’ಅಮೃತ ನಿವಾಸ’ದಲ್ಲಿ 10ಸಾವಿರ ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ
ಕಲಘಟಗಿ: ಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಲಘಟಗಿ ಮತಕ್ಷೇತ್ರದಿಂದಲೇ ನಾನು ಸ್ಪರ್ಧಿಸುವುದು ಖಚಿತ, ಯಾವುದೇ ಉಹಾಪೊಹಗಳಿಗೆ ಕಿವಿಗೊಡಬೇಡಿ ಎಂದು ಮಾಜಿ ಸಚಿವ ಸಂತೋಷ್ ಲಾಡ್ ಹೇಳಿದರು.
ತಾಲೂಕಿನ ಮಡಕಿಹೊನ್ನಿಹಳ್ಳಿ ಗ್ರಾಮದಲ್ಲಿ ಅಮೃತ ನಿವಾಸದಲ್ಲಿ ಸಂತೋಷ್ ಲಾಡ್ ಫೌಂಡೆಶನ್ ನಿಂದ ಏರ್ಪಡಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚಾರಣೆಯ ಕಾರ್ಯಕ್ರಮದಲ್ಲಿ ಕ್ಷೇತ್ರದ ಹತ್ತು ಸಾವಿರಕ್ಕೂ ಹೆಚ್ಚು ಅಂಗನವಾಡಿ /ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಿ ಕಿಟ್ ವಿತರಣೆಯನ್ನು ಮಾಡಿ ಅವರು ಮಾತನಾಡಿದರು.
ಕಲಘಟಗಿ ಮತಕ್ಷೇತ್ರವು ಮತದಾರರೆ ನನ್ನ ಮಾಲಿಕರು ಅವರಿಂದಲೇ ನಾನು ರಾಜಕೀಯ ಪುನರ್ಜನ್ಮ ನೀಡಿದ್ದಾರೆ ಕಳೆದ ಅವಧಿ ಸೋಲಿಗೆ ನಾನು ಎದೆಗುಂದಿಲ್ಲ ನನ್ನ ಕ್ಷೇತ್ರದ ಜನರ ಸೇವೆ ಮಾಡುತ್ತಲೇ ಇದ್ದೇನೆ ಎಂದು ಹೇಳಿದರು.
ಕೊವಿಡ್ ಸಮಯದಲ್ಲಿ ತಮ ಬದುಕಿನ ಜೀವವನ್ನು ಲೆಕ್ಕಿಸದೆ ಅಹೋರಾತ್ರಿ ಎನ್ನದೆ ಜತೆಯ ಆರೋಗ್ಯವನ್ನು ಕಾಪಾಡಲು ಯತ್ನಿಸಿದ ಅಂಗನವಾಡಿ ಆಶಾ, ಆರೋಗ್ಯ ಇಲಾಖೆಯ ಸಿಬ್ಬಂದಿ, ಪೌರ ಕಾರ್ಮಿರುಗಳ ಸೇವೆಯನ್ನು ಎಂದು ಮರೆಯುವಂತಿಲ್ಲ
ಮುಂದೆ ನಮ್ಮ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಕನಿಷ್ಠ ವೇತನ, ಸೇವಾ ಭದ್ರತೆಯೊಂದಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲು ಭರವಸೆ ನೀಡಿದರು.
ಇದಕ್ಕೂ ಮುನ್ನ ಸಂತೋಷ್ ಲಾಡ್ ಅವರ ತಾಯಿ ಶೈಲಜಾ, ಕುಟುಂಬ ಪರಿವಾರದವರು ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಾಜಿ ಸಚಿವ ಐ.ಜಿ.ಸನದಿ, ಎ.ಎಮ್.ಹಿಂಡಸಗೇರಿ, ಕೆ.ಪಿ.ಸಿ.ಸಿ.ವಕ್ತಾರೆ ಕವಿತಾ ರೆಡ್ಡಿ, ಎನ್.ಹೆಚ್.ಕೊನರೆಡ್ಡಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅನಿಲಕುಮಾರ ಪಾಟೀಲ, ಕೆ.ಸಿ.ಸಿ.ಬ್ಯಾಂಕ ನಿರ್ದೇಶಕ ಮಂಜುನಾಥಗೌಡ ಮುರಳ್ಳಿ, ಜಿ.ಪಂ.ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ, ಮಾಜಿ ಸದಸ್ಯೆ ಈರಮ್ಮ ದಾಸನಕೊಪ್ಪ, ಬಾಬು ಅಂಚಟಗೇರಿ, ನರೇಶ ಮಲೆನಾಡು, ವೆಂಕಟೇಶ ಬಂಡಿವಡ್ಡರ್, ಸಿದ್ದಪ್ಪ ತಲೆಬಾಗಿಲು, ಬಾಳು ಖಾನಾಪೂರ, ಆನಂದ ಕಲಾಲ, ಗಂಗಾಧರ ಚಿಕ್ಕಮಠ, ಆಶೋಕ ಶೆಟ್ಟಿ, ದೇವಕಿ ಯೋಗಾನಂದ, ಪ.ಪಂ.ಸದಸ್ಯೆ ಶಕುಂತಲಾ ಬೋಳಾರ, ಮಾಲಾ ತುರಿಹಾಳ, ಮಂಜುಳಾ ದೇವಲಾಪೂರ ಸೇರಿದಂತೆ ಇತರರಿದ್ದರು.
ದೊಡ್ಡ ದೊಡ್ಡ ಸಾಧಕರಿಗೆ ಸನ್ಮಾನ ಮಾಡುವುದು ಸಹಜ. ಆದರೆ ಈ ಈ ರೀತಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೊರೊನಾ ವಾರಿಯರ್ಸ್‌ಗೆ ಸನ್ಮಾನ ಮಾಡುತ್ತಿರುವುದು ರಾಜ್ಯದಲ್ಲೆಲ್ಲ ದೇಶದಲ್ಲೇ ಸಂತೋಷ್ ಲಾಡ್ ಅವರು ಒಬ್ಬರೇ ಈ ರೀತಿ ಎಲ್ಲರಿಗೂ ಸನ್ಮಾನ ಮಾಡಿದ್ದಾರೆ.
ಆನಂದ ಕಲಾಲ್, ಫೌಂಡೇಶನ್ ಅಧ್ಯಕ್ಷ