ಹುಬ್ಬಳ್ಳಿ-ಧಾರವಾಡ ಸುದ್ದಿ
ಸ್ವಾಭಿಮಾನದ ಸ್ಪೂರ್ತಿಯ ಸಂತ ವಿವೇಕಾನಂದರು

ಸ್ವಾಭಿಮಾನದ ಸ್ಪೂರ್ತಿಯ ಸಂತ ವಿವೇಕಾನಂದರು

ಶಂಕರರ ತರುವಾಯ ಭಾರತದ ಮೌಲ್ಯ ಧ್ವಜಗಳನ್ನು ಎತ್ತಿ ಹಿಡಿದಂತಹ ಮಹಾಪುರುಷರು ಸ್ವಾಮಿ ವಿವೇಕಾನಂದರು. ಅಬಾಲವೃದ್ದರಾಗಿ ಈಗಲೂ ಕೂಡ ನಾವು ಎಲ್ಲರೂ ಕೂಡ ಮೆಚ್ಚುವಂತಹ ಒಬ್ಬ ನಾಯಕ ವಿವೇಕಾನಂದರು. ಆಧ್ಯಾತ್ಮ ವಿಜ್ಞಾನ ಎಲ್ಲ ವಿಷಯಗಳ ಘರ್ಜನೆಯನ್ನು ಮಾಡಿದಂತಹ ಸಾಮ್ರಾಟ್ ಎಂದೇ ಹೇಳಬಹುದು.

ಸ್ವಾಮಿವಿವೇಕಾನಂದರ ಪ್ರತಿಯೊಂದು ಚಿಂತನೆಯೂ ಆಯಾ ಕಾಲಕ್ಕೆ ಸ್ಪೂರ್ತಿಯನ್ನು ನೀಡುವಂತಹ ಬೆಳಕಿಂಡಿಯ ಹಾಗೆ. ಹಾಗಾಗಿಯೇ ಸದಾಕಾಲಕ್ಕೂ ಅವರ ಒಂದು ವಿಚಾರಗಳು ಎಲ್ಲರಿಗೂ ಉಚಿತವಾಗಿರುತ್ತವೆ. ಮುಖ್ಯವಾಗಿ ಈ ಜನಾಂಗದ ವಿದ್ಯಾರ್ಥಿಗಳು ಅವರನ್ನು ಅನುಸರಿಸುವುದು ಉಚಿತ. ಶಿಕ್ಷಣ, ರಾಷ್ಟ್ರೀಯತೆ, ಸೇವಾಭಾವ ಆತ್ಮಶ್ರದ್ಧೆ ಮೊದಲಾದ ವಿಚಾರಗಳಿಂದ ಹೊಸತನ ನೀಡುವ ಒಂದು ಚಿಂತನಗಂಗಾ ವಿಚಾರಧಾರೆ ಪ್ರವಾಹವನ್ನೇ ಸ್ವಾಮೀಜಿಯವರು ಹರಿಸಿದರು. ನನಗೆ ವಿವೇಕಾನಂದರ ವಿಚಾರಗಳು ಇಷ್ಟವಾಗುವುದು ಮುಖ್ಯವಾಗಿ ಅವರಲ್ಲಿರ ತಕ್ಕಂತಹ ಒಂದು ಸ್ವಾಭಿಮಾನ. ಅವರು ಹೇಳುತ್ತಾರೆ.

