ಹುಬ್ಬಳ್ಳಿ: ಕೋವಿಡ್ ನಿಯಂತ್ರಿಸಲು ರಾಜ್ಯ ಸರ್ಕಾರ ತೆಗೆದುಕೊಂಡಿರುವ ವಾರಾಂತ್ಯ ಕರ್ಫ್ಯೂಗೆ ರಾಜಧಾನಿ ಬೆಂಗಳೂರು, ವಾಣಜ್ಯ ರಾಜಧಾನಿ ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜನ ದಟ್ಟಣೆ ಇಲ್ಲದೆ ಎಲ್ಲ ಪ್ರಮುಖ ನಗರಗಳು ಬಿಕೋ ಎನ್ನುತ್ತಿದ್ದು, ಸಾಂಸ್ಕೃತಿಕ ನಗರ ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ದಾವಣಗೆರೆ, ಶಿವಮೊಗ್ಗ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯಾದ್ಯಂತ ಎಲ್ಲೆಡೆ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕರ್ಫ್ಯೂಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಹುಬ್ಬಳ್ಳಿ ಮತ್ತು ಧಾರವಾಡದ ಬಹುತೇಕ ಕಡೆ ಜನಜಂಗುಳಿ ಇಲ್ಲದೆ ಖಾಲಿ ಖಾಲಿಯಾಗಿದ್ದ ದೃಶ್ಯ ಕಂಡುಬಂದಿತು. ಚನ್ನಮ್ಮ ವರ್ತುಳ, ಸ್ಟೇಶನ್ ರಸ್ತೆ, ರೈಲ್ವೆ ನಿಲ್ದಾಣ, ಸೇರಿದಂತೆ ವಾಹನಗಳ ಸಂಚಾರ ವಿರಳವಾಗಿತ್ತು.
ಸದಾ ಜನ ಜನಜಂಗುಳಿಯಿಂದ ಕೂಡಿದ್ದ ಬಸ್ ನಿಲ್ದಾಣ, ಆಟೋ ನಿಲ್ದಾಣಗಳು ಬಿಕೋ ಎನ್ನುತ್ತಿವೆ.
ಬೆಳಗ್ಗೆಯಿಂದಲೇ ಪೊಲೀಸರು ಮಾರ್ಕೆಟ್ ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದು, ಜನ ಸಂಚಾರಕ್ಕೆ ಬ್ರೇಕ್ ಹಾಕಿದ್ದಾರೆ.
ಕೆಲವು ಕಡೆ ಅನಗತ್ಯ ವಾಗಿ ಜನರು ಸಂಚರಿಸುತ್ತಿದ್ದ ಕಡೆ ಪೊಲೀಸರು ಬಲವಂತವಾಗಿ ಅವರನ್ನು ಮನೆಗೆ ಕಳುಹಿಸಿದರೆ ಕೆಲವು ಕಡೆ ಮಾತಿನ ಚಕಮಕಿ, ಊರಿಗೆ ಹೋಗಲು ಪ್ರಯಾಣಿಕರ ಪರದಾಟ, ಖಾಸಗಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರು ಪರದಾಡುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂದವು.
ಕೋವಿಡ್ ಒಂದು ಮತ್ತು ಎರಡನೆ ಅಲೆಯಲ್ಲಿ ಸಾಕಷ್ಟು ಸಾವು-ನೋವು ಕಂಡುಬಂದ ಹಿನ್ನೆಲೆಯಲ್ಲಿ ಈ ಬಾರಿ ಎಚ್ಚೆತ್ತುಕೊಂಡಿರುವ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ತಮಗೆ ತಾವೇ ನಿರ್ಬಂಧ ಹಾಕಿಕೊಂಡಿದ್ದರಿಂದ ಬಹುತೇಕರು ಹೊರಗೆ ಬಂದಿಲ್ಲ.
ಗುರುತಿನ ಚೀಟಿಯನ್ನು ಹೊಂದಿದ್ದವರಿಗೆ ಮಾತ್ರ ಸಂಚರಿಸಲು ಪೊಲೀಸರು ಅವಕಾಶ ಕೊಟ್ಟಿದ್ದು ಎಂದಿನಂತೆ ಅಗತ್ಯ ವಸ್ತುಗಳಾದ ಹಾಲು, ಹಣ್ಣು, ತರಕಾರಿ, ಔಷ, ಸಿಲಿಂಡರ್, ದಿನಸಿ ಅಂಗಡಿಗಳು, ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ಬೆಳಿಗ್ಗೆ ಕೆಲ ಅಂಗಡಿಗಳನ್ನು ತೆರೆಯಲು ಮುಂದಾದರೂ ಪೊಲೀಸರು ಬಂದ್ ನಂತರ ಮುಚ್ಚಿದರು.ಬಸ್ ಸಂಚಾರ ವಿರಳವಾಗಿದ್ದು,ಪ್ರಯಾಣಿಕರ ಅವಶ್ಯಕತೆಗೆ ತಕ್ಕಂತೆ ಸಂಚರಿಸುತ್ತಿವೆ.
ಬೀದಿಬದಿ ವ್ಯಾಪಾರಿಗಳಿಗೆ ಅವಕಾಶವಿದ್ದರಿಂದ ಹಣ್ಣು, ತರಕಾರಿ ಮಾರಾಟ ದಲ್ಲಿ ತೊಡಗಿದ್ದರು. ತಿಂಡಿ, ತಿನಿಸುಗಳ ಹೋಟೆಲ್‌ಗಳಿಗೂ ಕೂಡ
ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಪೊಲೀಸರು ಫೀಲ್ಡಿಗಿಳಿದಿ ದ್ದರು. ಅಲ್ಲಲ್ಲಿ ಬ್ಯಾರಿಕೇಡ್ ಹಾಕಿ ವಾಹನ ತಪಾಸಣೆ ನಡೆಸುತ್ತಿದ್ದಾರೆ.
