ಹುಬ್ಬಳ್ಳಿ-ಧಾರವಾಡ ಸುದ್ದಿ
ವಿಕೃತಿ ಮೆರೆದ ನ್ಯಾಯಾಧೀಶರ ವಜಾಗೊಳಿಸಿ

ವಿಕೃತಿ ಮೆರೆದ ನ್ಯಾಯಾಧೀಶರ ವಜಾಗೊಳಿಸಿ

ಹುಬ್ಬಳ್ಳಿ : ನಿನ್ನೆ ಗಣರಾಜ್ಯೋತ್ಸವ ದಿನದಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿರುವ ರಾಯಚೂರ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರು ನ್ಯಾಯಾಂಗ ನಿಂದನೆ ಮಾಡಿದ್ದು ಹೈಕೋರ್ಟ್ ನ್ಯಾಯಾಧೀಶರನ್ನು ನ್ಯಾಯಾಂಗದಿಂದ ಹೊರ ಹಾಕಿ ಶಿಕ್ಷೆ ನೀಡಬೇಕು ಎಂದು ಕೆಪಿಸಿಸಿ ಪರಿಶಿಷ್ಟ ವಿಭಾಗದ ಅಧ್ಯಕ್ಷ ಎಫ್.ಎಚ್.ಜಕ್ಕಪ್ಪನವರ ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು ಸಂವಿಧಾನ ಜಾರಿ ಉತ್ಸವದ ಸಮಯದಲ್ಲಿ ಅಂಬೇಡ್ಕರ್ ಚಿತ್ರ ತೆಗೆದರೆ ಕಾರ್ಯಕ್ರಮ ಭಾಗವಹಿಸುತ್ತೇನೆ ಎಂದು ಹೇಳಿ ನಾಯಾಧೀಶರು ನ್ಯಾಯಾಂಗ ನಿಂದನೆ ಮಾಡಿದ್ದಲ್ಲದೇ ನ್ಯಾಯಾಧೀಶರು ತಾವು ತಪ್ಪು ಮಾಡಿದನ್ನು ಒಪ್ಪಿ ಕ್ಷಮೆ ಕೇಳಿದ್ದಾರೆ. ಪವಿತ್ರವಾದ ನ್ಯಾಯಾಂಗದಲ್ಲಿ ಇಂತಹ ಮನಸ್ಥಿತಿಯ ನ್ಯಾಯಾಧೀಶರು ಏನು ತೀರ್ಪು ನೀಡುತ್ತಾರೆಂದರಲ್ಲದೇ ನ್ಯಾಯಾಂಗದಲ್ಲಿ ಮೇಜರ್ ಸರ್ಜರಿ ಆಗಬೇಕಾಗಿದೆ ಎಂದರು.
ನ್ಯಾಯಾಂಗ ಹೊಲಸು ಗೊಳಿಸಿದ ಮಲ್ಲಿಕಾರ್ಜುನ ಗೌಡರಂತ ಜಾತಿ ವಾದಿಗಳನ್ನು ನ್ಯಾಯಾಂಗದಿಂದ ಹೊರಗೆ ಹಾಕಬೇಕು. ಅಂಬೇಡ್ಕರ್ ಬಗ್ಗೆ ಗೌರವ ಇಲ್ಲವಾದರೆ ಹೇಗೆ. ಅವರನ್ನು ಅಗೌರವಿಸುವುದು ದೇಶವನ್ನು ಅಗೌರವಿಸಿದ ಹಾಗೆ ಎಂದರಲ್ಲದೇ ಜಾತಿ ಧರ್ಮ ಬಿಟ್ಟು ಎಲ್ಲರೂ ಒಂದು ಎಂದು ತೀರ್ಪು ನೀಡುವಂತಾಗಬೇಕೆಂದು ನ್ಯಾಯಾಧೀಶರಲ್ಲಿ ಜಕ್ಕಪ್ಪನವರ ಆಗ್ರಹಿಸಿದರು.


ಸಂವಿಧಾನ ಶಿಲ್ಪಿ ಅವರ ಭಾವಚಿತ್ರಕ್ಕೆ ಅವಮಾನಿಸುವ ಮೂಲಕ ವಿಕೃತ ಮನಸ್ಥಿತಿ ಮೆರೆದಿದ್ದಾರೆ.ಇದು ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಸಂಗತಿ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಕಚೇರಿಗಳಲ್ಲಿ ಅಂಬೇಡ್ಕರ್ ಚಿತ್ರ ಇರಬೇಕೆಂದು ಆದೇಶ ಮಾಡಿದೆ. ಸಾರ್ವಜನಿಕ ಸ್ಥಳದಲ್ಲಿ ಅವರಿಗೆ ಅವಮಾನ ಮಾಡಿದರೆ ಶಿಕ್ಷೆ ನೀಡಬೇಕು ಎಂದು ನ್ಯಾಯಾಲಯ ತಿಳಿಸಿದೆ
ಸುಪ್ರೀಂ ಕೋರ್ಟ್ ಇಂತವರನ್ನು ಗುರುತಿಸಿ ಅವರನ್ನು ಕೆಳಗಿಳಿಸಿ ಶಿಕ್ಷೆ ನೀಡಬೇಕು ಎಂದರು.
ದಲಿತರ ಮೇಲೆ ಹಲ್ಲೆ ನಡೆಸಿದವರಿಗೆ ಯಾಕೆ ಶಿಕ್ಷೆ ಯಾಗುತ್ತಿಲ್ಲ ಎಂಬುವುದಕ್ಕೆ ಮಲ್ಲಿಕಾರ್ಜುನ ಗೌಡವಂತವರು ಅಲ್ಲಿರುವುದೇ ಕಾರಣ ಎಂಬ ಅನುಮಾನ ಬರುತ್ತಿದೆ.ಈ ಘಟನೆಯನ್ನು ಎಲ್ಲ ನ್ಯಾಯಾಧೀಶರು ಖಂಡಿಸಿ ಜನರ ನಂಬಿಕೆ ಉಳಿಸಿಕೊಳ್ಳಬೇಕೆಂದರು.
ಧಾರವಾಡ ಎಸ್ ಸಿ ಘಟಕ ಅಧ್ಯಕ್ಷ ಶಂಕರ ಹೊಸಮನಿ ಪತ್ರಿಕಾಗೋಷ್ಟಿಯಲ್ಲಿದ್ದರು.

 

administrator

Related Articles

Leave a Reply

Your email address will not be published. Required fields are marked *