ಹುಬ್ಬಳ್ಳಿ-ಧಾರವಾಡ ಸುದ್ದಿ
ಪೈಪ್ ಲೈನ್‌ನಲ್ಲಿ ಗ್ಯಾಸ್ ಸೋರಿಕೆ- ದಿಢೀರ್ ಬೆಂಕಿ

ಪೈಪ್ ಲೈನ್‌ನಲ್ಲಿ ಗ್ಯಾಸ್ ಸೋರಿಕೆ- ದಿಢೀರ್ ಬೆಂಕಿ

ಹುಬ್ಬಳ್ಳಿ: ಅಡುಗೆ ಅನಿಲದ (ಗ್ಯಾಸ್) ಪೈಪ್ ಲೈನ್‌ನಲ್ಲಿ ಸೋರಿಕೆ ಉಂಟಾದ ಪರಿಣಾಮ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ಇಲ್ಲಿನ ಗೋಕುಲ ರಸ್ತೆ ಲಿಡ್ಕರ್ ಕಾಲನಿ ಬಳಿಯ ತೆಂಗಿನಕಾಯಿ ಲೇಔಟ್‌ನಲ್ಲಿ ನಡೆದಿದೆ.
ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದ್ದು
ಗ್ಯಾಸ್ ಲಿಕೇಜ್ ಆದ ಪರಿಣಾಮ ಬೆಂಕಿ ಹತ್ತಿಕೊಂಡಾಗ ಜನರು ಆತಂಕಗೊಂಡು ಮನೆಯಿಂದ ಹೊರ ಬಂದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿ ಸಿಲ್ಲ. ಮನೆ ಮನೆಗೆ ಸಂಪರ್ಕ ಕಲ್ಪಿಸುವ ಅಡುಗೆ ಅನಿಲದ ಪೈಪ್ ಲೈನ್ ಇದಾಗಿದೆ. ವಿದ್ಯುತ್ ಲೈನ್ ಸಹ ಇದರ ಮೇಲೆ ಹಾಯ್ದು ಹೋಗಿದ್ದು ಅದರಿಂದ ಸ್ಪೋಟಗೊಂಡು ಬೆಂಕಿ ಹತ್ತಿಕೊಂಡಿರಬಹುದೆಂದು ಹೇಳಲಾಗಿದೆ.

ಇನ್ನೂ ಬೆಂಕಿ ಹತ್ತಿಕೊಂಡ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಗೋಕುಲ ಇನ್ದಪೆಕ್ಟರ್ ಜೆ.ಎಂ ಕಾಲಿಮಿರ್ಚಿ ಹಾಗೂ ಸಿಬ್ಬಂದಿಗಳು, ವಿದ್ಯಾನಗರ, ಪೊಲೀಸರು ಸ್ಥಳಕ್ಕೆ ಆಗಮಿಸಿದರಲ್ಲದೇ ಅಗ್ನಿಶಾಮಕ ದಳದವರೂ ಬಂದು ಬೆಂಕಿ ನಂದಿಸಿದರಲ್ಲದೇ ಗ್ಯಾಸ್ ಲೈನ್‌ನಲ್ಲಿ ಪೂರೈಕೆಯಾಗುವ ವಾಲ್ವ್ ಬಂದು ಮಾಡಿ ಅಪಾಯ ತಡೆದರು.

 

administrator

Related Articles

Leave a Reply

Your email address will not be published. Required fields are marked *