ಹುಬ್ಬಳ್ಳಿ: ಜೀವನದ ಚಿತ್ರಣಗಳನ್ನು ನೆನಪಿಸುವಲ್ಲಿ ಛಾಯಾಗ್ರಾಹಕ ಪಾತ್ರ ಬಹಳ ಪ್ರಮುಖವಾದದ್ದು. ಬಾಲ್ಯ ಜೀವನವನ್ನು ಮರುಕಳುಹಿಸುವ ಚಿತ್ರಣ ವನ್ನು ಮಾಡುತ್ತಿದ್ದಾರೆ. ನಿಸರ್ಗದ ಸೌಂದರ್ಯವನ್ನು ನಮಗೆ ನೀಡುತ್ತಾರೆ. ಪ್ರಚಲಿತ ವಿದ್ಯಮಾನಗಳ ಮೇಲೆ ಛಾಯಾಗ್ರಾಹಕರು ತಮ್ಮ ಚಿತ್ರಗಳ ಮೂಲಕ ಬೆಳಕು ಚೆಲ್ಲುತ್ತಿದ್ದಾರೆ ಎಂದು ಸಕ್ಕರೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹೇಳಿದರು.
ಹುಬ್ಬಳ್ಳಿಯ ಎಪಿಎಂಸಿಯಲ್ಲಿ ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘದ ವತಿಯಿಂದ ಫೆ.26 ಮತ್ತು 27 ರಂದು ಎರಡು ದಿನಗಳ ಕಾಲ ನಡೆಯಲಿರುವ ಡಿಜೆ ಫೋಟೋ ಎಕ್ಸ್ಪೋವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಛಾಯಾಗ್ರಾಹಕರು ಎಲ್ಲ ಸಮಸ್ಯೆ ಎದುರಿಸಿ ಫೋಟೋ ಸೆರೆ ಹಿಡಿಯುತ್ತಿದ್ದಾರೆ. ಛಾಯಾಗ್ರಾಹಕರಿಗೆ ಗೌರವ ಸಿಗಬೇಕಾಗಿದೆ. ವೃತ್ತಿ ಜೀವನದಲ್ಲಿ ಎಲ್ಲವನ್ನೂ ಸಹಿಸಿ ಕೊಂಡು ಹೋಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಛಾಯಾಗ್ರಾಹಕರಿಗೆ ಅನುಕೂಲಕರ ತರಬೇತಿ ನೀಡಲಾಗುವುದು ಎಂದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ಮಾತ ನಾಡಿ, ಈ ಎಕ್ಸ್ಪೋದಿಂದ ಛಾಯಾಗ್ರಹಕರಿಗೆ ಅನುಕೂಲವಾಗಲಿದೆ. ಬೇರೆ ಬೇರೆ ಕಡೆ ಹೋಗಿ ಖರೀದಿ ಮಾಡುವ ಪರಿಸ್ಥಿತಿ ತಪ್ಪಲಿದೆ. ಗೋವಾ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಹವ್ಯಾಸಿ ಛಾಯಾಗ್ರಹಕರು ಮೇಳಕ್ಕೆ ಬರುತ್ತಿದ್ದಾರೆ. ಈ ತರಹದ ಮೇಳಗಳು ಮೇಲಿಂದ ಮೇಲೆ ನಡೆದು ಯಶಸ್ವಿಯಾಗಬೇಕಾಗಿದೆ. ಮೊಬೈಲ್ ನಿಂದ ಛಾಯಾಗ್ರಾಹಕರಿಗೆ ಹೊಡೆತ ಬೀಳುತ್ತಿದೆ ಎಂದು ತಿಳಿಸಿದರು.
ಬಳಬಟ್ಟಿ ಬಾಬು(ಗದಗ), ದ್ಯಾವಪ್ಪ ಎಸ್ ದೊಡ್ಡ ದ್ಯಾವಳ್ಳಿ(ಹಾವೇರಿ), ಗಿರಿಧರ್ ಬಿ.ಎಂ.(ದಾವಣಗೆರೆ), ರುದ್ರಾಕ್ಷಿ ಜಿ.ಬಿ. (ವಿಜಯಪುರ), ಸುಧೀರ್ ಶಾನುಭಾಗ್(ಶಿರಸಿ), ಎಂ.ಬಿ.ಗೌಡ(ಬೆಳಗಾವಿ), ಹನುಮಂತಸಾ ಬದ್ದಿ(ಹುಬ್ಬಳ್ಳಿ), ಬಶೀರ್ ದಾವೂದ್ ಶೇಖ(ಕಾರವಾರ), ಗುರುರಾಜ ಎಂ.ಕುಲಕರ್ಣಿ(ಧಾರವಾಡ) ಮತ್ತು ಕೃಷ್ಣಮೂರ್ತಿ ಆರ್ ವಡವಡಗಿ(ಬಾಗಲಕೋಟ) ಈ ಎಲ್ಲ ಹಿರಿಯ ಛಾಯಾಗ್ರಾಹಕರಿಗೆ ’ಕರ್ನಾಟಕ ಛಾಯಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹುಬ್ಬಳ್ಳಿ ಫೋಟೊ ಹಾಗೂ ವಿಡಯೋ ಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಕಿರಣ ಬಾಕಳೆ, ಉಪಾಧ್ಯಕ್ಷ ದಿನೇಶ ದಾಬಡೆ, ಖಜಾಂಚಿ ಅನಿಲ ತುರಮರಿ, ಬೆಂಜಮಿನ್, ಮಹೇಂದ್ರ ಲದ್ದಾ, ಸೀತಾರಾಮ್, ಆನಂದ ರಾಜೋಳಿ, ಪ್ರವೀಣ ಹಣಗಿ, ವಿನಾಯಕ ಸಫಾರಿ, ವಜೀರ್ ಅಹಮ್ಮದ್, ದತ್ತು ದೋಂಗಡಿ, ರವಿ ಪಟ್ಟಣ್, ರಶೀದ್, ಜಯೇಶ್ ಇರಕಲ್, ವಿಜಯ ಮೇರವಾಡೆ, ಪ್ರಕಾಶ ಬಸವಾ ಸೇರಿದಂತೆ ಇತರರು ಇದ್ದರು.