ಹುಬ್ಬಳ್ಳಿ-ಧಾರವಾಡ ಸುದ್ದಿ
ಖಾವಿ ಜತೆ ಶ್ವೇತವಸ್ತ್ರಧಾರಿಯಾದ ದಿಂಗಾಲೇಶ್ವರ ಶ್ರೀ

ಖಾವಿ ಜತೆ ಶ್ವೇತವಸ್ತ್ರಧಾರಿಯಾದ ದಿಂಗಾಲೇಶ್ವರ ಶ್ರೀ

ಗದಗ: ಜಿಲ್ಲೆಯ ಶಿರಹಟ್ಟಿ ಫಕೀರೇಶ್ವರ ಸಂಸ್ಥಾನಮಠಕ್ಕೆ ದಿಂಗಾಲೇಶ್ವರ ಸ್ವಾಮಿಜಿ ಉತ್ತರಾಧಿಕಾರಿ ಹಿನ್ನೆಲೆಯಲ್ಲಿ ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಇಂದು ಖಾವಿ ಜೊತೆಗೆ ಶ್ವೇತವಸ್ತ್ರಧಾರಿಯಾಗಿ ಆಗಮಿಸಿದರು.
ಹಿರಿಯ ಫಕೀರ ಸಿದ್ಧರಾಮ ಸ್ಬಾಮಿಜಿಗಳೊಂದಿಗೆ ಆಗಮಿಸಿದ ಉತ್ತರಾಧಿಕಾರಿ ದಿಂಗಾಲೇಶ್ವರ ಸ್ವಾಮಿಜಿ ಅವರು ತಲೆಮೇಲೆ ಖಾವಿಪೇಠ, ಕೊರಳಲ್ಲಿ ಹಸಿರು ಶಾಲು, ಬಿಳಿ ಬಣ್ಣದ ಫಕೀರ ಪೋಷಾಕಿನೊಂದಿಗೆ ಕಾಣಿಸಿಕೊಂಡರು.


ಮುಸ್ಲಿಂ ಸಂಪ್ರದಾಯದಂತೆ ಪೋಷಾಕು ತೊಟ್ಟು ಆಗಮಿಸಿದ ದಿಂಗಾಲೇಶ್ವರ
ಸ್ವಾಮಿಜಿಗೆ ಶಿರಸಿ ತೊಟ್ಲಕೆರೆಮಠದ ಶಿವಲಿಂಗ ಸ್ವಾಮೀಜಿ, ಕುಂಟೋಜಿ, ಹೊಸಳ್ಳಿ, ನೀಲಗುಂದ ಮಠ ಸೇರಿದಂತೆ ವಿವಿಧ ಮಠಾಧೀಶರು ಸಾತ್ ನೀಡಿದರು.
ಶಿರಹಟ್ಟಿ ಮಠದಲ್ಲಿಂದು ನಡೆದ ಉತ್ತರಾಧಿಕಾರಿ ಘೋಷಣಾ ಕಾರ್ಯಕ್ರಮ ದಲ್ಲಿ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ, ಜಿ.ಎಸ್.ಗಡ್ಡದದೇವಮಠ, ಮುಖಂಡರಾದ ವಿ.ವಿ. ಕಪ್ಪತ್ತನವರ, ವೈ.ಎಸ್.ಪಾಟೀಲ, ಶಿವಪ್ರಕಾಶ ಮಹಾಜನಶೆಟ್ಟರ, ಗುರುರಾಜ ಹುಣಸಿಮರದ, ಎಂ.ಎಫ್.ಹಿರೇಮಠ, ಹುಮಾಯನ್ ಮಾಗಡಿ, ಬಿಎನ್.ಡಬಾಲಿ, ಪಿ.ಎಚ್. ನೀರಲಕೇರಿ, ಸಿದ್ದಣ್ಣ ಕಂಬಾರ, ಬೈಲಪ್ಪ(ಅಪ್ಪೇಶ) ದಳವಾಯಿ ಸಹಿತ ಅನೇಕರಿದ್ದರು

.

ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಉತ್ತರಾಧಿಕಾರಿ
ಹುಬ್ಬಳ್ಳಿ: ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ ಜಗದ್ಗುರು ಫಕೀರ ಸಿದ್ಧರಾಮ ಮಹಾಸ್ವಾಮಿಗಳ ಸಂಸ್ಥಾನಮಠಕ್ಕೆ ಅದೇ ಜಿಲ್ಲೆಯ ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ನೂತನ ಉತ್ತರಾಧಿಕಾರಿಯಾಗಿ ನೇಮಕಗೊಂಡಿ ದ್ದಾರೆ.
೬೦ಕ್ಕೂ ಹೆಚ್ಚು ಶಾಖಾ ಮಠಗಳನ್ನು ಹೊಂದಿರುವ ಶಿರಹಟ್ಟಿ ಮಠವು ಹಿಂದೂ ಮುಸ್ಲೀಂ ಭಾವೈಕ್ಯತೆಯ ಮಹಾಕ್ಷೇತ್ರವಾಗಿದೆ. ನಾಡಿನ ಮಠಾಧೀಶರು, ಅಪಾರ ಭಕ್ತರು ಸಂಭ್ರಮ ಪಟ್ಟಿದ್ದಾರೆ.

ಸ್ವಾಮೀಜಿಗೆ ಅಭಿನಂದನೆ

ಗದಗ: ಹಿಂದೂ ಮುಸ್ಲಿಮ್ ಭಾವೈಕ್ಯತೆ ಹಾಗೂ ಕೋಮು ಸೌಹಾರ್ದತೆಗೆ ಹೆಸರಾಗಿ ರುವ ಶಿರಹಟ್ಟಿ ಪಕೀರೇಶ್ವರ ಸಂಸ್ಥಾನ ಮಠಕ್ಕೆ ನೂತನ ಉತ್ತರಾಧಿಕಾರಿ ಯಾಗಿ ಬಾಳೆ ಹೊಸೂರಿನ ದಿಂಗಾಲೇಶ್ವರ ಸ್ವಾಮಿಗಳು ನೇಮಕವಾಗಿರು ವುದು ಈ ಭಾಗದ ಜನತೆಗೆ ಸಂತಸ ತಂದಿದೆ ಎಂದು ಬನ್ನಿಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಸಿದ್ದಲಿಂಗ ಹೊಂಬಾಳಿಮಠ ಹೇಳಿದ್ದಾರೆ.


ಶಿರಹಟ್ಟಿ ಪಕಿರೇಶ್ವರ ಮಠಕ್ಕೆ ಗತವೈಭವವನ್ನು ಸಾರುವ ಮೂಲಕ ದೇಶದಲ್ಲಿ ಯೇ ಹಿಂದೂ ಮುಸ್ಲಿಂ ಸಂಪ್ರದಾಯವನ್ನು ಶತ ಶತಮಾನಗಳಿಂದ ಅಳವಡಿಸಿಕೊಂಡು ಇಂದಿಗೂ ಸಹ ಮಠದ ಪ್ರತಿಯೊಂದು ಆಚರಣೆಯೂ ದಿನ ನಿತ್ಯ ಹಿಂದೂ ಮುಸ್ಲಿಂ ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಶಿರಹಟ್ಟಿ ಪಕೀರೇಶ್ವರ ಮಠಕ್ಕೆ ಬಾಳೆಹೊಸೂರಿನ ಜಗದ್ಗುರು ದಿಂಗಾಲೇಶ್ವರ ಸ್ವಾಮೀಜಿ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವುದು ನಾಡಿನ ಜನರಿಗೆ ಹರ್ಷ ತಂದಿದೆ ಎಂದಿದ್ದಾರೆ.


ಬಾಲೆಹೊಸೂರಿನ ಗ್ರಾಮದ ಪ್ರತಿಯೊಂದು ಮನೆಗೆ ದಿಂಗಾಲೇಶ್ವರ ಸ್ವಾಮಿ ಗಳು ಭೇಟಿ ನೀಡಿ ಸ್ವಚ್ಛತೆ, ನೈರ್ಮಲ್ಯ, ಶೌಚಾಲಯದ ಬಳಕೆ ಬಗ್ಗೆ ಜನ ಜಾಗೃತಿ ಮೂಡಿಸಿ, ಸ್ವಾಮೀಜಿಗಳು ಜನರ ದುಶ್ಚಟ್ಟಗಳನ್ನು ಜೋಳಿಗೆಗೆ ಹಾಕಿಸುವ ಮೂಲಕ ಸಮಾಜದ ಸುಧಾರಣೆಗೆ ಪ್ರಮುಖ ಪಾತ್ರ ವಹಿಸಿರು ವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು ಎಂದು ಹೇಳಿದ್ದಾರೆ.

 

administrator

Related Articles

Leave a Reply

Your email address will not be published. Required fields are marked *