ಮೋಳಿಗೆ ಮಹಾದೇವಿಯರು ತಮ್ಮ ವಚನದಲ್ಲಿ ಈ ರೀತಿ ಹೇಳುತ್ತಾರೆ
‘ನೀರು-ನೆಲ ವಿಲ್ಲದೆ ಇರಬಹುದೇ?
ಬೀಜ ನೆಲೆಯಿಲ್ಲದೆ ಹುಟ್ಟಬಹುದೇ?
ಜ್ಞಾನ ಕ್ರಿಯೆ ಇಲ್ಲದೆ ಅರಿಯಬಹುದದೇ?
ಚಿತ್ತು ಚಿತ್ತವಿಲ್ಲದೆ ವಸ್ತುವ ಲಕ್ಷಿಸಿ ಗ್ರಹಿಸಬಲ್ಲದೇ?
ಇಂತಿ ಕ್ರಿ-ಜ್ಞಾನ ಸಂಬಂಧ ಸ್ಥಲಭಾವ !’
ಇಲ್ಲಿ ಕ್ರಿಯೆ ನಡೆಯ ಸಂಕೇತವಾದರೆ ಜ್ಞಾನ ನುಡಿಯ ಸಂಕೇತವಾಗುತ್ತದೆ. ಅಂದರೆ ಅರಿವು ಆಚರಣೆಗಳ ಸಮನ್ವಯವೇ ಒಂದು ಬಾಳಿನ ಬದುಕು. “ಮನುಷ್ಯ ಭೂಮಿಯ ಆಚಿನ ಲೋಕದಲ್ಲಿ ಬುದ್ಧಿವಂತ, ತುಂಬಾ ಬುದ್ಧಿವಂತ ಜೀವಿಗಳು ಇದ್ದಿರಲೇಬೇಕು. ಆದ್ದರಿಂದಲೇ ಅವರು ನಮ್ಮಿಂದ ದೂರ ಇದ್ದಾರೆ” ಎಂದು ವಿಜ್ಞಾನ ಸಾಹಿತಿ ಅರ್ಥರ್ ಕ್ಲಾರ್ಕ್ ಹೇಳಿದ್ದ. ಹೌದು 15000 ಬಾಂಬುಗಳನ್ನು ಇಟ್ಟುಕೊಂಡು ಜಾತಿ ಧರ್ಮ ಭಾಷೆ ನೀರುಗಳಿಗಾಗಿ ನಮ್ಮನಮ್ಮಲ್ಲೇ ಜಗಳ ಆಡುತ್ತಾ ನಾವು ಗ್ರಹವನ್ನು ಅಪಾಯದ ಅಂಚಿಗೆ ತಂದಿದ್ದೇವೆ. ನಾವು ಅದನ್ನು ಮುಖ್ಯವಾಗಿದ್ದ ಉತ್ತಮಗಳಿಂದ, ತನ್ನ ಸ್ವಾರ್ಥ ಸಾಧನೆಯಿಂದ ಅಡ್ಡಪರಿಣಾಮಗಳಲ್ಲಿ ಮನುಷ್ಯ ಯಾವುದೇ ಒಂದು ಸಾಧನೆಯು ಇಲ್ಲದೆ ಕೇವಲ ಸ್ವಾರ್ಥ ಸಾಧನೆಗೆ ದ್ವೇಷಾಸೂಯೆಕ್ಕೆ ಅವನು ಇಡೀ ಮಾನವ ಕುಲವನ್ನೇ ನಾಶಮಾಡುವತ್ತ ಸಾಗಿದ್ದಾನೆ.
