ಹುಬ್ಬಳ್ಳಿ-ಧಾರವಾಡ ಸುದ್ದಿ
’ಜಾಗೃತ’ ಸಂದೇಶ ಸಾರುವ ಶಿವರಾತ್ರಿ

’ಜಾಗೃತ’ ಸಂದೇಶ ಸಾರುವ ಶಿವರಾತ್ರಿ

‘ನ ಮೇ ಮೃತ್ಯು ಶಂಖ ನಮೇ ಜಾತಿ ಭೇಧಾಃ
ಪಿತಾ ನೈವ ಮೇನೈವ ಮಾತಾ ಚ ಜನ್ಮ
ನ ಭಂಧುರ್ನಮಿತ್ರಂ ಗುರುರ್ನೈವ ಶಿಷ್ಯಃ
ಚಿದಾನಂದ ರೂಪ: ಶಿವೋsಹಂ ಶಿವೋsಹಂ’
  ಆದಿಶಂಕರಾಚಾರ್ಯರು

‘ಈಶಾವಾಸ್ಯಂ ಇದಂ ಸರ್ವಂ:ಏಂಬ ಉಪನಿಷತ್ ತಿಳಿಸುವಂತೆ, ಶಿವನು ಇಡೀ ವಿಶ್ವವನ್ನೇ ಆವರಿಸಿದ್ದಾನೆ.
ಶಿವನ ಆಟವನ್ನು ಬಲ್ಲವರಾರು ಅದನ್ನು ಬಲ್ಲವನೇ ಶಿವಯೋಗಿ. ಅವನಿಗೆ ಸಾವಿಲ್ಲ.
ಅವನು ನಿತ್ಯನೂತನ ನಂತರ ಪಡೆಯುವ ಸಲುವಾಗಿ ನಾವು ಒಂದು ವ್ಯಕ್ತಿಯೊಳಗಿನ ವ್ಯಕ್ತಿತ್ವದ ಆತ್ಮ ದರ್ಶನವನ್ನು ಮಾಡಿಸುವ ಸಲುವಾಗಿ ನಾವು ‘ಮೃತ್ಯೋರ್ಮೋ ಅಮೃತಂಗಮಯ’ ಎಂದು ಪ್ರಾರ್ಥಿಸುವುದು. ಈ ಸತ್ಯವನ್ನು ಅರಿಯುವುದಕ್ಕಾಗಿ. ‘ಅಸತೋಮಾ ಸದ್ಗಮಯಾ’ ಎಂದು ಪ್ರಾರ್ಥಿಸುವುದು.
ಈ ಜ್ಞಾನವನ್ನು, ಈ ಬೆಳಕನ್ನು, ಆತ್ಮದರ್ಶನ ಮಾಡುವ ಸಲುವಾಗಿಯೇ. ನಾವು ತಮಸೋಮ ಜ್ಯೋತಿರ್ಗಮಯ ಎಂದು ಪ್ರಾರ್ಥಿಸುವುದು, ಈ ಪ್ರಾರ್ಥನೆ ನಮಗೆ ಫಲಿಸಿದೆ ಎಂದಾದರೆ ಆ ಶಿವನ ಅನುಭೂತಿ ಸಿಕ್ಕಂತೆಯೇ ಸರಿ. ನಮ್ಮ ಬದುಕನ್ನು ನಾವು ನಡೆಸುವುದು ಪ್ರಕಾಶದಲ್ಲಿಯೇ. ಅಂದರೆ ಪ್ರಕಾಶ ಎಂದರೆ ಬೆಳಕು ಎಂಬ ಸಂಕುಚಿತ ಅರ್ಥಕ್ಕಿಂತ, ಇನ್ನೂ ಮಹತ್ತರವಾದ ಹೆಚ್ಚಿನ ಆಳವಾದ ವಿಶಾಲವಾದ ಅತ್ಯಂತ ಕಲ್ಪನೆಗೂ ಮೀರಿದಂತಹ ನಿರಂತರವಾದ ಶಾಶ್ವತ ಜ್ಞಾನದ ಬೆಳಕು ಎಂಬ ಅರ್ಥ.
ಅದಕ್ಕೆ ತನ್ನ ಶಕ್ತಿಯ ಅರಿವು ಇರುತ್ತದೆ. ಅದು ತನ್ನ ಸೃಷ್ಟಿ ಸ್ಥಿತಿ ಲಯಗಳನ್ನು ಗುರುತಿಸುತ್ತದೆ. ಇದುವೇ ಪರಾಶಕ್ತಿ. ಶಿವನಿಗೆ ಅವನದೇ ಆಗಿರತಕ್ಕಂತ ಸುಮಾರು ೧೦೦೮ ನಾಮಗಳಿವೆ. ಅವುಗಳ ಮಹಿಮೆಯನ್ನು ಸಾರುವ ಅನೇಕ ಅದ್ಭುತವಾದಂತಹ ಕಥೆಗಳಿವೆ.


