ಹುಬ್ಬಳ್ಳಿ-ಧಾರವಾಡ ಸುದ್ದಿ
ಧಾರವಾಡ ಸಬ್ ರಜಿಸ್ಟ್ರಾರ್ ವರ್ತನೆ: ರೋಸಿ ಹೋದ ನಾಗರಿಕರು!

ಧಾರವಾಡ ಸಬ್ ರಜಿಸ್ಟ್ರಾರ್ ವರ್ತನೆ: ರೋಸಿ ಹೋದ ನಾಗರಿಕರು!

ಧಾರವಾಡ: ಈ ಹಿಂದೆ ಹುಬ್ಬಳ್ಳಿ ಉಪ ನೋಂದಣಾಧಿಕಾರಿ ಕಚೇರಿಯ ಮಹಿಳಾ ಅಧಿಕಾರಿಗಳಿಬ್ಬರ ವರ್ತನೆ ವಿರುದ್ಧ ಸಿಡಿದೆದ್ದು ಪ್ರತಿಭಟನೆ ಮಾಡಿದ್ದು ಮರೆಯುವ ಮುನ್ನವೇ, ಪೇಡೆನಗರಿಯಲ್ಲೂ ಉಪ ನೋಂದಣಾಧಿಕಾರಿಗಳ ಕಾರ್ಯನಿರ್ವಹಣೆಯಿಂದ ಆಗುತ್ತಿರುವ ಅನಾನುಕೂಲತೆಯಿಂದ ಸಾರ್ವಜನಿಕರು ರೋಸಿಹೋಗಿದ್ದು ಬೀದಿಗಿಳಿಯಲು ಸಜ್ಜಾಗಿದ್ದಾರೆ.


ಪ್ರತಿದಿನ ನೂರಾರು ಸಾರ್ವಜನಿಕರು ತಮ್ಮ ಆಸ್ತಿಗಳ ಖರೀದಿ ಮತ್ತು ಮಾರಾಟ, ವಿವಾಹ ನೊಂದಣಿ ಇನ್ನಿತರ ಕೆಲಸಗಳಿಗೆ ನಗರದ ಮಿನಿ ವಿಧಾನಸೌದದಲ್ಲಿರುವ ಉಪ ನೋಂದಣಾಧಿಕಾರಿಗಳ ಕಚೇರಿಗೆ ಬರುತ್ತಾರೆ.
ಈ ಕಚೇರಿಯ ಪ್ರಮುಖ ಅಧಿಕಾರಿಯೂ ಆದ ಉಪ ನೋಂದಣಾಧಿಕಾರಿ ಗಿರೀಶ ಅರಮನಿ ಕಚೇರಿಗೆ ಸಮಯಕ್ಕೆ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಬಹಳಷ್ಟು ಅನಾನುಕೂಲ ಆಗುತ್ತಿದೆ.
ಮುದ್ರಾಂಕ ಶುಲ್ಕದ ರೂಪದಲ್ಲಿ ಅಪಾರ ಪ್ರಮಾಣದ ಆದಾಯ ಸರಕಾರದ ಖಜಾನೆ ಸೇರುತ್ತದೆ. ನೊಂದಣಾಧಿಕಾರಿಗಳ ಬೇಜವಾಬ್ದಾರಿ ಕಾರ್ಯನಿರ್ವ ಹಣೆಯಿಂದ ಜನತೆ ಬೇಸತ್ತಿದ್ದಾರೆ.


ಇನ್ನೊಂದೆಡೆ ಕಚೇರಿಗೆ ಬರುವ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಸರಿಯಾದ ಆಸನಗಳಿಲ್ಲ. ಅಲ್ಲದೇ ಇದೇ ಕಚೇರಿ ಪಕ್ಕದಲ್ಲಿರುವ ಮೂತ್ರಾಲಯ ನಿರ್ವಹಣೆ ಕೊರತೆಯಿಂದ ದುರ್ನಾತ ಬೀರುತ್ತಿದೆ. ಇಂತಹ ದುರವಸ್ಥೆಯಿಂದ ಜನರು ಕಟ್ಟಡದ ಮುಂಭಾಗದಲ್ಲಿನ ಮರಗಳ ಮರೆ ಯನ್ನೇ ಆಶ್ರಯಿಸಬೇಕಾದ ಅನುವಾರ್ಯತೆ ಇದೆ. ಬೆಳಗ್ಗೆಯಿಂದ ಬಂದು ಕಾಯುವ ಅದರಲ್ಲಿಯೂ ವಯೋವೃದ್ಧರ ಪಾಡು ಹೇಳತೀರದು.
ಜಿಲ್ಲೆಯ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು, ಇಲಾಖೆಯ ಹಿರಿಯ ಅಧಿಕಾರಿಗಳು ಶೀಘ್ರವೇ ಗಮನಹರಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸ ಬೇಕು ಇಲ್ಲದಿದ್ದರೆ ಬೀದಿಗಿಳಿಯುವುದು ಅನಿವಾರ್ಯ ಎಂದು ಪತ್ರಿಕೆ ಮುಂದೆ ಅನೇಕರು ತಮ್ಮ ದುಗುಡ ಹೇಳಿಕೊಂಡಿದ್ದಾರೆ.

administrator

Related Articles

Leave a Reply

Your email address will not be published. Required fields are marked *