ಹುಬ್ಬಳ್ಳಿ-ಧಾರವಾಡ ಸುದ್ದಿ
ಸಿಂಫೋನಿ ನೂತನ ಉತ್ಪನ್ನಗಳ ಬಿಡುಗಡೆ

ಸಿಂಫೋನಿ ನೂತನ ಉತ್ಪನ್ನಗಳ ಬಿಡುಗಡೆ

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಕಾಟನ್ ಕೌಂಟಿ ಕ್ಲಬ್‌ನಲ್ಲಿ ನಡೆದ ಸಿಂಫೋನಿ ಲಿಮಿಟೆಡ್‌ನ ವಿತರಕರ ಸಭೆಯಲ್ಲಿ ಹೊಸದಾಗಿ ಸಿದ್ಧಪಡಿಸಲಾದ ಕೂಲರ್ ಹಾಗೂ ಫ್ಯಾನ್ ಬಿಡುಗಡೆ ಮಾಡಲಾಯಿತು.
ಬಳಿಕ ಪತ್ರಿಕಾಗೋಷ್ಠೀಯಲ್ಲಿ ಮಾತನಾಡಿದ ಕಂಪನಿಯ ಸಿಇಒ ಅಮಿತ್ ಕುಮಾರ್, ಏರ್ ಕೂಲರ್‌ಗಳ ಉತ್ಪಾದನೆಯಲ್ಲಿ ಸಿಂಫೋನಿ ಮುಂಚೂಣಿ ಯಲ್ಲಿದೆ. 60 ಬಗೆಗೆ ಕೂಲರ್ ಹಾಗೂ ಫ್ಯಾನ್‌ಗಳನ್ನು ಹೊಂದಿದೆ ಎಂದರು.


ವಿಶ್ವದ 60ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ಮೊದಲ ಎರಡು ಕೋವಿಡ್ ಅಲೆಗಳೂ ಬೇಸಿಗೆ ಸಂದರ್ಭದಲ್ಲಿಯೇ ಬಂದಿದ್ದರಿಂದ ವ್ಯಾಪಾರಕ್ಕೆ ತೊಂದರೆಯಾಗಿತ್ತು. ಈಗ ಚೇತರಿಸಿಕೊಂಡಿದೆ. ಗ್ರಾಹಕರ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹೊಸದಾಗಿ ಎರಡು ಮಾಡೆಲ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.


ಡ್ಯುಯಟ್ ಕೂಲಿಂಗ್ ಫ್ಯಾನ್ ಅನ್ನು ಕೂಲರ್ ಹಾಗೂ ಟವರ್ ಫ್ಯಾನ್ ಆಗಿ ಬಳಸಬಹುದಾಗಿದೆ. ೧೮೦ ಡಿಗ್ರಿಯಲ್ಲಿ ತಿರುಗಲಿದೆ. ಅದರಲ್ಲೂ ರಿಮೋಟ್ ಹಾಗೂ ವಿಥೌಟ್ ರಿಮೋಟ್ ಎರಡು ಬಗೆಯಲ್ಲಿವೆ. ಸರೌಂಡಿಂಗ್ ಟವರ್ ಫ್ಯಾನ್ ಎಂಬ ಮತ್ತೊಂದು ಉತ್ಪನ್ನ ಬಿಡುಗಡೆ ಮಾಡುತ್ತಿದ್ದು, ೨೫ ಅಡಿಯವರೆಗೆ ಗಾಳಿ ಬರುತ್ತದೆ. ಬ್ಲೇಡ್‌ಲೆಸ್ ಆಗಿರುವು ದರಿಂದ ಮಕ್ಕಳಿದ್ದರೂ ಯಾವುದೇ ರೀತಿ ಅಪಾಯಕಾರಿಯಲ್ಲಿ. ಸಂಪೂರ್ಣ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಹುಬ್ಬಳ್ಳಿ ಟ್ರಿನಿಟಿ ಮಾರ್ಕೇಟಿಂಗ್ ಮಾಲೀಕ ವಿಲ್ಸನ್, ಉಪಾಧ್ಯಕ್ಷ ಕುಮಾರ ಪಂಕಜ್, ಹುಬ್ಬಳ್ಳಿ ಶಾಖೆ ಮುಖ್ಯಸ್ಥ ಆರೀಫ್ ಹುಸೇನ್ ಶೇಖ ಇದ್ದರು.

administrator

Related Articles

Leave a Reply

Your email address will not be published. Required fields are marked *