ಹುಬ್ಬಳ್ಳಿ-ಧಾರವಾಡ ಸುದ್ದಿ
ಪರಿಷತ್ತಿನ ಗತವೈಭವ ಮರಳಿ ತರಲು ಯತ್ನ

ಪರಿಷತ್ತಿನ ಗತವೈಭವ ಮರಳಿ ತರಲು ಯತ್ನ

ಸಭಾಪತಿ ಹುದ್ದೆಯ ವರ್ಷದ ಸಂಭ್ರಮದಲ್ಲಿ ಹೊರಟ್ಟಿ

ಹುಬ್ಬಳ್ಳಿ : ಉತ್ತರ ಕರ್ನಾಟಕದ ಗಟ್ಟಿ ಧ್ವನಿ, ಶಿಕ್ಷಕರ ಪಾಲಿನ ಆಪತ್ಬಾಂಧವರಾದ ಬಸವರಾಜ ಹೊರಟ್ಟಿ ತಮ್ಮ ನೇರ ನಡೆ,ನುಡಿಗಳಿಂದಲೇ ಗುರುತಿಸಿಕೊಂಡ ಸೋಲಿಲ್ಲದ ಸರದಾರ. ಶಕ್ತಿ ಸೌಧದ ಉಬಯ ಸದನಗಳ ಅತಿ ಹಿರಿಯ ಸದಸ್ಯ ಹಿರಿಮೆಯ ಅವರು ಮೇಲ್ಮನೆಯ ಸಭಾಪತಿಗಳಾಗಿ ಇಂದಿಗೆ ಒಂದು ವರ್ಷ ತುಂಬಿತು. ಸದನದ ಹಿರಿಮೆ ಹೆಚ್ಚಿಸಿದ ಅವರನ್ನು ’ಸಂಜೆ ದರ್ಪಣ’ ಅಭಿನಂದಿಸಿದಾಗ ಔಪಚಾರಿಕವಾಗಿ ಮಾತನಾಡಿ ಮನದಾಳದ ಕೆಲ ಅನಿಸಿಕೆ ಹಂಚಿಕೊಂಡರು.
ವಿಧಾನಪರಿಷತ್ತಿನ ಗತವೈಭವ ಮರಳಿ ತರಲು,ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಗಣ್ಯರನ್ನು ಕರೆತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಲ್ಲದೇ ಅಕ್ಷರಶಃ ಚಿಂತಕರ ಚಾವಡಿ ಅನ್ವರ್ಥಕವಾಗಿಸುವ ಆಶಯ ಹೊಂದಿರುವುದಾಗಿ ಹೇಳಿದರು.
ಪರಿಷತ್ತಿನ ಘನತೆಗೆ ಅಲ್ಪ ಕುಂದು ಬಂದಿದೆ ಎನ್ನುವ ಭಾವನೆ ಬಹುತೇಕರಲ್ಲಿದೆ.ವಯಕ್ತಿಕವಾಗಿ ನನಗೂ ಆ ನೋವಿದೆ.ಅದನ್ನು ನಿವಾರಿಸಿ ಇದನ್ನು ಅನುಭವ ಮಂಟಪದ ರೂಪ ನೀಡುವ ಗುರಿ ತಮ್ಮದು ಎಂದರು.
ಕಳೆದ ಬೆಳಗಾವಿ ಅಧಿವೇಶನದಲ್ಲಿನ ಗದ್ದಲದ ಬಗ್ಗೆ ಹಳಹಳಿಸಿದ ಅವರು, ಅರ್ಥಪೂರ್ಣ ಚರ್ಚೆಗಳು ನಡೆದು ವಾಸ್ತವ ಸಮಸ್ಯೆಗಳಿಗೆ ಕನ್ನಡಿಯಾಗಬೇಕೆಂದರು.
ಸತತ 7 ಬಾರಿ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ಹೊರಟ್ಟಿ ಅವರು 8ನೇ ಬಾರಿಗೆ ಕಣಕ್ಕಿಳಿಯುವುದು ಖಚಿತವಾಗಿದ್ದು ಎಲ್ಲ ಸಮುದಾಯದವರು ಗೌರವಿಸುವ ಅವರು ಮತ್ತೊಮ್ಮೆ ವಿಧಾನಸೌಧದೊಳಕ್ಕೆ ಕಾಲಿಡಬೇಕೆಂಬುದು ಉತ್ತರಕರ್ನಾಟಕದ ಸಮಸ್ತ ಪ್ರಜ್ಞಾವಂತರ ಒಕ್ಕೊರಲಿನ ಕೂಗಾಗಿದೆ.

administrator

Related Articles

Leave a Reply

Your email address will not be published. Required fields are marked *