ಹುಬ್ಬಳ್ಳಿ-ಧಾರವಾಡ ಸುದ್ದಿ
ಪಂಜಾಬ್ ಸರ್ಕಾರ ವಜಾಕ್ಕೆ ಯುವ ಮೋರ್ಚಾ ಪ್ರತಿಭಟನೆ; ಹುಬ್ಬಳ್ಳಿ ಕೈ ಕಚೇರಿ ಮುತ್ತಿಗೆ ಯತ್ನ, ಚಕಮಕಿ

ಪಂಜಾಬ್ ಸರ್ಕಾರ ವಜಾಕ್ಕೆ ಯುವ ಮೋರ್ಚಾ ಪ್ರತಿಭಟನೆ; ಹುಬ್ಬಳ್ಳಿ ಕೈ ಕಚೇರಿ ಮುತ್ತಿಗೆ ಯತ್ನ, ಚಕಮಕಿ

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತೆ ನೀಡುವಲ್ಲಿ ಪಂಜಾಬ್ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ಹುಬ್ಬಳ್ಳಿ ಮತ್ತು ಧಾರವಾಡ ದಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.


ಬಿಜೆಪಿ ಯುವ ಮೋರ್ಚಾ ಘಟಕದ ಕಾರ್ಯಕರ್ತರು ನಗರದ ಕಾರವಾರ ರಸ್ತೆಯ ಇ.ಎಸ್.ಐ ಆಸ್ಪತ್ರೆಯಿಂದ ಕಾಂಗ್ರೆಸ್ ಕಚೇರಿ ವರೆಗೆ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ಅಣಕು ಶವಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದದರಲ್ಲದೇ ಪ್ರಧಾನಿಗೆ ರಕ್ಷಣೆ ನೀಡಲು ಸಾಧ್ಯವಾಗದ ಅಲ್ಲಿನ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಿ, ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ಆಗ್ರಹಿಸಿದರು.

ನಂತರ ಕಾಂಗ್ರೆಸ್ ಕಚೇರಿ ಮುತ್ತಿಗೆ ಹಾಕಲು ಮುಂದಾದ ಕಾರ್ಯಕರ್ತರ ನ್ನು ಪೊಲೀಸರು ತಡೆದರು. ಈ ವೇಳೆ ಪೊಲೀಸ್ ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಪೂರ್ವ ಅಧ್ಯಕ್ಷ ಪ್ರಭು ನವಲಗುಂದಮಠ, ಬಸವರಾಜ ಅಮ್ಮಿನಬಾವಿ, ಅನೂಫ್ ಬಿಜವಾಡ, ಪ್ರಕಾಶ್ ಶೃಂಗೇರಿ, ಅವಿನಾಶ ಹರಿವಾಣ, ಶಿವಯ್ಯ ಹಿರೇಮಠ, ಪ್ರೀತಂ ಅರಕೇರಿ, ಚಂದ್ರಶೇಖರ ಗೋಕಾಕ, ರಜತಸಿಂಗ್ ಹಜಾರೆ, ಶೀಲಾ ಕಾಟಕರ, ಶಾಂತವ್ವ ಹಿರೇಮಠ ಇದ್ದರು.

ಪಂಜಾಬ್ ಕಾಂಗ್ರೆಸ್ ಸರಕಾರದ ನಡೆ ಖಂಡಿಸಿ ಧಾರವಾಡ- 71 ಮತ್ತು 74ನೆ ಕ್ಷೇತ್ರದ ಯುವ ಮೋರ್ಚಾದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಕಾಪಟಕರ, ಮಾಜಿ ಶಾಸಕಿ ಸೀಮಾ ಮಸೂತಿ, ಈರೇಶ ಅಂಚಟಗೇರಿ, ಬಸವರಾಜ ಗರಗ, ಸುನಿಲ್ ಮೋರೆ,ಯುವ ಮೋರ್ಚಾ ಅಧ್ಯಕ್ಷರು ಶಕ್ತಿ ಹಿರೇಮಠ,ಪವನ ತಿಟೆ ,ಅಮಿತ್ ಪಾಟೀಲ, ಶರಣು ಅಂಗಡಿ ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಧಾರವಾಡ ವರದಿ: ಪ್ರಧಾನಿಗೆ ಉದ್ದೇಶ ಪೂರ್ವಕವಾಗಿ ಪಂಜಾಬ್ ಸರ್ಕಾರ ರೈತರ ಪ್ರತಿಭಟನೆ ಮೂಲಕ ತಡೆ ಒಡ್ಡಿದೆ ಕೂಡಲೇ ಅಲ್ಲಿಯ ಸರ್ಕಾರ ವಜಾಗೊಳಿಸಬೇಕು ಎಂದು ಧಾರವಾಡ-74 ಮತ್ತು 71 ಕ್ಷೇತ್ರದ ಯುವ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಮಹಾನಗರದ ಜಿಲ್ಲಾಧ್ಯಕ್ಷ ಸಂಜಯ ಕಾಪಟಕರ, ಮಾಜಿ ಶಾಸಕಿ ಸೀಮಾ ಮಸೂತಿ, ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ, ಬಸವರಾಜ ಗರಗ, ಸುನಿಲ್ ಮೋರೆ, ಯುವ ಮೋರ್ಚಾ ಅಧ್ಯಕ್ಷ ಶಕ್ತಿ ಹಿರೇಮಠ, ಪವನ ತಿಟೆ, ಅಮಿತ್ ಪಾಟೀಲ, ಶರಣು ಅಂಗಡಿ ಇನ್ನಿತರರಿದ್ದರು.

 

administrator

Related Articles

Leave a Reply

Your email address will not be published. Required fields are marked *