ಹುಬ್ಬಳ್ಳಿ-ಧಾರವಾಡ ಸುದ್ದಿ
ಅಪ್ರಾಪ್ತಳೊಂದಿಗೆ ದೈಹಿಕ ಸಂಪರ್ಕ: ವ್ಯಕ್ತಿ ಬಂಧನ

ಅಪ್ರಾಪ್ತಳೊಂದಿಗೆ ದೈಹಿಕ ಸಂಪರ್ಕ: ವ್ಯಕ್ತಿ ಬಂಧನ

ಧಾರವಾಡ: ಅಪ್ರಾಪ್ತಳೊಂದಿಗೆ ದೈಹಿಕ ಸಂಪರ್ಕ ಬೆಳಸಿ, ಆಕೆ ಗರ್ಭಿಣಿ ಯಾಗಲು ಕಾರಣವಾದ ಆರೋಪದ ಮೇಲೆ ಯುವಕನೊಬ್ಬನು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಇಲ್ಲಿನ ಜನ್ನತನಗರದ ಅಪ್ರಾಪ್ತಳನ್ನು ಪ್ರೀತಿಸುವುದಾಗಿ ನಂಬಿಸಿದ ಅದೇ ಪ್ರದೇಶದ ಅಪ್ರಾಪ್ತ ಯುವಕ ಇದೀಗ ವಿದ್ಯಾಗಿರಿ ಠಾಣೆಯ ಪೊಲೀಸರಿಂದ ಬಂಧಿಯಾಗಿದ್ದಾನೆ.
ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿದ ಪರಿಣಾಮ ಆಕೆ ಗರ್ಭಿಣಿಯಾಗಿದ್ದಳು. ನಂತರ ಮನೆಯವರಿಗೆ ವಿಷಯ ಗೊತ್ತಾಗಿದೆ. ಹೀಗಾಗಿ ಬಾಲಕಿಯ ಮನೆಯವರು ಯುವಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ವಿದ್ಯಾಗಿರಿ ಠಾಣೆಯ ಸಿಪಿಐ ಎಸ್.ಎಂ. ಬಾಳನಗೌಡ್ರ ಅವರು ಬಾಲಕನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *