ಹುಬ್ಬಳ್ಳಿ-ಧಾರವಾಡ ಸುದ್ದಿ

ಮಧುಮೇಹ ಜಾಗೃತಿಗೆ ನಡಿಗೆ

ಧಾರವಾಡ: ವಿಶ್ವ ಮಧುಮೇಹ ದಿನದ ಅಂಗವಾಗಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಧಾರವಾಡ ಘಟಕದ ವತಿಯಿಂದ ನಗರದಲ್ಲಿ ರವಿವಾರ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯ ನಡಿಗೆ ಮತ್ತು ಓಟ ಹಮ್ಮಿಕೊಳ್ಳಲಾಗಿತ್ತು.


ಮಧುಮೇಹ ಕಾಯಿಲೆ ಹಾಗೂ ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ 3 ಕಿ.ಮೀ. ನಡಿಗೆ ಮತ್ತು 5 ಕಿ.ಮೀ ಓಟ ಹಮ್ಮಿಕೊಳ್ಳಲಾಗಿತ್ತು. ನಗರದ ಐಎಂಎ ಸಭಾಭವನದಿಂದ ಬೆಳಗ್ಗೆ ಆರಂಭವಾದ ನಡಿಗೆ ಮತ್ತು ಓಟವು ಸಪ್ತಾಪೂರ ಬಾವಿ ಮೂಲಕ ಶ್ರೀನಗರ ಸರ್ಕಲ್ ತಲುಪಿ ಬಳಿಕ ಐಎಂಎ ಸಭಾಭವನಕ್ಕೆ ಮರಳಿತು.


ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಮಾತ್ರ ಭಾಗವಹಿಸಿದ್ದ ನಡಿಗೆ ಮತ್ತು ಓಟದ ಸಂದರ್ಭದಲ್ಲಿ ಮಧುಮೇಹದ ಬಗ್ಗೆ ಜಾಗೃತಿ ಮತ್ತು ನಿಯಂತ್ರಣ ಮಾರ್ಗೋಪಾಯಗಳ ಫಲಕಗಳನ್ನು ಪ್ರದರ್ಶಿಸಲಾಯಿತು. ಅಧ್ಯಕ್ಷ ಡಾ.ಸಂದೀಪ ನೀರಲಗಿ, ಕಾರ್ಯದರ್ಶಿ ಡಾ.ಅಮಿತ ಗಲಗಲಿ, ಡಾ.ಶಿಶಿರ ದೇವರಾಜ, ಡಾ.ಎಸ್.ಆರ್.ಜಂಬಗಿ, ಡಾ.ನಾಡಗೌಡ, ಡಾ.ಕಿರಣ ಕುಲಕರ್ಣಿ, ಡಾ.ನವೀನ ಮಂಕಣಿ, ಡಾ.ರವೀಂದ್ರ ಜೋಶಿ, ಡಾ.ಸ್ವಪ್ನಾ, ಡಾ.ಕುಂಬಾರ, ಡಾ.ಪ್ರಕಾಶ ರಾಮನಗೌಡರ, ಡಾ.ಶ್ರೀಕಂಠ ರಾಮನಗೌಡರ ಇನ್ನಿತರರು ಭಾಗವಹಿಸಿದ್ದರು.


ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ತೇಜಸ್ ಚಾರಿಟೇಬಲ್ ಟ್ರಸ್ಟ್ ಮತ್ತು ಭಾರತೀಯ ವೈದ್ಯಕೀಯ ಸಂಘದ ಮಹಿಳಾ ವಿಭಾಗದ ಜಂಟಿ ಆಶ್ರಯದಲ್ಲಿ ವಾಯುವಿಹಾರಿಗಳಿಗೆ ಡಾ.ಸಂಧ್ಯಾ ಕುಲಕರ್ಣಿ ಅವರ ನೇತೃತ್ವದಲ್ಲಿ ಉಚಿತ ಮಧುಮೇಹ ತಪಾಸಣೆ ಹಮ್ಮಿಕೊಳ್ಳಲಾಗಿತ್ತು.

administrator

Related Articles

Leave a Reply

Your email address will not be published. Required fields are marked *