ಹುಬ್ಬಳ್ಳಿ-ಧಾರವಾಡ ಸುದ್ದಿ
 ಸ್ಪರ್ಧಾತ್ಮಕ ಪರೀಕ್ಷೆಯ ಆನ್‌ಲೈನ್ ತರಗತಿ: ದಾಖಲೆಯ ವೀಕ್ಷಣೆ

 ಸ್ಪರ್ಧಾತ್ಮಕ ಪರೀಕ್ಷೆಯ ಆನ್‌ಲೈನ್ ತರಗತಿ: ದಾಖಲೆಯ ವೀಕ್ಷಣೆ

ಧಾರವಾಡ: ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ನಡೆಸಲಾಗುವ 3 ತಿಂಗಳ ಕೆಎಎಸ್ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ತರಗತಿಗಳಿಗೆ ಚಾಲನೆ ನೀಡಲಾಯಿತು.


ಧಾರವಾಡದ ಸಿ ಬಿ ನಗರದಲ್ಲಿ ನಿರ್ಮಿಸಲಾಗಿರುವ ನೂತನ ಸ್ಟುಡಿಯೊದಲ್ಲಿ ಆನ್‌ಲೈನ್ ತರಗತಿಗಳಿಗೆ ಮಾಜಿ ಸಚಿವ ಸಂತೋಷ್ ಲಾಡ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ರಾಜ್ಯದ ಬಡ ಮತ್ತು ಪ್ರತಿಭಾವಂತ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ಕಡಿಮೆ ದರದಲ್ಲಿ ತರಬೇತಿ ಸಿಗಬೇಕು ಎಂಬ ಉದ್ದೇಶದಿಂದ ಈ ಆನ್‌ಲೈನ್ ಕ್ಲಾಸ್‌ಗಳನ್ನು ಆರಂಭಿಸಲಾಗಿದೆ. ಈ ತರಗತಿಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಯಶಸ್ವಿಯಾಗಿ. ನಿಮ್ಮ ಜೀವನದ ತಿರುವಿಗೆ ಈ ತರಗತಿಗಳು ಸಹಾಯವಾದರೆ ಅದೇ ನಮಗೆ ಸಿಗುವ ಖುಷಿ. ಇವುಗಳಿಂದ ಎಲ್ಲರಿಗೂ ಸಹಾಯವಾಗಲಿ. ಭವಿಷ್ಯ ಉಜ್ವಲವಾಗಲಿ” ಎಂದು ಶುಭ ಹಾರೈಸಿದರು.
ಈಗಾಗಲೇ 1.10 ಲಕ್ಷ ಪರೀಕ್ಷಾ ಆಕಾಂಕ್ಷಿಗಳು ತರಗತಿಗಳಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಮೊದಲ ದಿನ ನಡೆದ ತರಗತಿಗಳಿಗೆ ೯೦ಸಾವಿರ ೮೭೩ಮಂದಿ ಹಾಜರಾಗಿದ್ದರು.
ಸಮಾರಂಭದಲ್ಲಿ ಪಕ್ಷದ ವಕ್ತಾರೆ ಕವಿತಾ ರೆಡ್ಡಿ, ಸಂತೋಷ್ ಲಾಡ್ ಫೌಂಡೇಶನ್‌ನ ಆನಂದ ಕಲಾಲ್, ಮಂಜುನಾಥ್ ಮುರಳ್ಳಿ, ಎಸ್.ಆರ್. ಪಾಟೀಲ್, ದಾನಪ್ಪ ಕಬ್ಬೇರ ಇನ್ನಿತರರಿದ್ದರು.

ಲಾಡ್ ಫೌಂಡೇಶನ್ ಹಮ್ಮಿಕೊಂಡಿರುವ ಕೆಎಎಸ್ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ 3 ತಿಂಗಳ ಉಚಿತ ಆನ್‌ಲೈನ್ ತರಗತಿಗಳನ್ನು ಕೇವಲ 48 ಗಂಟೆಗಳಲ್ಲಿ ಬರೊಬ್ಬರಿ 90873 ಜನ ಆಕಾಂಕ್ಷಿಗಳು ವೀಕ್ಷಿಸಿದ್ದಾರೆ.ಈ ಸಂಖ್ಯೆ ಇನ್ನೂ ಏರುತ್ತಲೇ ಸಾಗುತ್ತಿದೆ. ಈ ಸ್ಪಂದನೆಯಿಂದ ನಮ್ಮ ಉತ್ಸಾಹ ಇಮ್ಮಡಿಯಾಗಿದೆ.

ಆನಂದ ಕಲಾಲ, ಲಾಡ್ ಫೌಂಡೇಶನ್

administrator

Related Articles

Leave a Reply

Your email address will not be published. Required fields are marked *