ಹುಬ್ಬಳ್ಳಿ-ಧಾರವಾಡ ಸುದ್ದಿ

ಟೆಬಲ್ ಟೆನಿಸ್ : ತೃಪ್ತಿಗೆ 2 ಪ್ರಶಸ್ತಿ

ಧಾರವಾಡ: ನಗರದ ಕಾಸ್ಮಸ್ ಕ್ಲಬ್‌ನಲ್ಲಿ ಸಮಾರೋಪಗೊಂಡ ರಾಜ್ಯ ರ‍್ಯಾಂಕಿ0ಗ್ ಟೇಬಲ್ ಟೆನಿಸ್ ಟೂರ್ನಿಯ 19ವರ್ಷದ ಒಳಗಿನವರ ಸಿಂಗಲ್ಸ್ ವಿಭಾಗದಲ್ಲಿ ಬೆಂಗಳೂರಿನ ಎಸ್‌ಕೆಐಇಎಸ್ ಕ್ಲಬ್‌ನ ತೃಪ್ತಿ ಪುರೋಹಿತ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.

               ಸಮ್ಮಕ್ ಕಶ್ಯಪ್,                                           ತೃಪ್ತಿ ಪುರೋಹಿತ್                                                      ವಿ.ಖುಷಿ                                      ಕೆ.ಜೆ.ಆಕಾಶ್

ಸಿ0ಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಪಡೆಯುವ ಮೂಲಕ ತೃಪ್ತಿ ಟೂರ್ನಿಯಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದ ಸಂಭ್ರಮ ತಮ್ಮದಾಗಿಸಿಕೊಂಡರು. ರವಿವಾರ ನಡೆದ 17ವರ್ಷದೊಳಗಿನವರ ವಿಭಾಗದಲ್ಲೂ ಚಾಂಪಿಯನ್ ಆಗಿದ್ದರು.
19 ವರ್ಷದೊಳಗಿನ ಬಾಲಕರ ವಿಭಾಗದ ಅಂತಿಮ ಪಂದ್ಯದಲ್ಲಿ ಬೆಂಗಳೂರಿನ ಡಬ್ಲುಸಿಟಿಟಿಸಿ ಕ್ಲಬ್‌ನ ಸಮ್ಮಕ್ ಕಶ್ಯಪ್ 5-11, 11-6, 11-7, 11-4, 8-11, 11-4ರಲ್ಲಿ ಪಿಎಸ್‌ಟಿಟಿಎ ಕ್ಲಬ್‌ನ ವರುಣ್ ಬಿ.ಕಶ್ಯಪ್ ಎದುರು ಜಯ ಸಾಧಿಸಿದರು. ಇದೇ ವಯೋಮಾನದ ಬಾಲಕಿಯರ ವಿಭಾಗದಲ್ಲಿ ತೃಪ್ತಿ 12-10, 11-6, 11-5, 14-12ರಲ್ಲಿ ಎಂಎಸ್‌ಎಸ್ ಕ್ಲಬ್‌ನ ಎ.ನಿಹಾರಿಕಾ ವಿರುದ್ಧ ಜಯ ಗಳಿಸಿ ಪ್ರಶಸ್ತಿ ಗೆದ್ದರು.
ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಎಸ್‌ಕೆಐಇಎಸ್ ಕ್ಲಬ್‌ನ ಕೆ.ಜೆ.ಆಕಾಶ್ 11-8, 11-8, 11-6, 11-6ರಲ್ಲಿ ಡಬ್ಲುö್ಯಸಿಟಟಿಸಿ ಕ್ಲಬ್‌ನ ಸೌಮ್ಯಜೀತ್ ಬೋಸ್ ಮೇಲೂ, ಮಹಿಳೆಯರ ಸಿಂಗಲ್ಸ್ನಲ್ಲಿ ಬಿಎನ್‌ಎಂ ಕ್ಲಬ್‌ನ ವಿ.ಖುಷಿ 14-12, 10-12, 11-5, 10-12, 11-8, 11-4ರಲ್ಲಿ ಎಸ್‌ಕೆಐಇಎಸ್ ಕ್ಲಬ್‌ನ ಎ.ಸಂಯುಕ್ತಾ ವಿರುದ್ಧವೂ ಜಯಿಸಿ ಚಾಂಪಿಯನ್ ಆಗಿ ಹೊಮ್ಮಿದರು. ಆದರು.

administrator

Related Articles

Leave a Reply

Your email address will not be published. Required fields are marked *