ಹುಬ್ಬಳ್ಳಿ-ಧಾರವಾಡ ಸುದ್ದಿ
ಶಾಸಕ ಅಬ್ಬಯ್ಯರಿಗೆ ಸೋಂಕು ದೃಢ

ಶಾಸಕ ಅಬ್ಬಯ್ಯರಿಗೆ ಸೋಂಕು ದೃಢ

1 ವಾರ ಕಾಲ ಹೋಂ ಕ್ವಾರಂಟೈನ್
ಹುಬ್ಬಳ್ಳಿ: ಹು-ಧಾ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಕೋವಿಡ್-೧೯ ಸೋಂಕು ದೃಢಪಟ್ಟಿದ್ದು, ವೈದ್ಯರ ಸಲಹೆ ಮೇರೆಗೆ 1 ವಾರಗಳ ಕಾಲ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೋವಿಡ್ ಸೋಂಕಿ ನಿಂದಾಗಿ ೧ ವಾರ ಕಾಲ ಕ್ವಾರಂಟೈನಲ್ಲಿರುವುದರಿಂದ ಕ್ಷೇತ್ರದ ಭಾಂದವರು ಯಾರೂ ಸಹ ನನ್ನ ಮನೆಯತ್ತ ಬರಬಾರದೆಂದು ಹಾಗೂ ತಮ್ಮ ಯಾವುದೇ ಕೆಲಸ-ಕಾರ್ಯಗಳಿಗೆ ಪಾಲಿಕೆ ಆವರಣದಲ್ಲಿರುವ ನನ್ನ ಕಚೇರಿಗೆ ಭೇಟಿ ನೀಡಿ ನನ್ನ ಆಪ್ತ ಸಹಾಯಕರಾದ ನಾಸಿರ ಅಸುಂಡಿ-  97397 55699, ರಾಜು ಹಾದಿಮನಿ- 9945959599, ಶಿವಕುಮಾರ್- 9740576424 ಇವರನ್ನು ಸಂಪರ್ಕಿಸಬೇಕೆಂದು ಮನವಿ ಮಾಡಿದ್ದಾರೆ.
ಮತದಾರರ ಆಶೀರ್ವಾದ ನನ್ನ ಮೇಲೆ ಇರುವುದರಿಂದ ಶೀಘ್ರ ಗುಣಮುಖ ನಾಗಿ ಮತ್ತೆ ಕ್ಷೇತ್ರದ ಹಾಗೂ ಜನರ ಸೇವೆಗೆ ಹಿಂದಿರುಗುತ್ತೇನೆ. ನನ್ನನ್ನು ಭೇಟಿಯಾದವರಲ್ಲಿ ಯಾರಿಗಾದರೂ ಕೊರೋನಾ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳುವಂತೆ ಶಾಸಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಎರಡನೇ ಅಲೆಯ ಸಂದರ್ಭದಲ್ಲಿ ಅವರು ಕೋವಿಡ್ ಪೀಡಿತರಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚೇತರಿಸಿಕೊಂಡಿದ್ದರು.

 

administrator

Related Articles

Leave a Reply

Your email address will not be published. Required fields are marked *