ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡರ ಅವರೊಂದಿಗೆ ಭಾಗಿದಾರಿಕೆಯಲ್ಲಿ ಗೋವಾದ ಡೆಲ್ಟೀನ್ ಜ್ಯಾಕ್ ಕಸಿನೋದಲ್ಲಿ ಹಣ ಹೂಡಿಕೆ ಮಾಡಿದ್ದೆ, ಆ ಹಣವನ್ನು ವಾಪಸ್ ಕೇಳಿದಕ್ಕೆ ಗಿರೀಶ್ ಗದಿಗೆಪ್ಪಗೌಡರ ಹಾಗೂ ಅವರ ಸಹಚರರು ಸೇರಿಕೊಂಡು ನನ್ನ ಮೇಲೆ ಹಲ್ಲೇ ನಡೆಸಿದ್ದಾರೆ. ಈ ಬಗ್ಗೆ ಪೋಲಿಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ನನಗೆ ಜೀವ ಬೆದರಿಕೆ ಇರುವ ಕಾರಣ ನನಗೆ ಮತ್ತೆ ನನ್ನ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಬೇಕೆಂದು ಉದ್ಯಮಿ ರಾಮತೀರ್ಥ ಐರಸಂಗ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ನಾನು ಮತ್ತೆ ಗಿರೀಶ್ ಗದಿಗೆಪ್ಪಗೌಡರ ಕೆಲವು ವರ್ಷಗಳಿಂದ ಸ್ನೇಹಿತರಾಗಿದ್ದು, ಅವರ ಮಾತಿನಂತೆ ಧಾರವಾಡದ ನನ್ನ ಮೂವರು ಮಿತ್ರರು ಸೇರಿ ೩೦ ಲಕ್ಷ ರೂಪಾಯಿ ಹಣವನ್ನು ಗಿರೀಶ್ ಅವರೊಡನೆ ಕ್ಯಾಸಿನೋದಲ್ಲಿ ಹೂಡಿದ್ದೇವೆ. ಆದರೆ ಹಣ ಹೂಡಿಕೆ ಮಾಡಿದ ನಂತರ ಲಾಕ್ಡೌನ್ ನಿಂದ ವ್ಯವಹಾರಕ್ಕೆ ಮೇಲಿಂದ ಮೇಲೆ ಅಡೆತಡೆ ಉಂಟಾಗುತ್ತಿತ್ತು. ಈ ದಿಸೆಯಲ್ಲಿ ಕಳೆದ ತಿಂಗಳು ನನ್ನ ಪಾಲನ್ನು ವಾಪಸ್ ಕೇಳಿದ್ದೆ. ಈ ಬಗ್ಗೆ ನಿರಂತರವಾಗಿ ಗಿರೀಶ್ ಅವರೊಂದಿಗೆ ಚರ್ಚೆಗಳು ನಡೆದಿವೆ. ಮೊನ್ನೆ ಜ.೧೨ ರಂದು ಹಣದ ವಿಷಯವಾಗಿ ಮಾತನಾಡೋಣ ಎಂದು ನನಗೆ ಲ್ಯಾಮಿಂಗ್ಟನ್ ರಸ್ತೆಯ ಸ್ವಾತಿ ಹೊಟೇಲ್ಗೆ ಕರೆದಿದ್ದರು. ಆ ವೇಳೆ ಹೋದಾಗ ನನ್ನ ಮೇಲೆ ಗಿರೀಶ್ ಗದಿಗೆಪ್ಪಗೌಡರ ಹಾಗೂ ಅವರೊಂದಿಗೆ ಇದ್ದ ೧೫ ಜನರು ಹಲ್ಲೇ ಮಾಡಿದ್ದಾರೆ. ಪರಿಣಾಮ ನನ್ನ ಎರಡು ಪಕ್ಕೆಲುಬು ಮುರಿದಿವೆ. ಈ ಬಗ್ಗೆ ಉಪನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ. ಆದರೆ ಘಟನೆ ನಡೆದು ನಾಲ್ಕು ದಿನಗಳು ಕಳೆಯುತ್ತಾ ಬಂದರು ಈವರೆಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವಾಗಿಲ್ಲ ಎಂದು ಆರೋಪಿಸಿದರು.
ಘಟನೆ ಕುರಿತಂತೆ ಗಿರೀಶ್ ಗದಿಗೆಪ್ಪಗೌಡರ ರಾಜಕೀಯ ಪ್ರಭಾವ ಬೆಳೆಸಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಅನುಮಾನ ಕಂಡುಬರುತ್ತಿದೆ. ಹೀಗಾಗಿ ಪೋಲಿಸ್ ಆಯುಕ್ತರು ಈ ಪ್ರಕರಣ ಕುರಿತಂತೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ದರು.
ಗೋಷ್ಠಿಯಲ್ಲಿ ಸುನಿಲ್ ಜೋಶಿ ಇದ್ದರು.