ಹುಬ್ಬಳ್ಳಿ-ಧಾರವಾಡ ಸುದ್ದಿ
ಶೆಟ್ಟರ್,ಬೆಲ್ಲದಗೆ ಮೇಯರ್, ಉಪಮೇಯರ್ ಪಟ್ಟ

ಶೆಟ್ಟರ್,ಬೆಲ್ಲದಗೆ ಮೇಯರ್, ಉಪಮೇಯರ್ ಪಟ್ಟ

ಕಾಂಗ್ರೆಸ್‌ನಿಂದ ವಿನೂತನ ಪ್ರತಿಭಟನೆ
ಧಾರವಾಡ: ಹು-ಧಾ ಮೇಯರ ಮತ್ತು ಉಪ ಮೇಯರ ಆಯ್ಕೆ ವಿಳಂಬ ಖಂಡಿಸಿ ರಾಣಿ ಚೆನ್ನಮ್ಮ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಾಲಿಕೆಯ ಧಾರವಾಡ ಕಚೇರಿ ಆವರಣದಲ್ಲಿ ವಿನೂತನ ಪ್ರತಿಭಟನೆ ನಡೆಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಅವರು, ಮಹಾನಗರ ಪಾಲಿಕೆ ಚುನಾವಣೆಯನ್ನು ರಾಜ್ಯದಲ್ಲಿನ ಬಿಜೆಪಿ ಸರ್ಕಾರ ತನ್ನ ಸ್ವಾರ್ಥಕ್ಕಾಗಿ ಮುಂದೂಡತ್ತ ಬಂದಿತು. ಇದೀಗ ಚುನಾವಣೆ ಜರುಗಿ ಐದು ತಿಂಗಳು ಕಳೆಯುತ್ತ ಬಂದರೂ ನೂತನ ಮೇಯರ ಮತ್ತು ಉಪ ಮೇಯರ ಆಯ್ಕೆ ಮಾಡಲು ವಿಳಂಬ ನೀತಿ ಅನುಸರಿಸುತ್ತಿದೆ. ಈ ಮೂಲಕ ಚುನಾಯಿತ ಪ್ರತಿನಿಧಿಗಳು ಮತ್ತು ಚುನಾಯಿ ಸಿದ ಮತದಾರರನ್ನು ಅವಮಾನಿಸಲಾಗುತ್ತಿದೆ. ಜೊತೆಗೆ ಅಭಿವೃದ್ಧಿಗೂ ಅಡ್ಡಗಾಲು ಹಾಕುತ್ತಿದೆ ಎಂದು ಆರೋಪಿಸಿದರು.


ರಾಜ್ಯ ಸರಕಾರದ ಇಂತಹ ಬೇಜವಾಬ್ದಾರಿಯನ್ನು ಕಾಂಗ್ರೆಸ್ ಖಂಡಿಸುತ್ತದೆ. ಈ ನಿಟ್ಟಿನಲ್ಲಿ ಹೋರಾಟ ಮುಂದುವರೆಸಲಿದೆ ಎಂದ ನೀರಲಕೇರಿ, ಇಂದು ಜಗದೀಶ ಶೆಟ್ಟರ್ ಅವರನ್ನು ಮೇಯರ ಮತ್ತು ಅರವಿಂದ ಬೆಲ್ಲದ ಅವರನ್ನು ಉಪಮೇಯರ ಆಗಿ ಆಯ್ಕೆ ಮಾಡುವ ಮುಖಾಂತರ ಖಂಡಿಸಲಾಗುತ್ತಿದೆ ಎಂದು ಮಾತನಾಡಿದ ಉಳಿದ ಮುಖಂಡರು ಆಪಾದಿಸಿದರು.
ಪಾಲಿಕೆಯ ಆವರಣದಲ್ಲಿ ಜಗದೀಶ್ ಶೆಟ್ಟರ್ ಅವರು ಮಹಾಪೌರರಾಗಿ ಹಾಗೂ ಅರವಿಂದ ಬೆಲ್ಲದ ಅವರು ಉಪ ಮಹಾಪೌರರಾಗಿ ಪ್ರಮಾಣ ವಚನ ತೆಗಿದುಕೊಳ್ಳುವ ಅಣಕು ಪ್ರದರ್ಶನ ನಡೆಸಿದರು.
ಮಹಾನಗರ ಜಿಲ್ಲಾ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಎಐಸಿಸಿ ಸದಸ್ಯ ದೀಪಕ್ ಚಿಂಚೋರೆ, ರಾಣಿ ಚೆನ್ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ ಗೌರಿ,ಮುಖಂಡರಾದ ರಜತ್ ಉಳ್ಳಾಗಡ್ಡಿಮಠ, ಅನ್ವರ ಮುಧೋಳ, ಸ್ವಾತಿ ಮಾಳಗಿ, ಪಾಲಿಕೆ ಸದಸ್ಯರಾದ ರಾಜಶೇಖರ ಕಮತಿ,ಇಮ್ರಾನ ಯಲಿಗಾರ, ಶಂಭುಗೌಡ ಸಾಲಮನಿ, ಡಾ. ಮಯೂರ ಮೋರೆ, ಇಕ್ಬಾಲ್ ನವಲೂರ ಪ್ರಮುಖರಾದ ಸಂತೋಷ ನೀರಲಕಟ್ಟಿ, ಆನಂದ ಸಿಂಗನಾಥ, ಅಬ್ದುಲ ದೇಸಾಯಿ, ಇಕ್ಬಾಲ್ ನವಲೂರ, ಜೇಮ್ಸ್ ಯಾಮಾ, ರೋಹನ ಹಿಪ್ಪರಗಿ, ಶಂಕರ ಹೂಸಮನಿ, ಸುರೇಖಾ ಮೇಧಾ ಇನ್ನಿತರರು ಭಾಗವಹಿಸಿದ್ದರು.

administrator

Related Articles

Leave a Reply

Your email address will not be published. Required fields are marked *