ಹುಬ್ಬಳ್ಳಿ-ಧಾರವಾಡ ಸುದ್ದಿ

ಕಾಂಗ್ರೆಸ್ ಸದಸ್ಯತ್ವ ನೋಂದಣಿಗೆ ಚಾಲನೆ

ಹುಬ್ಬಳ್ಳಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹೊಸದಿಲ್ಲಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬೆಂಗಳೂರು ಇವರ ಆದೇಶದ ಮೇರೆಗೆ ಹುಬ್ಬಳ್ಳಿ -ಧಾರವಾಡ ಅವಳಿನಗರ ಸಹಿತ ಜಿಲ್ಲೆಯಾದ್ಯಂತ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ನಡೆಯಿತು.


ಗೋಕುಲದ ನಂದಗೋಕುಲ, ಪಾಲಿಕೆ ವಾರ್ಡ್ ನಂ 54 ರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಭೂತ ಸಂಖ್ಯೆ 10, ಉಣಕಲ್ ಕ್ರಾಸ್ ಹಾಗೂ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಭಿಯಾನ ಜರುಗಿತು.


ಹು-ಧಾ ಪಶ್ಚಿಮ ಕ್ಷೇತ್ರದ ನಂದಗೋಕುಲದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸದಸ್ಯತ್ವ ಅಭಿಯಾನದಲ್ಲಿ ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಮಾತನಾಡಿದರು. ಶಂಕರ ಹರಿಜನ, ರಫೀಕ್ ದರಗದ, ನಾಗಪ್ಪ ಪೂಜಾರ, ಸುಭಾಷ ಪೂಜಾರ, ಶಿವ ಹೊಸಮನಿ,ಬಾಲಪ್ಪ ಬದಾಮಿ, ಶೇಖಪ್ಪ ಬ್ಯಾಹಟ್ಟಿ, ಈರಣ್ಣ ಲಿಗಾಡಿ, ಬಳವಂತಪ್ಪ ಜಾಧವ,ಹಾಲಯ್ಯ ಹಿರೇಮಠ ಮತ್ತಿತರರಿದ್ದರು.


ಭೂತ ಸಂಖ್ಯೆ 10 ರಲ್ಲಿ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಎಫ್.ಹೆಚ್.ಜಕ್ಕಪ್ಪನವರ ಅವರು ಕಾಂಗ್ರೆಸ್ಸ್ ಪಕ್ಷದ ಸದಸ್ಯತ್ವ ಪಡೆದು ಅಭಿಯಾನಕ್ಕೆ ಚಾಲನೆ ನೀಡಿ, ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸುವದಕ್ಕಾಗಿ ಮತ್ತು ಸಂವಿಧಾನ ರಕ್ಷಣೆಗಾಗಿ ಎಲ್ಲರೂ ಕಾಂಗ್ರೆಸ್ಸ ಪಕ್ಷದ ಸದಸ್ಯತ್ವ ಪಡೆಯಲು ಮನವಿ ಮಾಡಿದರು.


ಉಣಕಲ್ ಬ್ಲಾಕ್ ಕಾಂಗ್ರೆಸ್‌ನಿಂದ ನಡೆದ ಅಭಿಯಾನಕ್ಕೆ ಮಾಜಿ ಸಂಸದ, ಹಿರಿಯ ಕಾಂಗ್ರೆಸ್ ಮುಖಂಡ ಪ್ರೊ. ಐ.ಜಿ.ಸನದಿ ಚಾಲನೆ ನೀಡಿದರು.
ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಪ್ರವೀಣ ಶಲವಡಿ, ಮಹಾನಗರ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ಅಜೀಜ್ ಮುಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶರೀಫ್ ಗರಗದ, ಮುಖಂಡರಾದ ಗಂಗಾಧರ ದೊಡ್ಡವಾಡ, ಈಶ್ವರ ಶಿರಸಂಗಿ, ಮಂಜಣ್ಣ ಕಿರೆಸೂರ, ಅಭಿಮನ್ಯು ರೆಡ್ಡಿ, ಚಂದ್ರು ಸಂಕಣ್ಣವರ, ಬಸು ಸಾಲಿಮಠ, ಶ್ರೀಧರ ವಡೆಕರ, ಮಹಮದ್ ಅಗಸರ, ಶಾನು ಕಾಜೇಕಾನ್ ಮುಂತಾದವರಿದ್ದರು.

ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಡೆದ ಅಭಿಯಾನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲಕುಮಾರ್ ಪಾಟೀಲ್ ಅವರು ಮತ ಚಲಾಯಿಸುವ ಮೂಲಕ ತಮ್ಮ ಸದಸ್ಯತ್ವ ನೋಂದಣಿ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯದಾದ್ಯಂತ 3000ಕ್ಕೂ ಹೆಚ್ಚು ಕಡೆ ಜೂಮ್ ಮೂಲಕ ಕಾರ್ಯಕ್ರಮ ನೇರ ಪ್ರಸಾರ ವೀಕ್ಷಿಸಲಾಯಿತು.

ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಹಾವೇರಿಯ ಮೈಲಾರ್ ಮಹಾದೇವ ಸರ್ಕಲ್ ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಧಾರವಾಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಲೀಂ ಅಹ್ಮದ್ ರವರು ಚಾಲನೆ ನೀಡಿದರು. ಡಿಸಿಸಿ ಅಧ್ಯಕ್ಷರಾದ ಎಂ.ಎಂ.ಹಿರೇಮಠ್, ಮಾಜಿ ಸಚಿವರುಗಳಾದ ಬಸವರಾಜ್ ಶಿವಣ್ಣನವರ್, ರುದ್ರಪ್ಪ ಲಮಾಣಿ, ನಿಗಮ ಮಂಡಳಿ ಮಾಜಿ ಅಧ್ಯಕ್ಷ ವಿ.ಎಸ್.ಆರಾಧ್ಯ, ಡಿ.ಬಸವರಾಜ್, ಕೆಪಿಸಿಸಿ ಕೋ ಆರ್ಡಿನೇಟರ್ ಶ್ರೀನಿವಾಸ್ ಹಳ್ಳಳ್ಳಿ, ಖಾಲಿದ್, ಕುಬೇರಪ್ಪ, ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

 

ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 66ರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆದೇಶದ ಮೇರೆಗೆ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ನಡೆಸಲಾಯಿತು. ವಾರ್ಡ್ ಅಧ್ಯಕ್ಷ ಯಲ್ಲಪ್ಪ ಮೆಹರವಾಡೆ, ಅಶ್ವಿನಿ ಮೆಹರವಾಡೆ, ಸರಸ್ವತಿ ಮೆಹರವಾಡೆ, ಲಕ್ಷ್ಮಣಸಾ ಖೋಡೆ, ರೋಹನ ಐನಾಪೂರೆ, ಗಣೇಶ ಕಾಟವೆ, ಹನಮಂತಸಾ ಚವ್ಹಾಣ ಇತರರಿದ್ದರು.
administrator

Related Articles

Leave a Reply

Your email address will not be published. Required fields are marked *