ಅವುಗಳಲ್ಲಿ ನಾವು ಶಿವನನ್ನು ಪ್ರಮುಖವಾಗಿ ಗುರುತಿಸುವುದು ಈ ರೀತಿಯಾಗಿ ಶಿವನ ಧ್ಯಾನದಲ್ಲಿ ಲೀನವಾಗಿರುವ, ಶಿವನು ನಟರಾಜ ನಾಗಿರುವನು, ಶಿವನು ಭಿಕ್ಷಾಟನೆ ಮಾಡುವ ಜಂಗಮ ನಾಗಿರುವನು. ಶಿವನು ಅರ್ಧನಾರೀಶ್ವರ ನಾಗಿರುವನು. ಅಧರ್ಮಿಗಳನ್ನು ಶಿಕ್ಷಿಸುವನು ಅವನೇ, ಇವನು. ಯಾರನ್ನು ಶಿಕ್ಷಿಸುವುದಿಲ್ಲ ಎಲ್ಲರೂ ಗತಕಾಲದಲ್ಲಿ ತಾವು ಮಾಡಿದ ಕರ್ಮಗಳ ಫಲಗಳನ್ನು ಪಡೆಯುತ್ತಾರೆ ಅಷ್ಟೇ.
ಶಿವನು ಆದಿಗುರು ಲೋಕವನ್ನು ಕಾಪಾಡುವಂತಹ ನೀಲಕಂಠನು. ಅವನೇ ಜ್ಞಾನದ ಮೂರನೆಯ ಕಣ್ಣುಳ್ಳವನು. ಶಿವನು ನಿರ್ಮಲವಾಗಿರುತ್ತಾನೆ. ತನ್ನಲ್ಲಿ ಎಲ್ಲ ಇದ್ದರೂ ಕೂಡ ಅತ್ಯಂತ ಸರಳವಾಗಿ, ನಿರಾಡಂಬರವಾಗಿ ಯಾವುದೇ ಒಂದು ಆಡಂಬರವಿಲ್ಲದೆ, ಜಗತ್ತಿಗೆ ತನ್ನನ್ನೇ ತಾನು ತೆಗೆದಿಟ್ಟುಕೊಂಡು ತಕ್ಕಂತಹ ಬಯಲು ರೂಪಿ.
ಆ ಶಿವ ನಮಗೆ ಬೇಡಿದ್ದನ್ನೆಲ್ಲ ಕೊಡತಕ್ಕಂತಹ ಶಿವ, ತಾನು ಮಾತ್ರ ತುಂಬಾ ಸರಳ ಸುಂದರ ರೂಪವನ್ನು ಹೊಂದಿದ್ದಾನೆ. ಶಿವರಾತ್ರಿಯಲ್ಲಿ ನಾವು ಪೂಜೆ ಮಾಡುವ ಲಿಂಗ ಪರಮಾತ್ಮನ ಪ್ರತೀಕ. ಅವನನ್ನು ಮುಖ್ಯವಾಗಿ ಬಿಲ್ವದ ಎಲೆ ಇಂದ ನಾವು ಪೂಜಿಸುತ್ತವೆ.