ಹಾಗಾದರೆ ವಿಜ್ಞಾನವು ಸಾಧಿಸಿದ ಈ ಪರಿ ಮನುಷ್ಯನಿಗೆ ಉಪಯೋಗವಾಗುವದರ ಜೊತೆಗೆ ಭವ್ಯ ಭವಿಷ್ಯ ತೋರಿಸುವಲ್ಲಿ ವಿಜ್ಞಾನದ ದಿನದಲ್ಲಿ ನಾವು ವಿಜ್ಞಾನ ದಿಂದ ಉಪಯೋಗವನ್ನೇ ಮಾಡುವ ಪ್ರತಿಜ್ಞೆ ಮಾಡಬೇಕಾಗಿದೆ. ಈಗ ಕಾಲ ಬದಲಾಗಿದೆ ಹಿಂದೆ ಜ್ಞಾನಕ್ಕಾಗಿ ಜ್ಞಾನ ಎಂದು ಇತ್ತು. ಆದರೆ ಈಗ ಜ್ಞಾನದ ಬಳಕೆಯಿಂದ ಸಂಪತ್ತಿನ ಸೃಷ್ಟಿ ಅಂತ ಕಲಿತದ್ದು ಬಹಳಷ್ಟು ಮುಖ್ಯ. ಹಾಗಾಗಿ ಜ್ಞಾನಕ್ಕೆ ತುಂಬಾ ಪ್ರಾಮುಖ್ಯತೆ. ಹಿಂದಿನ ಶತಮಾನಗಳಲ್ಲಿ ಶ್ರೀಮಂತಿಕೆಯನ್ನು ಕುದುರೆಗಳು, ಆಸ್ತಿಪಾಸ್ತಿ, ದವಸ-ಧಾನ್ಯಗಳನ್ನು ಅಳತೆಗೋಲಾಗಿ ಬಳಸುತ್ತಿದ್ದರು.ಈ ಯುಗದಲ್ಲಿ ಜ್ಞಾನ ಮತ್ತು ಜ್ಞಾನದ ಬಳಕೆಯಿಂದ ಆಗುವ ವಸ್ತುಗಳು ಅಳತೆಗೋಲಾಗಿದೆ.
ವಿಜ್ಞಾನದಲ್ಲಿ ಬೆಳಕಿಗೆ ತುಂಬಾ ಮಹತ್ವದ ಸ್ಥಾನವಿದೆ ಬೆಳಕಿನ ವೇಗ ಸೆಕೆಂಡಿಗೆ 30 ಕೋಟಿ ಮೀಟರಗಳು. ಇದು ಯಾವುದೇ ವಸ್ತು ಪಡೆಯ ಬಹುದಾದ ಗರಿಷ್ಠವಾಗಿ ತಕ್ಕಂತಹ ಬೇಗ ಬೆಳಕಿನ ಕಣ ಸಂಖ್ಯೆಯಿಂದ ಎಷ್ಟು ಹೆಚ್ಚು ಈ ಜಗತ್ತಲ್ಲಿ ಬೆಳಕಿನ ಮೇಲೆ ಜನಜೀವನ ಅವಲಂಬಿತವಾಗಿದೆ ವಿಜ್ಞಾನ ಒಂದು ವಿಸ್ಮಯ. ವಿಜ್ಞಾನ ಒಂದು ಸಂಭ್ರಮ. ವಿಜ್ಞಾನ ಒಂದು ವಿದ್ಯೆ. ವಿಜ್ಞಾನವ ಒಂದು ಸಂಪತ್ತು. ವಿಜ್ಞಾನ ಒಂದು ಸುಂದರ ಸೃಷ್ಟಿ. ವಿಜ್ಞಾನವೆಂದರೆ ಕೋಲ್ಮಿಂಚು. ಹೀಗೆ ವಿಜ್ಞಾನವನ್ನು ಹೊಗಳುತ್ತಾ ಹೋದರೆ ಅದಕ್ಕೆ ಪದಗಳಿಗೆ ಇಲ್ಲ. ಆದರೆ ನಮ್ಮ ಜೀವನದಲ್ಲಿ ವಿಜ್ಞಾನ ಏನು ಎಂಬು ದನ್ನು ಅರಿತಾಗ ನಾನು ಬೆಳಿಗ್ಗೆ ಎದ್ದಾಗಿನಿಂದ ಹಿಡಿದು ಮಲಗುವವರಿಗೆ ಬಳಸುವ ವಸ್ತುಗಳನ್ನು ವಿಜ್ಞಾನದ ಆವಿಷ್ಕಾರಗಳು ಎಂದೇ ಹೇಳಬಹುದು. ವಿಜ್ಞಾನ ಎಂದರೆ ಕೇವಲ ವಿಜ್ಞಾನಿಗಳ ಸ್ವತ್ತಲ್ಲ. ಅದಕ್ಕಿಂತ ಹೆಚ್ಚಾಗಿ ಜನಸಾಮಾನ್ಯರ ಸ್ವತ್ತು. ಜನಸಾಮಾನ್ಯರು ಹಾಗೆ ಉಪಯೋಗವಾಗಲಿ ಎಂದು ವಿಜ್ಞಾನಿಗಳು ತಮ್ಮ ಸಂಶೋಧನೆಗಳನ್ನು ಮಾಡುತ್ತಾರೆ. ಈ ಸಾಲಿನಲ್ಲಿ ನಮ್ಮ ಸಿವಿ ರಾಮನ್ ಅವರು ಕೂಡ ಬರುತ್ತಾರೆ.
