ಹುಬ್ಬಳ್ಳಿ-ಧಾರವಾಡ ಸುದ್ದಿ

ಗ್ಯಾಲಕ್ಸಿ ತಂಡದಿಂದ ಶಿವರಾತ್ರಿ ’ಟೋ ಶ್ಯೂಟ್’

ಧಾರವಾಡ: ಭಾರತೀಯ ಸಂಸ್ಕೃತಿಯನ್ನು -ಟೋ ಶ್ಯೂಟ್‌ಗಳ ಮೂಲಕ ಹೊರ ದೇಶಗಳಲ್ಲಿ ಗ್ಯಾಲಕ್ಸಿ ಗ್ಲಾಮಡೆಸ್ಟಾ ತಂಡವು ಪರಿಚಯಿಸಿದ್ದು, ಮೊದಲ ಬಾರಿಗೆ ಶಿವರಾತ್ರಿ ಹಿನ್ನೆಲೆಯಲ್ಲಿ ಈ ತಂಡವು ಶಿವ, ಅರ್ಧನಾರೀಶ್ವರ ಹಾಗೂ ಅಗೋರಿ ಪಾತ್ರದಲ್ಲಿ-ಟೋ ಶ್ಯೂಟ್ ಮಾಡಿದೆ.


ಭಾರತೀಯ ಸಂಸ್ಕೃತಿಯುಳ್ಳ ಹಲವು-ಟೋ ಶ್ಯೂಟ್‌ಗಳನ್ನು ಮಾಡಿರುವ ಈ ತಂಡದ ಕಾರ್‍ಯ ಗಮನಿಸಿದ ದಕ್ಷಿಣ ಅಮೆರಿಕಾದಿಂದ ಸ್ಥಳೀಯ ಸಂಸ್ಕೃತಿಯನ್ನು ತೋರ್ಪಡಿಸುವ-ಟೋಗಳನ್ನು ಆಹ್ವಾನಿಸಿತ್ತು. ಅಂತೆಯೇ, ಮೊದಲ ಬಾರಿಗೆ ಶಿವರಾತ್ರಿ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಈ ತಂಡದ ಸದಸ್ಯರು ಧಾರವಾಡದ ಇಕೋ ವಿಲೇಜ್, ರಂಗಾಯಣದ ಆವರಣದಲ್ಲಿ ಸೆಟ್ ಸಿದ್ಧಪಡಿಸಿ ಅದ್ಭುತ -ಟೋಗಳನ್ನು ಸೆರೆಹಿಡಿಯಲಾಗಿದೆ. ಈಶ್ವರನ ಪಾತ್ರದಲ್ಲಿ ಅನ್ವರ ಎಂಜಿನಿಯರ್ ಹಾಗೂ ಅರ್ಧನಾರೀಶ್ವರ ಪಾತ್ರದಲ್ಲಿ ಅಮಿತಾ ಶಂಕರನಾಯ್ಕ್ ಹಾಗೂ ಅಗೋರಿ ಪಾತ್ರದಲ್ಲಿ ಚೇತನ ಧಾರವಾಡ ಅವರನ್ನು ಅದ್ಭುತ -ಟೋ ಶ್ಯೂಟ್‌ನ್ನು ಆರ್.ಕೆ. ಛಾಯಾ -ಂಡೇಶನ್ ಮಾಡಿದೆ. ತಾಂತ್ರಿಕವಾಗಿ ವಿಶ್ವನಾಥ ಸಹಕಾರ ನೀಡಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಂಡದ ಮುಖಂಡ ಅನ್ವರ ಎಂಜಿನಿಯರ್ ಮಾಹಿತಿ ನೀಡಿದರು.


ಜಗತ್ತಿಗೆ ಮಾದರಿ ಸಂಸ್ಕೃತಿ ನಮ್ಮಲ್ಲಿದ್ದು, ಈ ಹಿನ್ನೆಲೆಯಲ್ಲಿ ಈ ಸಂಸ್ಕೃತಿಯನ್ನು-ಟೋಗಳ ಮೂಲಕ ಸೆರೆ ಹಿಡಿದು ಹೊರ ದೇಶಗಳಿಗೆ ಪರಿಚಯಿಸುವುದು ನಮ್ಮ ಉದ್ದೇಶವಾಗಿದೆ. ಬರುವ ದಿನಗಳಲ್ಲಿ ಹೋಳಿ, ಯುಗಾದಿ, ದೀಪಾವಳಿ ಸೇರಿದಂತೆ ಭಾರತೀಯ ಸಂಸ್ಕೃತಿ ಬಂಬಿಸುವ ಸಂದರ್ಭಗಳನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಮಾಡಲ್‌ಗಳಾಗಬೇಕು ಎನ್ನುವರು ನಮ್ಮ ಸಂಪ್ರದಾಯ ಬಿಂಬಿಸುವ ಇಂತಹ -ಟೋ ಶ್ಯೂಟ್‌ಗಳಲ್ಲಿ ಭಾಗವಹಿಸಬಹುದು ಎಂದ ಅನ್ವರ್ ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ಅಮಿತಾ ಶಂಕರನಾಯ್ಕ, ಚೇತನ ಧಾರವಾಡ, ರಾಮಚಂದ್ರ ಕುಲಕರ್ಣಿ ಹಾಗೂ ವಿಶ್ವನಾಥ್ ಇದ್ದರು.

administrator

Related Articles

Leave a Reply

Your email address will not be published. Required fields are marked *