ಧಾರವಾಡ ವರದಿ: ಕೊರೊನಾ ಮೂರನೇ ಅಲೆ ಅಬ್ಬರ ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರ ಶನಿವಾರ ಹಾಗೂ ಭಾನುವಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದು, ಮೊದಲ ದಿನವಾದ ಇಂದಿನ ಶನಿವಾರ ನಗರದಲ್ಲಿ ಉತ್ತಮ ಜನಬೆಂಬಲ ವ್ಯಕ್ತವಾಗಿದೆ.
ನಗರದ ಸುಭಾಷ ರಸ್ತೆ, ಸೂಪರ್ ಮಾರುಕಟ್ಟೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗಿದೆ. ಜನ ಸಂಚಾರ ಇಲ್ಲದೇ ಇರುವುದರಿಂದ ವ್ಯಾಪಾರಕ್ಕೆ ಕೊಕ್ಕೆ ಹಾಕಿದಂತಾಗಿದೆ ಎಂಬುದು ವ್ಯಾಪಾರಸ್ಥರ ಅಭಿಪ್ರಾಯವಾಗಿದೆ.
ಕಿರಾಣಿ ಅಂಗಡಿ, ಬೇಕರಿ, ಹಾಲು, ಮಾಂಸ ಮಾರಾಟಕ್ಕ ಅನುವು ಮಾಡಿ ಕೊಡಲಾಗಿದ್ದು, ವಿನಾಕಾರಣ ಸಂಚರಿಸುವ ವಾಹನಗಳಿಗೆ ಕಡಿವಾಣ ಹಾಕಲಾಗುತ್ತಿದೆ. ಕೊರೊನಾ ಮೊದಲನೇ ಅಲೆಯಿಂದ ಹಿಡಿದು ಇಲ್ಲಿಯ ವರೆಗೂ ಕೊರೊನಾ ಸೇನಾನಿಗಳಾಗಿ ಕೆಲಸ ಮಾಡುತ್ತಿರುವ ಪೊಲೀಸರು ಮತ್ತೆ ರಸ್ತೆಗಿಳಿದು ತಮ್ಮ ಕೆಲಸ ಆರಂಭಿಸಿದ್ದಾರೆ.
ರಾಜ್ಯದಲ್ಲಿ ತುರ್ತು ಸೇವೆಗಳನ್ನು ಹೊರತುಪಡಿಸಿ, ಕಟ್ಟುನಿಟ್ಟಾಗಿ ಜಾರಿ ಮಾಡಿರುವ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದ ಅಂಗಡಿ-ಮುಂಗಟ್ಟುಗಳು ಸೇರಿದಂತೆ ಎಲ್ಲವೂ ಸಹ ಕೆಲವಡೆ ಸ್ತಬ್ಧವಾಗಿತ್ತು. ಇನ್ನು ಪ್ರಮುಖ ರಸ್ತೆಗಳಲ್ಲಿ ಪೊಲೀಸರ ಸರ್ಪಗವಾಲು ಮಾಡಲಾಗಿದ್ದು, ಅಗತ್ಯ ಕೆಲಸಗಳ ಮೇಲೆ ಹೊರ ಬಂದ ಜನರ ಸಂಖ್ಯೆ ಕಡಿಮೆ ಇತ್ತು. ಇನ್ನೂ ಅನಗತ್ಯ ವಾಹನ ಸಂಚಾರ ಮತ್ತು ಜನಸಂಚಾರಕ್ಕೆ ಬ್ರೇಕ್ ಹಾಕಿದ ಪೊಲೀಸರು ವಾಹನಗಳ ತಪಾಸಣೆ ಮಾಡುವ ದೃಶ್ಯಗಳು ಕಂಡು ಬಂದವು.
ಒಟ್ಟಾರೆಯಾಗಿ ವೀಕೆಂಡ್ ಕರ್ಫ್ಯೂನ ಮೊದಲ ದಿನವಾದ ಶನಿವಾರ ಧಾರವಾಡ ಜನರಿಂದ ಉತ್ತಮ ಸ್ಪಂದನೆ ದೊರೆತಿದ್ದು, ನಾಳೆಯೂ ಕೂಡ ಈ ಕರ್ಫ್ಯೂ ಮುಂದುವರೆಯಲಿದೆ. ವೀಕೆಂಡ್ ಕರ್ಫ್ಯೂ ಮಧ್ಯೆಯೂ ಮಾಸ್ಕ್ ಇಲ್ಲದೇ ವಿನಾಕಾರಣ ಹೊರಗಡೆ ಸುತ್ತಾಡುತ್ತಿರುವವರಿಗೆ ಪೊಲೀಸರು ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ.
ನಗರದ ಪ್ರಮುಖ ರಸ್ತೆಗಳಿದಿರುವ ಪೊಲೀಸರು, ಬೈಕ್ ತೆಗೆದುಕೊಂಡು ಹೊರಗಡೆ ಸುತ್ತಾಡುತ್ತಿರುವವರಿಗೆ ದಂಡ ವಿಧಿಸುವ ಕೆಲಸ ಮಾಡುತ್ತಿದ್ದ ದೃಶ್ಯ ಕಂಡುಬಂದಿತು. ಸುಭಾಷ್ ರಸ್ತೆಯಲ್ಲಿ ಮಾಸ್ಕ್ ಇಲ್ಲದೇ ಸುತ್ತಾಡುತ್ತಿದ್ದ ಅನೇಕರನ್ನು ತಡೆದ ಪೊಲೀಸರು ಅವರಿಗೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದರು.