ಹುಬ್ಬಳ್ಳಿ-ಧಾರವಾಡ ಸುದ್ದಿ

ಅಟ್ರಾಸಿಟಿ ದುರುಪಯೋಗ : ವೀರಶೈವ ಮಹಾಸಭಾ ಬೃಹತ್ ಪ್ರತಿಭಟನೆ

ಧಾರವಾಡ: ದೌರ್ಜನ್ಯ ತಡೆ ಕಾಯ್ದೆಯ ದುರುಪಯೋಗ ವಿರೋಧಿಸಿ ನಗರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಇತ್ತೀಚಿನ ವರ್ಷಗಳಲ್ಲಿ ವೀರಶೈವ-ಲಿಂಗಾಯತ ಸಮಾಜದವರ ಮೇಲೆ ದೌರ್ಜನ್ಯ-ಬೆದರಿಕೆ ಪ್ರಕರಣಗಳು ಹೆಚ್ಚುತ್ತಿವೆ. ಸಮಾಜದಲ್ಲಿನ ಗಣ್ಯರ ಮತ್ತು ಅಮಾಯಕರನ್ನು ಬೆದರಿಸುವ ಸಲುವಾಗಿ ದೌರ್ಜನ್ಯ ತಡೆ ಕಾಯ್ದೆ ಬಳಸುವ ಮೂಲಕ ದುರುಪಯೋಗ ಮಾಡಲಾಗುತ್ತಿದೆ. ಸರಕಾರ ರೂಪಿಸಿರುವ ಈ ಕಾಯ್ದೆಯ ಉಪಯೋಗಕ್ಕಿಂತ ದುರುಪಯೋಗ ಆಗುತ್ತಿದೆ.ದಾಖಲಾದ ಪ್ರಕರಣಗಳಲ್ಲಿ ಶೇ.99 ರಷ್ಟು ಸುಳ್ಳು ಎಂದು ಸಾಬೀತಾಗಿವೆ. ಈ ಬಗ್ಗೆ ಸರಕಾರ ಗಮನ ಹರಿಸಿ, ಕಾಯ್ದೆ ದುರುಪಯೋಗ ಮಾಡಿಕೊಳ್ಳುವರನ್ನೂ ಶಿಕ್ಷಿಸಲು ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಸರಕಾರ ತಕ್ಷಣ ಕಾರ್ಯೋನ್ಮುಖವಾಗಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಯಿತು.ಈ ಪ್ರತಿಭಟನೆಗೆ ಅನೇಕ ಸಮುದಾಯಗಳ ಪ್ರಮುಖರು ಭಾಗವಹಿಸಿದ್ದರು.
ಕಲಾಭವನದಿಂದ ಕಪ್ಪು ಪಟ್ಟಿ ಧರಿಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.


ಉಪ್ಪಿನ ಬೆಟಗೇರಿಯ ಕುಮಾರ ವಿರುಪಾಕ್ಷ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಅಧ್ಯಕ್ಷ ಎನ್.ತಿಪ್ಪಣ್ಣ, ಜಿಲ್ಲಾಧ್ಯಕ್ಷ ಗುರುರಾಜ ಹುಣಶಿಮರದ, ಶಿವಶರಣ ಕಲಬಶೆಟ್ಟರ, ಬಿ.ಎಸ್ ಗೋಲಪ್ಪನವರ, ಎನ್.ಎಸ್.ಬಿರಾದಾರ, ಸಿದ್ದಣ್ಣ ಕಂಬಾರ, ಐ.ಸಿ.ಗೋಕುಲ, ಮಲ್ಲಿಕಾರ್ಜುನ ವಾಲಿ, ರು.ಮ. ಷಡಕ್ಷರಯ್ಯ, ಪಿ.ಎಚ್.ನೀರಲಕೇರಿ, ತಾರಾದೇವಿ ವಾಲಿ, ಅಪ್ಪೇಶ ದಳವಾಯಿ, ಎಂ.ಎಫ್. ಹಿರೇಮಠ, ಪರಶುರಾಮ ಹಕ್ಕರಕಿ, ಬಿ.ವೈ.ಪಾಟೀಲ, ವಿಜಲಕ್ಷ್ಮೀ ಕಲ್ಯಾಣಶೆಟ್ಟರ, ಬಿ.ಬಿ.ಗಂಗಾಧರಮಠ, ಶಿವಾನಂದ ಹೊಳೆಹಡಗಲಿ, ನಿಜನಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಅಮೃತ ಬಳ್ಳೊಳ್ಳಿ, ನಿಂಗಣ್ಣ ಕರೀಕಟ್ಟಿ, ಮಂಜುನಾಥ ಮುಗ್ಗನವರ,
ಮಲ್ಲಿಕಾರ್ಜುನಗೌಡ ಭೂಮನಗೌಡ್ರ, ನಾಗೇಶ ಅಣ್ಣಿಗೇರಿ, ನಿರಂಜನ ಹಿರೇಮಠ, ಇನ್ನಿತರರಿದ್ದರು.

 

administrator

Related Articles

Leave a Reply

Your email address will not be published. Required fields are marked *