ಹುಬ್ಬಳ್ಳಿ-ಧಾರವಾಡ ಸುದ್ದಿ

ಹರ್ಷ ಹಂತಕರಿಗೆ ಗಲ್ಲು ಶಿಕ್ಷೆಗೆ ಪಟ್ಟು; ಭಾವಸಾರ ಸಮಾಜದಿಂದ ಪ್ರತಿಭಟನೆ

ಧಾರವಾಡ: ಶಿವಮೊಗ್ಗದಲ್ಲಿ ಹರ್ಷ ನಾಗರಾಜ ಜಿಂಗಾಡೆ ಅವರ ಬರ್ಬರ ಹತ್ಯೆ ಖಂಡನೀಯ ಹತ್ಯೆಗೈದವರನ್ನು ಕೂಡಲೇ ಗಲ್ಲು ಶಿಕ್ಷೆಗೆ ನೀಡಬೇಕೆಂದು ಭಾವಸಾರ ಕ್ಷತ್ರಿಯ ಸ್ಥಾನಿಕ ಪಂಚ ಕಮಿಟಿ ಹಾಗೂ ಸಮಸ್ತ ಭಾವಸಾರ ಕ್ಷತ್ರಿಯ ಸಮಾಜದವರು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ನಂತರ ಸರಕಾರಕ್ಕೆ ಮನವಿ ಅರ್ಪಿಸಿದರು.


ಶಿವಮೊಗ್ಗದಲ್ಲಿ ರಾತ್ರಿ ವಾಯುವಿಹಾರಕ್ಕೆ ಹೋದ ಯುವ ತರುಣ. ಉತ್ಸಾಹಿ ಹಿಂದು ಕಾರ್ಯಕರ್ತ ಹಾಗೂ ದೇಶಭಿಮಾನ ಉಳ್ಳ ಹರ್ಷ ನಾಗರಾಜ ಜಿಂಗಾಡೆ ಅವರಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಇಂತಹ ಹೀನ ಕೃತ್ಯ ಅಮಾನವೀಯ ಘಟನೆ ಖಂಡನೀಯ. ಇಂತಹ ಅಮಾಯಕ ಯುವಕನ ಕೊಲೆಗೈದ ಕೊಲೆಗಡುಕ ರನ್ನು ಬಂಧಿಸಿ ತಕ್ಕ ಶಿಕ್ಷೆ ವಿಧಿಸಬೇಕು ಮತ್ತು ಇಂತಹ ಕೊಲೆಗಡುಕರಿಗೆ ಕುಮ್ಮಕ್ಕು ನೀಡುತ್ತಿರುವ ಸಂಘಟನೆಗಳಾದ ಎಸ್.ಡಿ.ಪಿ ಹಾಗೂ ಪಿ.ಎಫ್.ಐ ಗಳನ್ನು ಕೂಡಲೇ ನಿರ್ಬಂಧಿಸಬೇಕು . ಮುಂದೆ ಇಂತಹ ಅಮಾಯಕರ ಹತ್ಯೆ ಮಾಡುವ ಕೊಲೆಗಡುಕರಿಗೆ ಕುಮ್ಮಕ್ಕು ನೀಡುವವರು ಇರುವುದಿಲ್ಲ ಎಂದು ಮನವಿಯಲ್ಲಿ ಹೇಳಿದ್ದಾರೆ.
ಹತ್ಯೆಗೀಡಾದ ಹರ್ಷ ಜಿಂಗಾಡೆ ಕುಟುಂಬಕ್ಕೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ಹಾಗೂ ಅವರ ಕುಟುಂಬಸ್ಥರಿಗೆ ಸರ್ಕಾರದ ಕೆಲಸ ಕೊಡ ಬೇಕೆಂದು ನಗರದ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಮನವಿ ಮಾಡಲಾಯಿತು.
ಪಾಲಿಕೆಯ ಸದಸ್ಯ ಸಂಜಯ ಕಪಟಕರ, ಹುಡಾ ಮಾಜಿ ಅಧ್ಯಕ್ಷ ದತ್ತಾ ಡೋರ್ಲೆ, ಅಮರ ಟಿಕಾರೆ, ಪ್ರಕಾಶ ನಾಝರೆ ಸೇರಿದಂತೆ ಭಾವಸಾರ ಕ್ಷತ್ರಿಯ ಸಮಾಜದವರು ಇದ್ದರು. ಪ್ರತಿಭಟನೆ ಬೆಂಬಲಿಸಿ ನಾಮದೇವ ಸಿಂಪಿ ಸಮಾಜದ ಪಂಚ ಟ್ರಸ್ಟ್ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಹರ್ಷ ಹಂತಕರಿಗೆ ಗಲ್ಲು ಶಿಕ್ಷೆಗೆ ಪಟ್ಟು