ಅವರು ವಿಜ್ಞಾನವೆಂದರೆ ದೇವರೆಂದೇ ನಂಬಿದ್ದರು.
ಗಾಂಧೀಜಿಗೆ ಹೇಳಿದ್ದರಂತೆ ‘ಪ್ರಕೃತಿಯಲ್ಲಿ ನಾನು ದೇವರನ್ನು ಕಾಣುತ್ತೇನೆ’ ಎಂದು ಅದಕ್ಕಾಗಿ ರಾಮನ್‌ರು ತಾವು ಪ್ರವಾಸ ಮಾಡುವಾಗ ಮೆಡಿಟೇರಿಯನ್ ಸಮುದ್ರ ದೇವತೆಯ ನೀಲಿಬಣ್ಣದ ಸುಂದರ ಉಡುಪುಗಳನ್ನು ಅಂದರೆ ಒಂದು ಸಮುದ್ರವನ್ನೇ ಸಂಶೋಧನೆಯ ಸ್ಪೂರ್ತಿಯಾಗಿ ಪಡೆದರು. ಕೆಲವು ಕಾರಣಗಳನ್ನು ಹಿಡಿದುಕೊಂಡು ಹಲವರು ಹಡಗಿನಲ್ಲಿ ಅತ್ತಿತ್ತ ಓಡಾಡುವುದನ್ನು ಮಾಡುವುದನ್ನು ಗಮನಿಸಿದ ಅವರಿಗೆ ಅದಕ್ಕೆ ಸೂರ್ಯನ ಬೆಳಕು ಕಾರಣವೆಂದು ಅವರ ಮನಸ್ಸಿಗೆ ಅನಿಸಿತು.
ಅದಕ್ಕೆ ಅವರು ಕಲ್ಕತ್ತಾದಿಂದ ಹಿಂದಿರುಗಿದ ಬಳಿಕ ಬೆಳಕಿನ ಚದುರುವಿಕೆಯ ಕುರಿತು ಅನೇಕ ಪ್ರಯೋಗಗಳನ್ನು ನಡೆಸಿದರು.
ಅವರು ತಮ್ಮ ಸಂಶೋಧನೆಗೆ ಬಳಸಿದ ಪರಿಕರಗಳು ಮುಖ್ಯವಾಗಿ *ಒಂದು ಸೀಸೆಯಲ್ಲಿ ಬೆಂಜಿನ್,* ಒಂದು ಮರ್ಕ್ಯೂರಿಕ್ ದೀಪದಿಂದ ಹೊರಟವರ ರಶ್ಮಿ, ಹಾಗೂ ಕಿರಣವನ್ನು ಸೆರೆಹಿಡಿಯುವ ಒಂದು ಕ್ಯಾಮರಾ ಇಷ್ಟೇ. ಸಾಮಾನ್ಯ ವಸ್ತುಗಳಿಂದ ಅವರು ಬೆಳಕಿನ ಚದುರಿಕೆಯ ತತ್ವವನ್ನು ಕಂಡುಹಿಡಿದರು. ಅವರ ಪ್ರಯೋಗಕ್ಕೆ ನಮ್ಮ ಭಾರತದ ಒಂದು ಪ್ರಯೋಗಾಲಯ ಸಣ್ಣದು ಎಂಬುದನ್ನು ಅವರ ಒಂದು ಜೊತೆ ಇದ್ದಂತಹ ವಿಜ್ಞಾನಿಯೊಬ್ಬರು ತಮ್ಮಲ್ಲಿ ಬಲವಿದೆ ಆದರೆ ಪರದೇಶ ಗಳಲ್ಲಿ ನೂರು ಕಿಲೋಮೀಟರ್ ಇರುವುದರಿಂದ ಅವರು ನಮಗಿಂತ ಅನೇಕ ಸಂಶೋಧನೆಗಳನ್ನು ಮಾಡುತ್ತಾರೆ ಎಂದು ಆಗ ರಾಮನ್ ವಿಜ್ಞಾನಿಗೆ ಹೀಗೆ ಹೇಳಿದರಂತೆ ಈ ಕೊರತೆಯನ್ನು ಹೋಗಲಾಡಿಸಲು ನೀವು ಶಕ್ತಿಯನ್ನು ಬೆಳಕಿಗೆ ಹಚ್ಚಬೇಕು ಎಂದು. ಅಂದರೆ ವಿಜ್ಞಾನ ನಮ್ಮ ಜ್ಞಾನಕ್ಕೆ ಸಾಣೆ ಹಿಡಿಯುವ ಒಂದು ಶಕ್ತಿ. ರಾಮನ್‌ರು 28.02.1928 ರಲ್ಲಿ ರಾಮನ್ ಎಫೆಕ್ಟ್ ಅಂದರೆ ರಾಮನ್ ಪರಿಣಾಮ ಎಂಬುದನ್ನು ಪ್ರಕಟಿಸಿದರು.