ಭಾರತಕ್ಕೆ ಕೊರತೆಯಿರುವುದು ತತ್ವಶಾಸ್ತ್ರದಲ್ಲಿ ಅಲ್ಲ, ಸಂಸ್ಕೃತಿಯಲ್ಲೂ ಅಲ್ಲ, ಕೌಶಲ್ಯದಲ್ಲಿ ಅಲ್ಲ, ಸಂಪನ್ಮೂಲಗಳಲ್ಲಿ ಅಲ್ಲ, ಸ್ವಾಭಿಮಾನ ದಲ್ಲಿ ಅಷ್ಟೇ. ನಾವು ಎದೆತಟ್ಟಿ ದೇಶಾಭಿಮಾನವನ್ನು ಮೆರೆಯುವ ಭಾವ ನಮ್ಮಲ್ಲಿ ಉಂಟಾಗಬೇಕು ನಾನು ನನ್ನಲ್ಲಿರುವ ಸಾಮರ್ಥ್ಯವನ್ನು ಎದೆತಟ್ಟಿ ಹೇಳುವ ಧೈರ್ಯ ನನಗೆ ಇರಬೇಕು: ಎಂದು ಭಾರತಕ್ಕೆ ಭಾರತೀಯ ಶಿಕ್ಷಣವನ್ನು ನೀಡಿ, ಚಾರಿತ್ರ್ಯ ನಿರ್ಮಾಣದ ತರಬೇತಿಯನ್ನು ನೀಡಿ ಸ್ವಾಭಿಮಾನದ ಪಾಠವನ್ನು ಕಲಿಸಿ ಎಂದು ಅವರು ಪುನಹ ಎಲ್ಲರಿಗೂ ಹೇಳಿದರು. ಅವರ ಸಿಂಹವಾಣಿ ಶತಮಾನ ಕಳೆದರೂ ಈಗಲೂ ನಮ್ಮ ಕಿವಿಯಲ್ಲಿ ಘರ್ಜಿಸುವುದಕ್ಕೆ ಕಾರಣ ಅವರಿಗೆ ಅಂತಹ ಒಂದು ಸಮಾಜಸೇವೆಯ ಭಾವ. ತಾವು ನುಡಿದಂತೆ ನಡೆದದ್ದು ಅವರ ಮುಖ್ಯವಾದ ಶಕ್ತಿ. ತಮಗೆ ಬಂದ ಜನಬಲ ಧನಬಲಗಳನ್ನು ದೇಶ ಜಾಗೃತಿಗಾಗಿ, ಸಾಹಿತ್ಯ ನಿರ್ಮಾಣಕ್ಕಾಗಿ, ಧಾರ್ಮಿಕ ಜಾಗೃತಿಗಾಗಿ, ಶಿಕ್ಷಣ ಸಂಸ್ಥೆಗಳು, ಚಿಕಿತ್ಸಾಲಯಗಳನ್ನು ದಲಿತರ ಸೇವೆಗಾಗಿ ಬಳಸಿದರು. “ದರಿದ್ರೊ ನಾರಾಯಣೋ ಹರಿ:” ಅಂದರೆ ದೀನ-ದಲಿತರ ಸೇವೆಯಲ್ಲಿಯೇ ದೇವರು ಇರುತ್ತಾರೆ ಎಂಬುದನ್ನು ಸಾರಿ ಹೇಳಿದರು.
“ಕಾಸಿಲ್ಲದೆ ನಾನು ಮೂರುವರೆ ವರ್ಷ ಸಮಯದಲ್ಲಿ ಅರ್ಧ ಪ್ರಪಂಚವನ್ನೇ ಗೆದ್ದಿದ್ದೇನೆ” ಈ ವ್ಯತ್ಯಾಸಕ್ಕೆ ಕಾರಣ ಏನು? ಎಂಬ ಪ್ರಶ್ನೆಯನ್ನು ಅವರು ಯುವಕರಿಗೆ ಕೇಳುತ್ತಾ ಅದಕ್ಕೆ ಉತ್ತರವನ್ನು ಕೂಡ ತಾವೇ ಹೇಳುತ್ತಾರೆ, ಕಾರಣ ಇಷ್ಟೇ ನಾನು ನನ್ನ ಸಾಮರ್ಥ್ಯಗಳನ್ನು ಎಂದು ಸಂದೇಹಿಸಲಿಲ್ಲ ಯಾವುದನ್ನಾದರೂ ಸಾಧಿಸಲು ನನಗೆ ಸಾಧ್ಯ ಎಂಬ ಪ್ರಶ್ನೆ ನನ್ನಲ್ಲಿ ಸುಳಿಯಲೇ ಇಲ್ಲ. ನಾನು ನಮ್ಮ ಭಾರತೀಯ ಧರ್ಮಗ್ರಂಥಗಳ ಸಂದೇಶವನ್ನು ಕೇವಲ ಓದಲಿಲ್ಲ.ಅದನ್ನೇ ಅನುಸರಿಸಿದೆ. ಪ್ರತಿ ಕ್ಷೇತ್ರದಲ್ಲಿಯೂ ಸ್ಪರ್ಧೆಯನ್ನೇ ಎದುರಿಸುತ್ತಿರುವ ಈ ಸಂದರ್ಭದಲ್ಲಿ ವಿವೇಕಾನಂದರ ವಿಚಾರಗಳು ಯುವಕರಿಗೆ, ವಿದ್ಯಾರ್ಥಿಗಳಿಗೆ ಸ್ಫೂರ್ತಿ ಯನ್ನು ನೀಡುತ್ತವೆ. ನನ್ನಿಂದ ಆಗದೆಂಬ ಉದಾಸೀನದ ಒಂದು ಭಾವ ಕಳೆದು ನಾನಿಲ್ಲದಿದ್ದರೆ ಇನ್ನೋರ್ವ ನಿಲ್ಲ ಎಂಬ ಸ್ವಾಭಿಮಾನದ ಗರ್ಭ ಮೂಡಿಸಿದ ಸ್ಫೂರ್ತಿಯುತ ಸಂತ. ಬದುಕಿನ ಪರಿಪೂರ್ಣ ಅಧ್ಯಯನ ಹಾಗೂ ಪಾಲನೆಯನ್ನು ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಿದರು. ಅವರ ಆದರ್ಶ ನಮ್ಮೆಲ್ಲರಿಗೆ ಒಂದು ದಾರಿ ದೀಪವಾಗಲಿ.

“Don’t be jealous with anyone.Don’t comparewith anyone. Just focus on becoming the best version of yourself”  ಎಂಬುದೊಂದು ವ್ಯಕ್ತಿ ತನ್ನ ಸಾಮರ್ಥ್ಯದ ಬಗ್ಗೆ ನಂಬಿಕೆ ಇಡಬೇಕೆಂಬುದು ಒಂದು ಕಡೆಯಾದರೆ,ತನ್ನ ಕರ್ತವ್ಯದ ಬಗ್ಗೆ ಅಷ್ಟೇ ಪ್ರೀತಿ ಇರಬೇಕೆಂಬುದು ಈರೀತಿ ಹೇಳುತ್ತಾರೆ.  “Life is  Easy,when it is Busy.Life is not Easy,when it is lazy”  ಯುವ ದಿನದ ಶುಭಾಶಯಗಳು.

ಡಾ.ಭಾಗ್ಯಜ್ಯೋತಿ ಕೋಟಿಮಠ

 

 

administrator

Related Articles

Leave a Reply

Your email address will not be published. Required fields are marked *