿಗೌಡರ, ಹಾವೇರಿಯ ಪಾಲಾಕ್ಷಗೌಡ ಪಾಟೀಲ, ಭೋಜರಾಜ ಕರೂದಿ, ಸಿದ್ದರಾಜ ಕಲಕೋಟಿ ಮುಂತಾದವರು ತಮಗೆ ಅವಕಾಶಕ್ಕಾಗಿ ಕೋರಿದ್ದಾರೆ.

ನಿನ್ನೆ ಕೋರ ಕಮೀಟಿ ಸಮಿತಿ ಸಭೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಪ್ರಸ್ತಾವನೆಯಾಗಿದ್ದರೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲವೆನ್ನಲಾಗಿದೆ.

ಮತದಾನದಲ್ಲಿ ಗ್ರಾ.ಪಂ. ಸದಸ್ಯರೇ ನಿರ್ಣಾಯಕರಾಗಿದ್ದು, ಅತಿ ಹೆಚ್ಚು ಮತದಾರರು ಹಾವೇರಿಯಲ್ಲಿದ್ದಾರೆ.

ಕೈ-ಕಮಲ ಪಾಳೆಯದಲ್ಲಿ ಚಟುವಟಿಕೆ ಬಿರುಸುಗೊಂಡಿದ್ದು, 16 ರಿಂದಲೇ ನಾಮಪತ್ರ ಸಲ್ಲಿಸುವ ಅವಕಾಶ ಕಲ್ಪಿಸಿದ್ದು, ಡಿ. 10 ಕ್ಕೆ ಮತದಾನ ನಡೆಯಲಿದ್ದು, ಮೊದಲಿಗಿಂತ ಕಡಿಮೆ ಅವಧಿ ನೀಡಿದ್ದು ಮೂರ್‍ನಾಲ್ಕು ದಿನಗಳಲ್ಲಿ ಎರಡು ಪಕ್ಷದ ಅಭ್ಯರ್ಥಿಗಳು ಅಂತಿಮಗೊಳ್ಳುವ ಸಾಧ್ಯತೆ ಇದೆ.

administrator

Related Articles

Leave a Reply

Your email address will not be published. Required fields are marked *