ಹುಬ್ಬಳ್ಳಿ-ಧಾರವಾಡ ಸುದ್ದಿ

ಅವ್ಯವಸ್ಥೆ ಆಗರವಾದ ಧಾರವಾಡ ಸಬ್‌ರಜಿಸ್ಟ್ರಾರ್ ಕಚೇರಿ; ದಸ್ತು ಬರಹಗಾರರಿಂದಲೇ ಪ್ರತಿಭಟನೆ

ಧಾರವಾಡ: ಇಲ್ಲಿಯ ಮಿನಿವಿಧಾನ ಸೌಧದಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಯ ಅವ್ಯವಸ್ಥೆ ಖಂಡಿಸಿ ದಸ್ತುಬರಹಗಾರರೇ ಇಂದು ಗುರುವಾರ ಪ್ರತಿಭಟನೆ ನಡೆಸಿದರು.


ಕಳೆದ 21 ದಿನಗಳಿಂದ ಸರ್ವರ್ ಇಲ್ಲದೇ ಸಾರ್ವಜನಿಕರು ಹಿಡಿ ಶಾಪ ಹಾಕುವಂತಾಗಿದೆಯಲ್ಲದೇ ಮದ್ಯವರ್ತಿಗಳ ಹಾವಳಿ ವಿಪರೀತವಾಗಿದೆಯಲ್ಲದೇ ಕಚೇರಿಯ ಅವ್ಯವಸ್ಥೆ ಕೂಡಲೇ ಸರಿಪಡಿಸಬೇಕು ಎಂದು ಜಿಲ್ಲಾ ಉಪನೋಂದಣಾಧಿಕಾರಿ ಅಶೋಕ ಹಾಗೂ ನೋಂದಣಿ ಅಧಿಕಾರಿ ಗಿರೀಶ, ಅರಮನಿ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿದಿನ ನೂರಾರು ಸಾರ್ವಜನಿಕರು ತಮ್ಮ ಆಸ್ತಿಗಳ ಖರೀದಿ ಮತ್ತು ಮಾರಾಟ, ವಿವಾಹ ನೊಂದಣಿ ಇನ್ನಿತರ ಕೆಲಸಗಳಿಗೆ ಬರುತ್ತಾರೆ. ಆದರೆ ಸರಿಯಾದ ಸೌಲಭ್ಯಗಳಿಲ್ಲ. ಅಲ್ಲದೇ ಕಚೇರಿಗೆ ಬರುವ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಸರಿಯಾದ ಆಸನಗಳಿಲ್ಲ. ಅಲ್ಲದೇ ಇದೇ ಕಚೇರಿ ಪಕ್ಕದಲ್ಲಿರುವ ಮೂತ್ರಾಲಯ ನಿರ್ವಹಣೆ ಕೊರತೆಯಿಂದ ದುರ್ನಾತ ಬೀರುತ್ತಿದೆ. ಇಂತಹ ದುರವಸ್ಥೆಯಿಂದ ಜನರು ಕಟ್ಟಡದ ಮುಂಭಾಗದಲ್ಲಿನ ಮರಗಳ ಮರೆ ಯನ್ನೇ ಆಶ್ರಯಿಸಬೇಕಾದ ಅನುವಾರ್ಯತೆ ಇದ್ದು ಸರಿಪಡಿಸಲು ಆಗ್ರಹಿಸಿದ್ದಾರೆ.

ಶಿವಾನಂದ ಜಂಗಣ್ಣವರ, ವಿನೋಧ ಗೌಳಿ, ಎಂ.ಶ್ಯಾಮ್, ಶ್ರೀಧರ ಕುಲಕರ್ಣಿ, ವಿಜಯ ಕುಲಕರ್ಣಿ, ಗುರುರಾಜ ಕೊಟಬಾಗಿ, ವಿಠ್ಠಲ ಸದರೆ, ಬಸ್ತಿ ಬ್ರದರ್ಸ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಇದ್ದರು.

administrator

Related Articles

Leave a Reply

Your email address will not be published. Required fields are marked *