ಹುಬ್ಬಳ್ಳಿ-ಧಾರವಾಡ ಸುದ್ದಿ

ನೊಂದವರಿಗೆ ಸ್ಪಂದಿಸುವ ರಜತ; 300 ಕೋವಿಡ್ ವಾರಿಯರ್ಸಗಳಿಗೆ ಸನ್ಮಾನ

ಹುಬ್ಬಳ್ಳಿ: ಭರವಸೆಯ ಯುವ ಮುಖಂಡ ,ವಿದ್ಯಾನಗರ ಬ್ಲಾಕ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಅವರು ತಮ್ಮ ೩೦ನೇ ಜನ್ಮದಿನವನ್ನು ಕೋವಿಡ್ ಸೋಂಕಿನ ವಿರುದ್ಧ ಹೋರಾಟದಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು ಹಾಗೂ ಆರೋಗ್ಯ ಸಿಬ್ಬಂದಿಯನ್ನು ಸನ್ಮಾನಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡರು.


ನಗರದ ಮೂರುಸಾವಿರ ಮಠದ ಆವರಣದಲ್ಲಿ ರೋಟರಿ ಕ್ಲಬ್ ಸೆಂಟ್ರಲ್ ಹಾಗೂ ಇನ್ನರ್ ವೀಲ್ ಮಿಡ್‌ಟೌನ್ ಸಹಯೋದಲ್ಲಿ ನಿನ್ನೆ ಸಂಜೆ ಹಮ್ಮಿಕೊಂಡಿದ್ದ ’ರಜತ ಸಂಭ್ರಮ’ ಕಾರ್ಯಕ್ರಮದಲ್ಲಿ ಸುಮಾರು 300 ಜನರನ್ನು ಸನ್ಮಾನಿಸುವ ಮೂಲಕ ಕಾರ್ಯಕ್ರಮಕ್ಕೆ ಮೂರುಸಾವಿರ ಮಠದ ಜಗದ್ಗುರು ಡಾ.ಗುರುಸಿದ್ಧರಾಜಯೋಗೀಂದ್ರ ಮಹಾ ಸ್ವಾಮೀಜಿ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ ರಜತ ಅವರು ಯುವಕರಷ್ಟೇ ಅಲ್ಲ. ಉತ್ತಮ ನಡವಳಿಕೆಯನ್ನು ಹೊಂದಿರುವ ರಾಜಕೀಯ ನಾಯಕ. ರಜತ ಅವರು ತಂದೆಯವರಂತೆ(ವಿಶ್ವಪ್ರಕಾಶ ಉಳ್ಳಾಗಡ್ಡಿಮಠ) ಮಾನವೀಯ ಹಾಗೂ ಸೇವಾ ಗುಣಗಳನ್ನು ಹೊಂದಿದ್ದಾರೆ. ಮಾನವೀಯತೆ ಎಂಬುದು ಮಾತಿನಲ್ಲಿ ಅಷ್ಟೇ ಇರಬಾರದು. ಅದು ಕೃತಿಯಲ್ಲಿ ಜಾರಿಗೆ ಬರಬೇಕು. ರಜತ ಅವರು ಹೃದಯವಂತಿಕೆಯಿಂದ ನೊಂದವರಿಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.


ಮಾಜಿ ವಿಧಾನ ಪರಿಷತ್ ಸಭಾಪತಿ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ರಜತ ಉಳ್ಳಾಗಡ್ಡಿಮಠ ಭವಿಷ್ಯದ ನಾಯಕ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಅವರ ಮುಂದಿನ ಎಲ್ಲ ಕೆಲಸಗಳು ಯಶಸ್ವಿಯಾಗಿ ಅವರಿಗೆ ಒಳ್ಳೆಯದಾಗಲಿ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ರಜತ ಅವರು, ಕೊರೊನಾ ಸಂಕಷ್ಟದ ಕಾಲದಲ್ಲಿ ಜನರು ಮನೆಯಿಂದ ಹೊರಗೆ ಬರಲು ಆಗದಿದ್ದಾಗ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು, ನರ್ಸ್‌ಗಳು ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದಾರೆ. ಅವರೆಲ್ಲರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು 2 ತಿಂಗಳುಗಳ ಅವಧಿಯಲ್ಲಿ 10 ಸಾವಿರ ಕೊರೊನಾ ಸೇನಾನಿಗಳನ್ನು ಗುರುತಿಸಿ ಸನ್ಮಾನಿಸ ಲಾಗುವುದು ಎಂದು ತಿಳಿಸಿದರು.

ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರಿಗೆ ರಾಜ್ಯ ಸರ್ಕಾರ ಮಾಸಿಕ 12ಸಾವಿರ ರೂ. ಗೌರವ ಧನ ನೀಡಬೇಕು. ಅಲ್ಲಿಯವರಿಗೆ ನಾವು ಅವರ ಜತೆ ಇರುತ್ತೇವೆ ಎಂದರು.

ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ,ಮುಖಂಡರಾದ ನಾಗರಾಜ ಗೌರಿ, ಶಹಜಮಾನ್ ಮುಜಾಹೀದ್, ಬಂಗಾರೇಶ ಹಿರೇಮಠ, ಪಾಲಿಕೆ ಸದಸ್ಯರಾದ ಪ್ರಕಾಶ ಕುರಹಟ್ಟಿ, ಸುವರ್ಣ ಕಲ್ಲಕುಂಟ್ಲ, ಇಕ್ಬಾಲ್ ನವಲೂರ, ಸೆಂದಿಲ್‌ಕುಮಾರ, ಮಾಜಿ ಸದಸ್ಯರಾದ ಮೋಹನ ಹಿರೇಮನಿ, ಹೂವಪ್ಪ ದಾಯಗೋಡಿ, ದೀಪಾ ಗೌರಿ ಇತರರಿದ್ದರು.

administrator

Related Articles

Leave a Reply

Your email address will not be published. Required fields are marked *