ಹುಬ್ಬಳ್ಳಿ-ಧಾರವಾಡ ಸುದ್ದಿ
ಮಹಾದಾಯಿಗಾಗಿ ಮಾರ್ಚ್‌ನಲ್ಲಿ ಪಾದಯಾತ್ರೆ

ಮಹಾದಾಯಿಗಾಗಿ ಮಾರ್ಚ್‌ನಲ್ಲಿ ಪಾದಯಾತ್ರೆ

ಹುಬ್ಬಳ್ಳಿ: ಉತ್ತರ ಕರ್ನಾಟಕ ಅಭಿವೃದ್ಧಿ ಹಾಗೂ ಮಹಾದಾಯಿ ಯೋಜನೆ ಯನ್ನು ಈ ತಿಂಗಳೊಳಗೆ ಪ್ರಾರಂಭ ಮಾಡಬೇಕು. ವಿಳಂಬವಾದಲ್ಲಿ ಮಾರ್ಚ್ ತಿಂಗಳಿನಲ್ಲಿ ನರಗುಂದ ವೇದಿಕೆಯಿಂದ ನರಗುಂದದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ರೈತ ಸೇನಾ ಕರ್ನಾಟಕದ ಅಧ್ಯಕ್ಷ ವಿರೇಶ ಸೊಬರದಮಠ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿಗೆ ಸಂಬಂಧಿಸಿ ದಂತೆ 3 ವರ್ಷ ಕಳೆದಿದ್ದು, 1600 ಕೋಟಿಗಿಂತಲೂ ಹೆಚ್ಚಿನ ಅನುದಾನ ಕಾಯ್ದರಿಸಿದರೂ ಸಹ ಇನ್ನೂ ಮಹಾದಾಯಿ ಯೋಜನೆ ಪ್ರಾರಂಭ ಮಾಡದಿರುವುದು ಖಂಡನೀಯವಾಗಿದೆ ಎಂದರು.
ರೈತರ ಸಾಲಗಳ ಬಗ್ಗೆ ಹಾಗೂ ಬ್ಯಾಂಕ್ ಅಧಿಕಾರಿಗಳು ಮಾಡುವ ತಪ್ಪುಗಳು ಮಾಡುವ ತಪ್ಪುಗಳ ಕುರಿತು ಜಾಗೃತಿ ಮೂಡಿಸಬೇಕಿದೆ. ನೀರಾವರಿ ಯೋಜನೆಗೆ ಅನುಷ್ಠಾನಕ್ಕೆ ಆದ್ಯತೆ ನೀಡಬೇಕಿದ್ದು, ಉತ್ತರ ಕರ್ನಾಟಕದವರೇ ಸಿಎಂ ಆಗಿದ್ದರೂ ಕೂಡಾ ಉ.ಕ ಅಭಿವೃದ್ಧಿಗೆ ಆದ್ಯತೆ ನೀಡುತ್ತಿಲ್ಲ ಎಂದರು.
ನೀರಾವರಿ ಯೋಜನೆ ಅನುಷ್ಠಾನದಲ್ಲಿ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿದ ಅವರು, ರೈತರಿಗೆ 10 ಸಾವಿರ ಕೋಟಿ ರೂ.ಗಳನ್ನು ಶಾಶ್ವತ ಖರೀದಿ ಕೇಂದ್ರಕ್ಕೆ ಕಾಯ್ದಿರಿಸಬೇಕು. ಕೃಷಿಗಾಗಿ ಬಜೆಟ್‌ನಲ್ಲಿ 10 ಸಾವಿರ ಕೋಟಿ ಮೀಸಲಿಡದಿದ್ದರೆ ಹೋರಾಟ ಮಾಡುವುದಾಗಿ ಅವರು ತಿಳಿಸಿದರು.
ಗೋಷ್ಠಿಯಲ್ಲಿ ಬಸವರಾಜ ಗೂಡಿ, ಚಿದಾನಂದ ಹುಬ್ಬಳ್ಳಿ, ಗುರು ರಾಯನ ಗೌಡ್ರ, ಮಲ್ಲಣ್ಣ ಆಲೇಕರ ಸೇರಿದಂತೆ ಮುಂತಾದವರಿದ್ದರು.

 

administrator

Related Articles

Leave a Reply

Your email address will not be published. Required fields are marked *