ಹುಬ್ಬಳ್ಳಿ-ಧಾರವಾಡ ಸುದ್ದಿ

14ಕ್ಕೆ ಅರ್ಥಪೂರ್ಣ ’ರಜತ ಸಂಭ್ರಮ’ ; ಮೂರುಸಾವಿರಮಠದಲ್ಲಿ ಸ್ವಾಮೀಜಿಗಳಿಂದ ಚಾಲನೆ

10 ಸಾವಿರ ವಾರಿಯರ್ಸಗಳಿಗೆ ಅಭಿಮಾನದ ಸನ್ಮಾನ

ಹುಬ್ಬಳ್ಳಿ: ಕೊರೋನಾ ಸಂಕಷ್ಟದ ದಿನಗಳಲ್ಲಿ ಶ್ರಮಿಸಿದ ಮುಂಚೂಣಿ ಸೇನಾನಿಗಳನ್ನು ಸನ್ಮಾನಿಸಿ ಅರ್ಥಪೂರ್ಣವಾಗಿ ಗೌರವಿಸಲು ರಜತ್ ಉಳ್ಳಾಗಡ್ಡಿಮಠ ಫೌಂಡೇಶನ್ ವತಿಯಿಂದ “ರಜತ ಸಂಭ್ರಮ” ಎಂಬ ವೈಶಿಷ್ಟ್ಯಪೂರ್ಣ ಕಾರ್ಯಕ್ರಮವನ್ನು ’ಇದು ಸೇವೆ ಅಲ್ಲ ಕರ್ತವ್ಯ’ ಎಂಬ ಶೀರ್ಷಿಕೆ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ದಿ.14ರಂದು ಸಂಜೆ 4 ಗಂಟೆಗೆ ಇಲ್ಲಿನ ಮೂರುಸಾವಿರ ಮಠದ ಆವರಣದಲ್ಲಿ ರಜತ ಸಂಭ್ರಮಕ್ಕೆ ಮೂರುಸಾವಿರಮಠದ ಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿ ಚಾಲನೆ ನೀಡಲಿದ್ದು, ಪಾಲಿಕೆ ಸದಸ್ಯರು ಸೇರಿದಂತೆ ಗಣ್ಯರು ಉಪಸ್ಥಿತರಿರುವರು ಎಂದು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ರೋಟರಿ ಕ್ಲಬ್ ಸೆಂಟ್ರಲ್ ಹುಬ್ಬಳ್ಳಿ, ಇನ್ನರ್‌ವೀಲ್ ಮಿಡ್ ಟೌನ್ ಹುಬ್ಬಳ್ಳಿ ಸಹಯೋಗದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಸಹಾಯಕರು ಹಾಗೂ ದಾದಿಯರು ಮುಂತಾದವರನ್ನು ಸನ್ಮಾನಿಸಲಾಗುವುದು ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನವಾದ ಏ.14 ರವರೆಗೆ ನಿರಂತರ ಎರಡು ತಿಂಗಳವರೆಗೆ ನಡೆಯಲಿದ್ದು, ಅದುವರೆಗೆ ಧಾರವಾಡ ಜಿಲ್ಲೆಯಲ್ಲಿನ ಸುಮಾರು ಹತ್ತು ಸಾವಿರ ಕೊರೋನಾ ವಾರಿಯರ್‌ಗಳನ್ನು ಗೌರವಿಸಲಾಗು ವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ರೋಟರಿ ಸೆಂಟ್ರಲ್ ಅಧ್ಯಕ್ಷೆ ಸಂಜನಾ ಮಹೇಶ್ವರಿ ,ಕಾರ್ಯದರ್ಶಿ ಅಂಜನಾ ಬಸನಗೌಡರ, ಪಾಲಿಕೆ ಸದಸ್ಯರಾದ ಶೃತಿ ಚಲವಾದಿ, ಸುವರ್ಣ ಕಲಕುಂಟ್ಲಾ ಇದ್ದರು.

administrator

Related Articles

Leave a Reply

Your email address will not be published. Required fields are marked *