ಹುಬ್ಬಳ್ಳಿ-ಧಾರವಾಡ ಸುದ್ದಿ

ಭೃಷ್ಟಾಚಾರದ ಉನ್ನತ ಮಟ್ಟದ ತನಿಖೆಯಾಗಲಿ ಪರ್ಸಂಟೇಜ್ ವಿರುದ್ದ ಗುತ್ತಿಗೆದಾರರ ಬೃಹತ್ ’ಮೌನ’ ಪ್ರತಿಭಟನೆ

 

 

 

ಧಾರವಾಡ: ರಾಜ್ಯದ ವಿವಿಧ ಇಲಾಖೆಗಳಲ್ಲಿನ ಪ್ರಮುಖ ಕಾಮಗಾರಿಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್‍ಸ್ ಅಸೋಸಿಯೇಷನ್ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು.
ರಾಜ್ಯದ ಪ್ರಮುಖ ಕಾಮಗಾರಿಗಳು ನಡೆಯುವ ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಣ್ಣ ನೀರಾವರಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಕಾಮಗಾರಿಗಳಿಗೆ ಮಂಜೂರಾದ ಒಟ್ಟು ಅನುದಾನದಲ್ಲಿ ಶೇ.30-40 ಕ್ಕಿಂತಲೂ ಹೆಚ್ಚು ಮೊತ್ತ ಭ್ರಷ್ಟಾಚಾರ ಮತ್ತಿತರ ವೆಚ್ಚಗಳಿಗೆ ಸರಿದೂಗಿಸ ಬೇಕಿದೆ. ಟೆಂಡರ್ ಅನುಮೋದನೆಗೂ ಮುನ್ನ ಆರಂಭವಾಗುವ ಭ್ರಷ್ಟಾಚಾರ ಪ್ರಕ್ರಿಯೆ ಬಿಲ್ ಪಾವತಿ ಆಗುವವರೆಗೂ ನಡೆಯುತ್ತದೆ.
ಸರಕಾರಗಳು ಬದಲಾದಂತೆ ಭ್ರಷ್ಟಾಚಾರ ಕಡಿಮೆಯಾಗಬೇಕು. ಆದರೆ, ಬೆಲಗಳು ಏರಿದಂತೆ ಭ್ರಷ್ಟಾಚಾರವೂ ಹೆಚ್ಚುತ್ತಿದೆ. ಇದರಿಂದ ಕಾಮಗಾರಿಗಳ ಗುಣಮಟ್ಟ ಕುಸಿಯುತ್ತಿದೆ. ಮತ್ತು ಗುತ್ತಿಗೆದಾರರು ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ.ಆದ್ದರಿಂದ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಗುತ್ತಿಗೆದಾರರಿಗೆ ಪಾವತಿಸಬೆಕಿರುವ ಸಾವಿರಾರು ಕೋಟಿ ಬಾಕಿ ಮೊತ್ತವನ್ನು ಕೂಡಲೇ ಪಾವತಿಸಬೇಕು. ಪ್ಯಾಕೇಜ್ ಪದ್ಧತಿ ರದ್ದುಗೊಳಿಸು ವುದು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸಬೇಕು.
ಸರಕಾರ ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದರೆ ರಾಜ್ಯದ ಎಲ್ಲ ಗುತ್ತಿಗೆದಾರರು ಮತ್ತು ಕಾರ್ಮಿಕರು ಸರಕಾರಕ್ಕೆ ಬೆಂಬಲವಾಗಿ ನಿಲ್ಲಲಿದ್ದಾರೆ. ಆದರೆ ಈ ಬಗ್ಗೆ ಸರಕಾರದ ಗಮನಸೆಳೆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಸರಕಾರದ ಈ ಧೋರಣೆಯನ್ನು ಖಂಡಿಸಿ ಮುಂದಿನ ಜನೇವರಿ ತಿಂಗಳಲ್ಲಿ ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕೆಎಸ್‌ಸಿಎ ತೀರ್ಮಾನಿಸಿದೆ, ಪ್ರತಿಭಟನೆಯಲ್ಲಿ ಸುಮಾರು ೧ ಲಕ್ಷ ಗುತ್ತಿಗೆದಾರರು ಭಾಗವಹಿಸಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಪ್ರತಿ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.ಇದಕ್ಕೂ ಸರಕಾರ ಮಣಿಯದಿದ್ದರೆ ರಾಷ್ಟ್ರಪತಿ, ಪ್ರಧಾನಿಗಳನ್ನು ಮತ್ತು ಬಿಜೆಪಿ ವರಿಷ್ಠರನ್ನು ಕೂಡ ಭೇಟಿ ಮಾಡಲಾಗುವುದು ಎಂದು ಮನವಿಯಲ್ಲಿ ಗುತ್ತಿಗೆದಾರರು ತಿಳಿಸಿದ್ದಾರೆ.
ನಗರದ ಕಲಾಭವನದಿಂದ ಕೈಗೆ ಕಪ್ಪು ಪಟ್ಟಿ ಧರಿಸಿ ಮೌನ ರ್‍ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್‍ಸ್ ಅಸೋಸಿಯೇಷನ್ ಅಧ್ಯಕ್ಷ ಡಿ.ಕೆಂಪಣ್ಣ, ಉಪಾಧ್ಯಕ್ಷರಾದ ಎಂ.ಎಸ್.ಸಂಕಾಗೌಡಶಾನಿ, ವಿ. ಕೃಷ್ಣಾರೆಡ್ಡಿ, ಕೆ.ಎಸ್.ಶಾಂತೇಗೌಡ, ಎಂ: ಪ್ರತಾಪ್, ಕೆ. ರಾಧಕೃಷ್ಣ ನಾಯಕ್, ಆರ್.ಮಂಜುನಾಥ, ಆರ್.ಅಂಬಿಕಾಪತಿ, ಬಿ.ಸಿ.ದಿನೇಶ, ಪ್ರಧಾನ ಕಾರ್ಯದರ್ಶಿ ಜಿ.ಎಂ.ರವೀಂದ್ರ, ಖಜಾಂಚಿ ಎಚ್.ಎಸ್.ನಟರಾಜ್, ಜಂಟಿ ಕಾರ್ಯದರ್ಶಿಗಳಾದ ಎಂ. ರಮೇಶ್, ಎನ್. ಮಂಜುನಾಥ್
ಸಂಘಟನಾ ಕಾರ್ಯದರ್ಶಿಗಳಾದ ಜಗನ್ನಾಥ್ ಬಿ.ಶೇಗಜಿ, ಸುರೇಶ್ ಎಸ್. ಭೂಮರೆಡ್ಡಿ, ಕೆ.ಎ.ರವಿಚಂಗಪ್ಪ, ಬಿ.ಎಸ್.ಗುರುಸಿದ್ದಪ್ಪ, .ಸಲಹೆಗಾರ ಎ. ಚಾಮರಾಜರೆಡ್ಡಿ, ಸದಸ್ಯರಾದ ಲಿಂಗರಾಜ ಚಪ್ಪರದಹಳ್ಳಿ. ಪ್ರಭು ಕಣಬೂರ, ಆರ್.ಎ.ಯಡಳ್ಳಿ, ಎಸ್.ಆರ್.ಬಳ್ಳಾರಿ. ನಿಂಗಣ್ಣ ಕರೀಕಟ್ಟಿ, ಅಶೋಕ ಬಣಕಾರ, ಸಿ.ವಿ.ಗದಗ. ಬಿ.ಎಸ್.ಗಾಂವಕರ. ಸತ್ಯಪ್ಪ ಬಾಗಲಕೋಟ, ಸಿ.ಜಿ.ಅಲಾಡಿ, ಪ್ರಭಾವತಿ ಒಡ್ಡೀನ್ ಸೇರಿದಂತೆ ನೂರಾರು ಗುತ್ತಿಗೆದಾರರು ಭಾಗವಹಿಸಿದ್ದರು.

 

administrator

Related Articles

Leave a Reply

Your email address will not be published. Required fields are marked *