ಬಿಲ್ವದ ಎಲೆ ಹೃದಯವನ್ನು ಹೋಲುತ್ತದೆ. ಹೃದಯಪೂರ್ವಕವಾಗಿ ಭಗವಂತನನ್ನು ಪೂಜಿಸುವುದು ಎಂದರ್ಥ. ಶಿವರಾತ್ರಿದಿನ ಹೇಳುವ ವೇದಮಂತ್ರ ಅಂದರೆ ರುದ್ರಾಭಿಷೇಕದ ರುದ್ರ ಮಂತ್ರದಲ್ಲಿ ನಮಕ ಮತ್ತು ಚಮಕಗಳನ್ನು ಉಚ್ಚರಿಸುವುದರಿಂದ ಉಸಿರಾಟಕ್ಕೂ ಶಕ್ತಿ ಬರುವುದು. ಅದರಿಂದ ಹೊರಹೊಮ್ಮುವ ತರಂಗಗಳಿಂದ ಪರಿಸರವೂ ಕೂಡ ಶಕ್ತಿಯುತವಾಗಿರುವ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕವನ್ನು ಕೂಡ ಮಾಡುತ್ತಾರೆ.
ನಿರಂತರ ನೀರಿನ ಅಭಿಷೇಕವನ್ನು ಕೂಡ ಮಾಡುತ್ತಾರೆ. ಜಾಗರಣೆ ಎಂದರೆ ಜಾಗೃತರಾಗಿರೋದು ಎಂದು ಅರ್ಥ. ರಾತ್ರಿ ಎನ್ನುವುದು ತಮೋ ಗುಣದ ಪ್ರತೀಕ ಆಲಸ್ಯ, ನಿದ್ರೆ, ಅಹಂಕಾರ, ಅಜ್ಞಾನಗಳ ದ್ಯೋತಕ. ಅದನ್ನು ಹೋಗಲಾಡಿಸಲು ಪರಶಿವನನ್ನು ಸ್ಮರಿಸುತ್ತಾ ನಮ್ಮ ತಮೋ ಗುಣಗಳಿಂದ ನಾವು ಜಾಗೃತರಾಗಬೇಕು ಎಂಬುದು ಶಿವರಾತ್ರಿಯಂದು ಮಾಡುವ ಜಾಗರಣೆಯ ಸದುದ್ದೇಶ.

ಶಿವನು ಸರಳತೆ ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತೀಕವಾಗಿ ಛಲಬಿಡದ ಸಾಧನೆಯ ಪ್ರತೀಕ. ಶಿವ ಭಕ್ತರಿಂದ ಬಯಸುವುದು ತಹ ಸರಳತೆಯನ್ನೇ.ಇವೆಲ್ಲಕ್ಕಿಂತ ಮಿಗಿಲಾಗಿ ನಿಷ್ಕಲ್ಮಶವಾದ ಹಾಗೂ ಪ್ರಾಮಾಣಿಕವಾದ ಸಮರ್ಪಣಾ ಭಾವದ ಭಕ್ತಿಯನ್ನು.ಅಂತಹ ಭಕ್ತಿಯಿಂದ ಎಲ್ಲರೂ ಕೂಡ ನಮ್ಮ ಜೀವನವನ್ನು ಸಾರ್ಥಕಗೊಳಿಸೋಣ.

ಡಾ.ಭಾಗ್ಯಜ್ಯೋತಿ ಕೋಟಿಮಠ, ಮುಖ್ಯ ಶಿಕ್ಷಕಿ, ಶಿರೂರು
administrator

Related Articles

Leave a Reply

Your email address will not be published. Required fields are marked *