ಹುಬ್ಬಳ್ಳಿ-ಧಾರವಾಡ ಸುದ್ದಿ

ಜನತೆಗೆ ಸ್ಪಂದಿಸದಿದ್ದರೆ ಕ್ರಮ ಖಚಿತ ನೋಂದಣಿ ಕಚೇರಿ ಸಿಬ್ಬಂದಿಗೆ ಬೆಲ್ಲದ ವಾರ್ನಿಂಗ್

ಧಾರವಾಡ: ಇಲ್ಲಿನ ಮಿನಿವಿಧಾನಸೌಧದಲ್ಲಿನ ಉಪ ನೊಂದಣಾಧೀಕಾರಿ ಕಚೇರಿಗೆ ಶಾಸಕ ಅರವಿಂದ ಬೆಲ್ಲದ ಅವರು ದಿಢೀರ್ ಭೇಟಿ ಕೊಟ್ಟು, ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗಳಲ್ಲಿ ಉಪನೋಂದಣಾಧಿಕಾರಿ ಕಚೇರಿಯ ಆವಾಂತರಗಳು ಪ್ರಸ್ತಾಪವಾಗುತ್ತಿರುವ ಹಿನ್ನೆಲೆಯಲ್ಲಿ ಅನಿರೀಕ್ಷಿತವಾಗಿ ಆಗಮಿಸಿ
ಜಮೀನು, ಜಾಗ ನೊಂದಣಿಗೆ ಬಂದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರಲ್ಲದೇ, ಅಧಿಕಾರಿಗಳು ಜನರಿಗೆ ಸ್ಪಂದಿಸದಿದ್ದರೆ ಕ್ರಮ ಎದುರಿಸಬೇಕಾಗುತ್ತದೆ. ಇದಕ್ಕೆ ಸಿದ್ಧರಾಗಬೇಕು ಎಂದು ಎಚ್ಚರಿಕೆ ಕೂಡ ನೀಡಿದರು.


ಕಚೇರಿಯಲ್ಲಿ ಮೇಲಿಂದ ಮೇಲೆ ಸರ್ವರ್ ಸಮಸ್ಯೆ ಎದುರಾಗುವ ಕಾರಣ, ಜನರು ಬೆಳಿಗ್ಗೆಯಿಂದ ಸಂಜೆವರೆಗೆ ಕಾಯುವಂತಾಗುತ್ತಿದೆ. ಇದರಿಂದ ನೊಂದಣಿ ಕಾರ್ಯ ವಿಳಂಬ ಆಗಿ ಪರದಾಡುವ ಪರಿಸ್ಥಿತಿ ಉದ್ಭವಿಸಿದೆ.
ಸಕಾಲಕ್ಕೆ ಮತ್ತು ಶೀಘ್ರವಾಗಿ ಕಚೇರಿ ಕೆಲಸ ಮುಗಿಯಬೇಕಿದೆ. ಆದ್ದರಿಂದ ಕಚೇರಿಯನ್ನು ಎರಡು ವಿಭಾಗವಾಗಿ ಮಾಡಬೇಕಿದೆ. ಜೊತೆಗೆ ಅಧಿಕಾರಿಗಳ ಬೇಡಿಕೆ ಇಟ್ಟಿದ್ದರಿಂದ ಕಚೇರಿ ಮೇಲ್ದರ್ಜೆಗೆ ಏರಿಸುವ ಕೆಲಸ ಮಾಡಲಾಗು ವುದು. ಅಲ್ಲದೇ ಕಚೇರಿ ಬೇರೆ ಕಡೆ ಸ್ಥಳಾಂತರ ಮಾಡುವ ಬಗ್ಗೆ ಕೂಡಾ ಸಂಬಂಧಿಸಿದವರಬಜೊತೆ ಮಾತನಾಡುವುದಾಗಿ ಶಾಸಕರು ಹೇಳಿದರು.


ಒಟ್ಟಾರೆ ಜನರಿಗೆ ಅನುಕೂಲ ಒದಗಿಸಬೇಕಿದೆ. ಈ ದಿಸೆಯಲ್ಲಿ ತಾವು ಕೂಡ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮುಂದುವರೆಸುವುದಾಗಿ ಹೇಳಿದರು.
ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಕಪಟಕರ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ಸುರೇಶ ಬೇದ್ರೆ ಮತ್ತಿತರರು ಜೊತೆಯಲ್ಲಿದ್ದರು.
ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿನ ತೊಂದರೆಗಳ ಕುರಿತು ಸಂಜೆದರ್ಪಣ ಪತ್ರಿಕೆ ಗಮನಸೆಳೆದಿತ್ತು. ನಂತರ ಜಿಲ್ಲಾಧಿಕಾರಿ ನಿತೇಶ ಪಾಟೀಲ ಕೂಡ ಭೇಟಿ ನೀಡಿದ್ದನ್ನು ಸ್ಮರಿಸಬಹುದು.

administrator

Related Articles

Leave a Reply

Your email address will not be published. Required fields are marked *