ಧಾರವಾಡ : ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಾಜಿ ಕಾರ್ಪೊರೇಟರ್‌ಗೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯವು, ದೂರುದಾರರಿಗೆ ಹಣ ನೀಡಬೇಕು. ತಪ್ಪಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಮಾಜಿ ಮಹಾನಗರ ಪಾಲಿಕೆ ಸದಸ್ಯ ಶ್ರೀಕಾಂತ ಜಮನಾಳ ಶಿಕ್ಷೆ ಮತ್ತು ದಂಡಕ್ಕೊಳಗಾದವರು. ಶ್ರೀಕಾಂತ ಜಮನಾಳ ಅವರು ಇಲ್ಲಿನ ಸೈದಾಪೂರ ಡುಮ್ಮಗೇರಿ ಓಣಿಯ ಚಂದ್ರಶೇಖರ ಗಂಗಪ್ಪ ಮೇಸ್ತ್ರಿ ಎಂಬುವರಿಗೆ ವ್ಯವಹಾರವೊಂದಕ್ಕೆ ಸಂಬಂಧಿಸಿದಂತೆ ಜಮನಾಳ ದಿ.23.02.2017 ರಂದು 2 ಲಕ್ಷ ರೂಪಾಯಿಗಳ ಚೆಕ್ ನೀಡಿದ್ದರು. ಆದರೆ, ಜಮನಾಳ ಅವರ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದ ಕಾರಣ ಚೆಕ್ ವಾಪಸ್ಸಾಗಿತ್ತು. ಆಗ ಚಂದ್ರಶೇಖರ ಅವರು ಜಮನಾಳಗೆ ಮಾಹಿತಿ ನೀಡಿದರೂ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ. ಇದರಿಂಧ ಬೇಸತ್ತ ಚಂದ್ರಶೇಖರ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯಲಕ್ಷ್ಮೀ ಗಾನಾಪೂರ ಅವರು ದೂರುದಾರರಿಗೆ 2.14 ಲಕ್ಷ ರೂಪಾಯಿ ಮತ್ತು 1 ಸಾವಿರ ರೂಪಾಯಿ ಅಭಿಯೋಜನೆಯ ಶುಲ್ಕವನ್ನು ಭರಿಸುವಂತೆ ಆದೇಶಿಸಿದ್ದಾರೆ. ಒಂದು ವೇಳೆ ಭರಿಸದಿದ್ದರೆ 6 ತಿಂಗಳ ಶಿಕ್ಷೆ ವಿಧಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.