ಹುಬ್ಬಳ್ಳಿ-ಧಾರವಾಡ ಸುದ್ದಿ
ನಾಳೆ ಧಾರವಾಡದಲ್ಲಿ ಕುಚಿಪುಡಿ ರಂಗಪ್ರವೇಶ

ನಾಳೆ ಧಾರವಾಡದಲ್ಲಿ ಕುಚಿಪುಡಿ ರಂಗಪ್ರವೇಶ

ಧಾರವಾಡ: ನಗರದ ಪ್ರೇರಣಾ ಕಲಾ ಬಳಗದ ವತಿಯಿಂದ ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ಫೆ.26 ರಂದು ಸಂಜೆ 5 ಗಂಟೆಗೆ ಕುಚಿಪುಡಿ ರಂಗಪ್ರವೇಶ ಏರ್ಪಡಿಸಲಾಗಿದೆ ಎಂದು ಬಳಗದ ಸಂಸ್ಥಾಪಕ ಅಧ್ಯಕ್ಷೆ ವಿದುಷಿ ಜ್ಯೋತಿ ಗಲಗಲಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ಭರತನಾಟ್ಯ ಮತ್ತು ಕುಚಿಪುಡಿ ನೃತ್ಯ ಪ್ರಕಾರದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ತರಬೇತಿ ನೀಡಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಇತ್ತೀಚಿನ ದಿನಗಳಲ್ಲಿ ಕುಚಿಪುಡಿ ನೃತ್ಯದ ರಂಗಪ್ರವೇಶ ಕಾರ್ಯಕ್ರಮ ನಡೆಯುತ್ತಿರುವುದು ಇದೇ ಮೊದಲು ಎಂದು ಅವರು ಹೇಳಿದರು
ಆರ್‌ಎಸ್‌ಎಸ್ ಕರ್ನಾಟಕ ಉತ್ತರ ಪ್ರಾಂತ ಸಹ ಸಂಘಚಾಲಕ ಅರವಿಂದ ದೇಶಪಾಂಡೆ ಸಮಾರಂಭ ಉದ್ಘಾಟಿಸುವರು. ಅತಿಥಿಗಳಾಗಿ ವಿದ್ವಾನ್ ನಟರಾಜ ಕೃಷ್ಣಮೂರ್ತಿ, ಶಾಸಕ ಅರವಿಂದ ಬೆಲ್ಲದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಕೆ. ಹರಿಕುಮಾರ, ಡಾ. ಕಲವಚೇರಿ ವಿಜಯಲಕ್ಷ್ಮೀ ಆಗಮಿಸಲಿದ್ದಾರೆ. ಸಾಧನಾ ಪೋಟೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸಂಸ್ಥೆಯ ಪದ್ಮಶ್ರೀ, ತೇಜಸ್ವಿನಿ, ಪೂರ್ವಿ, ನಮ್ರತಾ, ಸಂಜನಾ ಹಾಗೂ ಸುಶ್ಮಿತಾ ಸೇರಿ ಒಟ್ಟು ೬ ವಿದ್ಯಾರ್ಥಿನಿಯರು ರಂಗಪ್ರವೇಶ ಮಾಡಲಿದ್ದಾರೆ. ಹಿರಿಯ ವಯಲಿನ್ ವಾದಕ ಶಂಕರ ಕಬಾಡಿ, ಪಂಚಮ ಉಪಾಧ್ಯ, ಡಾ. ನವಮಿ ಉಪಾಧ್ಯ, ರಾಘವೇಂದ್ರ ರಂಗದೋಳ್ ಮೇಳದಲ್ಲಿರಲಿದ್ದಾರೆ. ರಂಗಪ್ರವೇಶದ ನಿಗದಿತ ನೃತ್ಯಗಳ ಜತೆ ’ಮೋಹಿನಿ ಭಸ್ಮಾಸುರ’ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ ಎಂದರು.
ವಿದ್ವಾನ್ ನಟರಾಜ ಕೃಷ್ಣಮೂರ್ತಿ, ಸಂತೋಷ ಮಹಾಲೆ, ರವಿ ಕುಲಕರ್ಣಿ ಇತರರು ಗೋಷ್ಠಿಯಲ್ಲಿದ್ದರು.

administrator

Related Articles

Leave a Reply

Your email address will not be published. Required fields are marked *