ಹುಬ್ಬಳ್ಳಿ: ಶಿವಮೊಗ್ಗದಲ್ಲಿ ಹರ್ಷ ನಾಗರಾಜ ಜಿಂಗಾಡೆ ಅವರ ಬರ್ಬರ ಹತ್ಯೆಗೈದವರಿಗೆ ಕೂಡಲೇ ಗಲ್ಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ನಗರದಲ್ಲಿ ಭಾವಸಾರ ಕ್ಷತ್ರಿಯ ಸಮಾಜ ಮಹಾಮಂಡಳದ ವತಿಯಿಂದ ಮಿನಿ ವಿಧಾನಸೌಧದೆದುರು ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಅಮಾಯಕ ಯುವಕನ ಕೊಲೆಗೈದ ಕೊಲೆ ಗಡುಕರನ್ನು ಬಂಧಿಸಿ ತಕ್ಕ ಶಿಕ್ಷೆ ವಿಧಿಸಬೇಕು ಮತ್ತು ಕೊಲೆ ಗಡುಕರಿಗೆ ಕುಮ್ಮಕ್ಕು ನೀಡುತ್ತಿರುವ ಸಂಘಟನೆಗಳಾದ ಎಸ್‌ಡಿಪಿ ಹಾಗೂ ಪಿಎಫ್‌ಐಗಳಿಗೆ ಕೂಡಲೇ ನಿರ್ಬಂಧಗೊಳಿಸಬೇಕು ಎಂದು ಆಗ್ರಹಿಸಲಾಯಿತು.
ಮಹಾಮಂಡಳ ಅಧ್ಯಕ್ಷ ಪ್ರಕಾಶ ಇಜಂತಕರ, ಕೆ.ಜೆ.ಟಿಕಾರೆ, ಸುರೇಶ ಕಪಟಕರ, ಎಂ.ಕೆ.ರಾಶಿನಕರ, ಜಗದೀಶ ಹಂಚಾಟೆ, ಸತೀಶ ವೈಕುಂಠೆ, ಸಾಯಿನಾಥ ಅಂಬೇಕರ, ಕುಶಾಲ ಬೇದರೆ, ಅಶೋಕಕುಮಾರ ಮಾಳದಕರ, ಶಂಕರ ಕುಂಠೆ, ಅರುಣ ಬೆಳಮಕರ, ವಿವೇಕ ಚುಟಕೆ, ಗಂಗಾಧರ ಟಿಕಾರೆ, ಸೇರಿದಂತೆ ಅನೇಕರಿದ್ದರು.

ಹರ್ಷ ಹತ್ಯೆ ಖಂಡಿಸಿ ರಸ್ತೆ ತಡೆ

ಧಾರವಾಡ: ಭಜರಂಗದಳ ಕಾರ್ಯಕರ್ತ ಹರ್ಷಾ ಅವರ ಕೊಲೆಯನ್ನು ಖಂಡಿಸಿ, ಸ್ಥಳೀಯ ಭಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ಮಾಡಿ ತಪ್ಪಿಸಿತರಿಗೆ ಶಿಕ್ಷೆ ಆಗಬೇಕೆಂದು ಹಾಗೂ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಮನವಿ ಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು.
ಕೋರ್ಟ್ ಸರ್ಕಲ್ ನಲ್ಲಿ ಅರ್ಧ ಗಂಟೆ ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆ ಯುವ ವಾಹಿನಿ ಉತ್ತರ ಕರ್ನಾಟಕ ಪ್ರಾಂತ ಅಧ್ಯಕ್ಷರು ಜಯತೀರ್ಥ ಮಳಗಿ,ಭಜರಂಗದಳ ಧಾರವಾಡ ಜಿಲ್ಲಾ ಸಂಚಾಲಕರು ಶಿವಾನಂದ ಸತ್ತಿಗೇರಿ, ಹಿ ಜಾ ವೇ ವಾಹಿನಿ ಧಾರವಾಡ ಜಿಲ್ಲಾ ಅಧ್ಯಕ್ಷರು ವಿಜಯಕುಮಾರ್ ಕೊಳ್ಳಾನಟ್ಟಿ,ಹಾಗೂ ಹಿಂದೂ ಪರ ಕಾರ್ಯಕರ್ತರು ಮತ್ತು ಭಾಜಪ ಮುಖಂಡರು ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *