ಹುಬ್ಬಳ್ಳಿ: ನಗರದ ಕುಸುಗಲ್ ರಸ್ತೆಯ ಸ್ಫೋರ್ಟ್ಸ ಪಾರ್ಕನಲ್ಲಿ ಸಿವಾಂಚಿ ಓಸ್ಮಾಲ್ ಜೈನ್ ಸಂಘ ಮತ್ತು ಸಿವಾಂಚಿ ಯೂತ್ ಅಸೋಸಿಯೇಷನ್ ಆಯೋಜಿಸಿದ್ದ ಬಾಕ್ಸ್ ಜೈನ್ ಕ್ರಿಕೆಟ್ ಲೀಗ್‌ನಲ್ಲಿ ಪ್ರತಿ ಪಂದ್ಯದಲ್ಲೂ ನಾಯಕನ ಆಟವಾಡಿದ ‘ಲಕ್ಕಿ’ ಸುರೇಶ ಜೈನ ಅವರ ಸವ್ಯಸಾಚಿ ಪ್ರದರ್ಶನದ ಮೂಲಕ ಜೈನ್ ಟೈರ‍್ಸ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಪಾಲ್ಗೊಂಡ 8 ತಂಡಗಳ ಪೈಕಿ ಅಂತಿಮ ಪಂದ್ಯದಲ್ಲಿ ಜೈನ್ ಟೈಗರ್ ತಂಡ ಹಾಗೂ ಸೆವೆನ್ ಸ್ಟಾರ್ ತಂಡ ಪ್ರಶಸ್ತಿಗೆ ಸೆಣಸಾಡಿದವು. ಮೊದಲು ಬ್ಯಾಟ್ ಮಾಡಿದ ಜೈನ್ ಟೈಗರ್ಸ ನಾಯಕ ಸುರೇಶ ಅವರ 33 ರನ್ನುಗಳ ನೆರವಿನಿಂದ 6 ಓವರಲ್ಲಿ 79 ರನ್ ಪೇರಿಸಿ ದೊಡ್ಡ ಸವಾಲು ನೀಡಿತು. ಆದರೆ ಗುರಿ ಮುಟ್ಟಲು ವಿಫಲವಾದ ಸೆವೆನ್ ಸ್ಟಾರ್ ಕೇವಲ 21ಕ್ಕೆ ಆಲೌಟಾಯಿತು.
ಜೈನ್ ಟೈಗರ್ಸ್ ನಾಯಕ ಸುರೇಶ ಜೈನ್ ಮೂರು ಲೀಗ್ ಪಂದ್ಯ, ಸೆಮಿಫೈನಲ್ ಹಾಗೂ ಅಂತಿಮ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುದು ವಿಶೇಷವಾಗಿತ್ತು.
ಸಿವಾಂಚಿ ಓಸ್ವಾಲ್ ಜೈನ್ ಸಂಘ ಅಧ್ಯಕ್ಷ ರಮೇಶ ಬಾಫನಾ, ಕಾರ್ಯದರ್ಶಿ ಶಾಂತಿಲಾಲ್ ಜಿ ಬಾಲಾರ್, ಭವರಲಾಲ್ ಸಿ ಜೈನ್, ಮುಖ್ಯ ಪ್ರಾಯೋಜಕ ಡುಂಗರ್‌ಚAದ್ ಜಿ ಬಗ್ರೆಚಾ, ಆಹಾರ ಫಲಾನುಭವಿ ದೀಪಚಂದ್ ಜಿ ಬಗ್ರೆಚಾ, ವಿ ಆರ್ ಬೆಸ್ಟ್ ಗ್ರೂಪ್, ಮಹಾವೀರ್ ಪಾಲ್ರೇಚಾ, ಅರವಿಂದ್ ಬಾಫನಾ, ಯುವಕ ಸಂಘದ ಅಧ್ಯಕ್ಷ ಸಂಜಯ್ ಬಗ್ರೇಚಾ, ಕಾರ್ಯದರ್ಶಿ ಪಿಂಟು ಬಗ್ರೇಚಾ, ಸಂಘಟಕ ಮನೋಜ್ ಬಗ್ರೇಚಾ ವಿಚೇತರಿಗೆ ಟ್ರೋಫಿ ವಿತರಿಸಿದರು.
ರಿಯಲ್ ವ್ಯಾಲ್ಯೂ, ತೇಜ್ ಟ್ರೇಡರ್ಸ್, ಮುತಾ ರಾಕ್ಸ್ಟಾರ್, ಜೈನ್ ಟೈಗರ್, ಸೂಪರ್ ಲಯನ್, ಸೆವೆನ್ ರಾಯಲ್ ಭಾಗವಹಿಸಿದ ಇತರ ತಂಡಗಳಾಗಿದ್ದವು.
ರಮೇಶ್ ಚೋಪ್ರಾ, ದಿನೇಶ್ ಸಾಂಘ್ವಿ, ಚೇತನ್ ನಹಾ, ರಮೇಶ ಒಸ್ಮಾಲ್, ಅಮೃತ್ ಮೋರ್ವಾಲ್, ಕೇವಲಚಂದ ಲುಕಡ್, ಗೌತಮ್ ಬಾಫನಾ ಮುಂತಾದ ಗಣ್ಯರು ಇದ್ದರು.