ಹುಬ್ಬಳ್ಳಿ-ಧಾರವಾಡ ಸುದ್ದಿ
ಲೂಟಿಕೋರ ಬಿಜೆಪಿ ಸಚಿವರು : ಮುತಾಲಿಕ   ಮತಾಂತರ ನಿಷೇದ ಕಾಯ್ದೆ ಜಾರಿಗೆ ಪಟ್ಟು

ಲೂಟಿಕೋರ ಬಿಜೆಪಿ ಸಚಿವರು : ಮುತಾಲಿಕ ಮತಾಂತರ ನಿಷೇದ ಕಾಯ್ದೆ ಜಾರಿಗೆ ಪಟ್ಟು

ಧಾರವಾಡ: ರಾಜ್ಯದಲ್ಲಿ ಹಿಂದು ಕಾರ್ಯಕರ್ತರ ಮೇಲಿನ ಹಲ್ಲೆ, ಗೋಹತ್ಯೆ, ಮತಾಂತರಕ್ಕೆ ಕಡಿವಾಣ ಹಾಕದ ಬಿಜೆಪಿ ಸರಕಾರದಲ್ಲಿನ ಸಚಿವರು ಲೂಟಿಯಲ್ಲಿ ತೊಡಗಿದ್ದಾರೆ ಎಂದು ಶ್ರೀರಾಮ ಸೇನಾ ವರಿಷ್ಠ ಪ್ರಮೋದ ಮುತಾಲಿಕ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರ, ತುಮಕೂರು ಮಾತ್ರವಲ್ಲದೇ ಮುಖ್ಯಮಂತ್ರಿಗಳ ಮತ್ತು ಗೃಹ ಸಚಿವರ ಕ್ಷೇತ್ರಗಳಲ್ಲಿಯೇ ಹಿಂದೂ ಕಾರ್ಯಕರ್ತರ ಮೇಲೆ ನಡೆಯುತ್ತಿವೆ. ಮತ್ತೊಂದೆಡೆ ಅವ್ಯಾಹತವಾಗಿ ಹಿಂದುಗಳ ಮತಾಂತರ ನಡೆಯುತ್ತಿದೆ. ಹುಬ್ಬಳ್ಳಿಯ ನವನಗರ ಪ್ರಕರಣದಲ್ಲಿ ಹಿಂದುಗಳ ಮತಾಂತರ ವಿರೋಧಿಸಿದ ೧೦೦ ಹಿಂದು ಕಾರ್ಯಕರ್ತರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಇಂತಹ ಪ್ರಕರಣಗಳ ವಿರುದ್ಧ ತಕ್ಷಣವೆ ಬೀದಿಗಿಳಿಯುತ್ತಿದ್ದ ಬಿಜೆಪಿ ನಾಯಕರು ಈಗ ಮೌನವಹಿಸಿರುವುದು ಏಕೆ ಎಂದು ಮುತಾಲಿಕ ಪ್ರಶ್ನಿಸಿದರು.
ಹಿಂದುತ್ವದ ಪ್ರತಿಪಾದಕರು ಎಂದು ಬಿಂಬಿಸುತ್ತ, ಹಿಂದುಗಳ ರಕ್ಷಣೆ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದಲ್ಲಿನ ಮಂತ್ರಿಗಳು ಸದ್ಯ ಲೂಟಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಪ್ರತಿವರ್ಷ ಭಾರತದಿಂದ 50 ಸಾವಿರ ಕೋಟಿ ರೂಪಾಯಿ ಬೆಲೆಯ ಗೋಮಾಂಸ ಹೊರದೇಶಗಳಿಗೆ ರಫ್ತಾಗುತ್ತಿದೆ. ಆದಾಗ್ಯೂ ಕೇಂದ್ರ ಸರಕಾರ ಯಾವುದೇ ಕ್ರಮ ಕೈಕೊಂಡಿಲ್ಲ ಎಂದು ಕಿಡಿಕಾರಿದರು. ಹಿಂದುಗಳ ಮೇಲೆ ಹಲ್ಲೆ ನಡೆಸುವ ಧೈರ್ಯ ಮುಸ್ಲಿಂರಿಗೆ ಎಲ್ಲಿಂದ ಬರುತ್ತಿದೆ ಎಂದ ಮುತಾಲಿಕ, ಸರಕಾರ ಕೂಡಲೇ ಮುಸ್ಲಿಂರ ಆಟಾಟೋಪಗಳಿಗೆ ಕಡಿವಾಣ ಹಾಕಿದರೆ ಎಲ್ಲ ಹಿಂದು ಸಂಘಟನೆಗಳು ಒಗ್ಗಟ್ಟಿನಿಂದ ತಡೆಯಲು ಸಿದ್ಧ ಎಂದ ಅವರು, ರಾಜ್ಯ ಸರಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸದಿದ್ದರೆ ಒಂದು ಸಾವಿರ ಮಠಾಧೀಶರೊಂದಿಗೆ ಬೀದಿಗಿಳಿಯಬೇಕಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಮುತಾಲಿಕ ಎಚ್ಚರಿಸಿದರು.
ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಮುಖಂಡರಾದ ಅಣ್ಣಪ್ಪ ದಿವಟಗಿ, ಮೈಲಾರಿ ಗುಡ್ಡಪ್ಪನವರ, ಮಂಜು ಕಾಟಕರ ಇನ್ನಿತರರು ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *