ಹುಬ್ಬಳ್ಳಿ-ಧಾರವಾಡ ಸುದ್ದಿ

ಸಚಿವ ಈಶ್ವರಪ್ಪರನ್ನು ಸಂಪುಟದಿಂದ ವಜಾ ಮಾಡಿ ರಾಜ್ಯಪಾಲರಿಗೆ ಕಾಂಗ್ರೆಸ್ ಮುಖಂಡರಿಂದ ಮನವಿ

ಧಾರವಾಡ : ಕೆಂಪು ಕೋಟೆಯಲ್ಲಿ ಕೇಸರಿ ಧ್ವಜ ಹಾರಿಸಬಹುದು ಎಂಬ ಬಿಜೆಪಿ ಸರ್ಕಾರದ ಭಾಗವಾಗಿರುವ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆ ಖಂಡನೀಯ. ಇಂಥ ರಾಷ್ಟ್ರದ್ರೋಹದ ಹೇಳಿಕೆಯನ್ನು ಮಾಧ್ಯಮಗಳ ಮುಂದೆ ನೀಡಿರುವ ಅವರನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕು ಹಾಗೂ ರಾಷ್ಟ್ರದ್ರೋಹದ ದಾವೆಯನ್ನು ದಾಖಲಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಗುರುವಾರ ಮನವಿ ಸಲ್ಲಿಸಿದರು.

ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಯನ್ನುಎತ್ತಿ ಹಿಡಿಯುತ್ತೇನೆ ಎಂದು, ರಾಜ್ಯದ ಸಚಿವನಾಗಿ ನನ್ನಕರ್ತವ್ಯವನ್ನು ಶ್ರದ್ಧಾಪೂರ್ವಕ, ಅಂತಃಕರಣ ಪೂರ್ವಕವಾಗಿ ನಿರ್ವಹಿಸುತ್ತೇನೆ. ಭಯ, ಪಕ್ಷಪಾತ, ರಾಗದ್ವೇ? ಇಲ್ಲದೆ ಎಲ್ಲ ಜನರಿಗೆ ಸಂವಿಧಾನಕ್ಕೆ, ಕಾನೂನಿಗೆ ಅನುಸಾರಾಗಿ ನ್ಯಾಯವಾದುದ್ದನ್ನೇ ಮಾಡುತ್ತೇನೆಎಂದುದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ” ಈ ಪ್ರಮಾಣ ವಚನ ಪ್ರಕಾರ ಕೆ. ಎಸ್. ಈಶ್ವರಪ್ಪನವರು ಸಾರ್ವಜನಿಕವಾಗಿ ನೀಡಿದತಮ್ಮ ಹೇಳಿಕೆಯ ಮೂಲಕ ಪ್ರಮಾಣ ವಚನವನ್ನು ಸಾರಾಸಗಟವಾಗಿ ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.


ದೆಹಲಿಯ ಕೆಂಪು ಕೋಟೆಯ ಮೇಲೆ ಕೇಸರಿಧ್ವಜವನ್ನು ಹಾರಿಸುವ ಅವರ ಹೇಳಿಕೆಯು ಸಂವಿಧಾನದ ವಿಷಯದಲ್ಲಿ ಅವರು ಶ್ರದ್ಧೆ ಮತ್ತು ನಿಷ್ಠೆ ಹೊಂದಿರುವದಿಲ್ಲಾಎಂದು ಸ್ವಷವಾಗಿದೆ. ಅವರ ಸಾರ್ವಜನಿಕ ಹೇಳಿಕೆಯನ್ನು ಅವಲೋಕಿಸಲಾಗಿ “ಮಕ್ಕಳಿಗೆ ಕೇಸರಿ ಶಾಲು ಹಂಚಿದ್ದು ನಾನೇ, ನಾನು ಶಾಲುಗಳನ್ನು ಅಯೋಧ್ಯೆಯಿಂದ ತರಿಸಿಕೊಟ್ಟೆ ಎಂದುಖುzಗಿಒಪ್ಪಿಕೊಂಡಿದ್ದಾರೆ”. ಇಷ್ಟಾದ ಮೇಲೂ ಘನತೆವೆತ್ತ ರಾಜ್ಯಪಾಲರಾದತಾವು ಮೌನವಾಗಿರುವುದು ರಾಜಭವನಕ್ಕೆ ಶೋಭೆತರುವುದಿಲ್ಲ. ಸಂಬಂಧಿತ ಅಧಿಕಾರಿಗಳು ಸ್ವಯಂದೂರು ದಾಖಲು ಮಾಡಬೇಕಿತ್ತು. ಅಲ್ಲದೇ ಕರ್ತವ್ಯಚ್ಯುತಿ ಮಾಡಿದ ಅಧಿಕಾರಿಗಳ ಮೇಲೆಯೂ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈಶ್ವರಪ್ಪ ಪ್ರಮಾಣ ವಚನವನ್ನು ಸ್ವೀಕರಿಸುವಾಗ ಮಾಡಿದ ಪ್ರಮಾಣವನ್ನು ಸ್ಪಷ್ಠವಾಗಿ ಉಲ್ಲಂಘಿಸಿರುವುದು ಕಂಡುಬರುತ್ತದೆ. “ಭಾರತದ ಸಾರ್ವಭೌಮತ್ವ ಮತ್ತುಅಖಂಡತೆಯನ್ನುಎತ್ತಿ ಹಿಡಿಯುತ್ತೇನೆ, ಎಂದುರಾಜ್ಯದ ಸಚಿವನಾಗಿ ನನ್ನಕರ್ತವ್ಯವನ್ನು ಶ್ರದ್ಧಾ ಪೂರ್ವಕಅಂತಃಕರಣ ಪೂರ್ವವಾಗಿ ನಿರ್ವಹಿಸುತ್ತೇನೆ”, ಎಂದವರು ಕೆಂಪು ಕೊಟೆಯ ಮೇಲೆ ಕೇಸರಿಧ್ವಜವನ್ನ ಹಾರಿಸುವರಾಷ್ಟ್ರದ್ರೋಹದ ಮಾತುಗಳನ್ನು ಆಡಿರುತ್ತಾರೆ ಮತ್ತು “ಪಕ್ಷಪಾತ ,ರಾಗದ್ವೇಷಇಲ್ಲದೆಎಲ್ಲಜನರಿಗೆ ಸಂವಿಧಾನಕ್ಕೆ, ಕಾನೂನಿಗೆ ಅನುಸಾರವಾಗಿ ನ್ಯಾಯವಾದುದನ್ನೇ ಮಾಡುತ್ತೇನೆ”. ಎಂದುದೇವರ ಹೇಸರಿನಲ್ಲಿ ಪ್ರಮಾಣ ಮಾಡುತ್ತೇನೆ” ಎಂದು ಪ್ರಮಾಣ ವಚನ ತೆಗೆದುಕೊಂಡವರು ಸಾರ್ವಜನಿಕವಾಗಿ ಹೇಳಿಕೆಯನ್ನು ನೀಡಿ ಕೇಸರಿ ಶಾಲನ್ನು ಹಂಚಿದ್ದು ನಾನೇ, ನಾನು ಶಾಲುಗಳನ್ನು ಅಯೋಧ್ಯೆಯಿಂದ ತರಸಿ ಕೊಟ್ಟೆ ಎಂದುಖುzಗಿ ಹೇಳಿರುತ್ತಾರೆ ಇದನ್ನು ನೋಡಿದರೆ ಅವರು ಸ್ಪಷ್ಟವಾಗಿ ರಾಷ್ಟ್ರದ್ರೋಹದ ಕಾರ್ಯವನ್ನು ಮಾಡಿರುವುದು ಮತ್ತು ಸಮಾಜದಲ್ಲಿ ಪPಪಾತ ಮಾಡಿರುವುದುಎದ್ದುಕಾಣುತ್ತದೆ. ಅವರು ತಮ್ಮ ಕರ್ತವ್ಯದಲ್ಲಿ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದ್ದಾರೆ ಎಂದಿದ್ದಾರೆ.

ರಾಜ್ಯಪಾಲರಾದ ತಾವು ಸಂವಿಧಾನದ ಮುಖ್ಯಸ್ಥರಾಗಿದ್ದು, ತಮ್ಮ ಸಮPಮ ತಾವು ಬೋಧಿಸಿದ ಪ್ರಮಾಣವಚನವನ್ನುತಮ್ಮ ಮುಂದೆಯೇ ಓರ್ವ ಸಚಿವರು ಉಲ್ಲಂಘಿಸಿರುವುದು ಕರ್ನಾಟಕದಇತಿಹಾಸದಲ್ಲಿಯೇ ಪ್ರಪ್ರಥಮವಾಗಿದ್ದು, ಇವರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಬೇಕು. ಇಲ್ಲವಾ ದಲ್ಲಿ ಸಂವಿಧಾನ ರಕ್ಷಣೆಗೆ ಹಾಗೂ ಭಾರತಾಂಬೆಯ ರಕ್ಷಣೆಗಾಗಿ ಹೋರಾಟ ಅನಿವಾರ್ಯವಾಗಲಿದೆ. ಎಂದು ಕೆಪಿಸಿಸಿ ಸದಸ್ಯರು ಹಾಗೂ ಕೆಪಿಸಿಸಿ ಸಂಯೋಜಕರಾದ ಸತೀಶ ಮೆಹರವಾಡೆ, ರಾಬರ್ಟ ದದ್ದಾಪುರಿ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಜೇಮ್ಸ್ ಯಾಮಾ, ಸೇವಾದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗೀತಾ ಪೂಜಾರ, ಒಬಿಸಿ ರಾಜ್ಯ ಉಪಾಧ್ಯಕ್ಷ ನಾಗರಾಜ ಗುರಿಕಾರ, ಮಹಾನಗರ ಪ್ರಧಾನ ಕಾರ್ಯದರ್ಶಿ ಆನಂದ ಜಾಧವ, ಎಸ್‌ಸಿ ಸಹ ಕಾರ್ಯದರ್ಶಿ ಬಿ.ಎಚ್.ಪೂಜಾರ, ಒಬಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಸಿಂಗನಾಥ, ಮಹಾನಗರ ಎಸ್‌ಸಿ ಘಟಕದ ಅಧ್ಯಕ್ಷ ಆನಂದ ಮೂಷಣ್ಣವರ ಮನವಿ ಸಲ್ಲಿಸುವ ವೇಳೆ ಇದ್ದರು.

 

administrator

Related Articles

Leave a Reply

Your email address will not be published. Required fields are marked *