ಇದಕ್ಕಾಗಿ ಅವರಿಗೆ 1930ರಲ್ಲಿ ಭೌತವಿಜ್ಞಾನ ವಿಭಾಗದ ನೊಬೆಲ್ ಪ್ರಶಸ್ತಿ ಕೂಡ ಲಭಿಸಿತು. ಆ ಒಂದು ಸವಿನೆನಪಿಗೆ ನಾವು ಇಂದು ವಿಜ್ಞಾನದ ದಿನವನ್ನು ಆಚರಿಸುತ್ತೇವೆ. ಸಿವಿ ರಾಮನ್ ಎಷ್ಟೇ ಒಂದು ದೊಡ್ಡ ವಿಜ್ಞಾನಿಯಾಗಿಯಾದ್ದರೂ ಕೂಡ ಮಕ್ಕಳಿಗೆ ಹೇಳುವಾಗ ಅತ್ಯಂತ ಸರಳವಾಗಿ ತಮ್ಮ ಸಂಶೋಧನೆಯನ್ನು ಹೇಳುತ್ತಿದ್ದರಂತೆ. ಅವರು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಹೇಳಿದ್ದು ಈ ರೀತಿ ಎಂದು ತಿಳಿದುಕೊಂಡರೆ ಚಂಡು ಒಂದು ಭಾಗದಲ್ಲಿ ಹಿಂದೆ ಪುಟಿಯುತ್ತದೆ ಆಡುವವನು ಹಿಡಿದ ಬ್ಯಾಟ್ ಮುಂದೆ ಬಿಸಿ ಹೊಡೆದರೆ ಕಂಡುಬಂದ ವೇಗಕ್ಕಿಂತ ಹೆಚ್ಚು ವೇಗ ಪಡೆದು ಹಿಂದೆ ಪುಟಿಯುತ್ತದೆ. ಅದರ ಬದಲು ಕಂಡುಬರುವ ವೇಗಕ್ಕಿಂತ ಕಡಿಮೆ ವೇಗದಲ್ಲಿ ಹಿಂದೆ ಪುಟಿಯುತ್ತದೆ ಚಂಡು. ಹಿಂದೆ ಹೋಗಿ ಸಾಗುವ ದಿಕ್ಕು ಆಟಗಾರರನ್ನು ಹೊಡೆಯುವಾಗ ಬ್ಯಾಟ್ ಇರುವ ಸ್ಥಿತಿಗೆ ಅನುಗುಣವಾಗಿರುತ್ತದೆ. ಈ ರೀತಿ ಕ್ರಿಕೆಟಿನಲ್ಲಿ ತಮ್ಮ ರಾಮನ್ ಪರಿಣಾಮವನ್ನು ಸುಂದರವಾಗಿ ವಿವರಿಸಿದ್ದರಂತೆ. ಹೀಗೆ ವಿಜ್ಞಾನದ ಆವಿಷ್ಕಾರಗಳು ನಮ್ಮ ಭಾರತದಲ್ಲಿ ಹೆಚ್ಚಾಗಿ ಮೂಡಿಬರಲಿ ಎಂದು ಆಶಿಸುತ್ತಾ ಎಲ್ಲರಿಗೂ ವಿಜ್ಞಾನ ದಿನದ ಶುಭಾಶಯಗಳು