ಹುಬ್ಬಳ್ಳಿ-ಧಾರವಾಡ ಸುದ್ದಿ

ಉ.ಪ್ರ. ಮತ್ತೆ ಅರಳಿದ ಕಮಲ : ಯೋಗಿ ಹವಾದೆದುರು ಸೈಕಲ್ ಪಂಚರ್

ಫಲನೀಡದ ಪ್ರಿಯಾಂಕಾ ತಂತ್ರಗಾರಿಕೆ

ಲಖನೌ: ದೇಶದ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದ್ದು ಮತ್ತೆ ನಿಚ್ಚಳ ಬಹುಮತದತ್ತ ಮುನ್ನಡೆದಿದ್ದು, ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ರಚನೆ ನಿಕ್ಕಿಯಾಗಿದೆ.
ಚುನಾವಣೋತ್ತರ ಸಮೀಕ್ಷೆಗಳ ಅಂದಾಜಿನಂತೆ ಮ್ಯಾಜಿಕ್ ಸಂಖ್ಯೆ 202ನ್ನು ದಾಟಿ 269 ಕ್ಷೇತ್ರಗಳಲ್ಲಿ ಮುನ್ನಡೆದಿರುವ ಬಿಜೆಪಿಗೆ ಮತದಾರ ಜೈ ಎಂದಿದ್ದು ಸಮಾಜವಾದಿ ಪಕ್ಷಕ್ಕೆ ಈ ಬಾರಿ ಶತಕ ಹೊಡೆದಿದೆ.

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿಂದು ಮಹಾನಗರ ಜಿಲ್ಲಾ ವತಿಯಿಂದ ಸಿಹಿ ವಿತರಿಸುವ ಮೂಲಕ ವಿಜಯೋತ್ಸವ ಆಚರಿಸಲಾಯಿತು. ಅಧ್ಯಕ್ಷ ಸಂಜಯ ಕಪಟಕರ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಸದಸ್ಯ ರಾದ ತಿಪ್ಪಣ್ಣ ಮಜ್ಜಗಿ, ಸಂತೋಷ ಚವ್ಹಾಣ, ಮುಖಂಡರಾದ ದತ್ತಮೂರ್ತಿ ಕುಲಕರ್ಣಿ, ಚಂದ್ರಶೇಖರ ಗೋಕಾಕ, ಬಸವರಾಜ ಅಮ್ಮಿನಭಾವಿ, ರವಿ ನಾಯಕ್ ಅನೇಕರಿದ್ದರು.

ಯೋಗಿ ಮತ್ತು ಪ್ರಧಾನಿ ಮೋದಿ ಮೋಡಿಯೆದುರು ಸೈಕಲ್ ಪಂಕ್ಚರ್ ಆಗಿದ್ದು, ಮಾಯಾವತಿಯ ಆನೆ ಮತ್ತು ಪ್ರಿಯಾಂಕಾ ಗಾಂಧಿ ನೇತೃತ್ವದ ಕಾಂಗ್ರೆಸ್ ಎರಡಂಕಿಯನ್ನು ತಲುಪದೆ ಹೀನಾಯ ಸೋಲಿನ ಸುಳಿಗೆ ಸಿಲುಕಿದೆ.
403 ಸದಸ್ಯ ಬಲದ ಉತ್ತರ ಪ್ರದೇಶದಲ್ಲಿ ಬಿಜೆಪಿ 269 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಸಮಾಜವಾದಿ ಪಕ್ಷ 123 ಕ್ಷೇತ್ರಗಳಲ್ಲಿ, ಬಿ ಎಸ್ ಪಿ 5 ಹಾಗೂ ಕಾಂಗ್ರೆಸ್ 2 ಸ್ಥಾನಗಳಲ್ಲಿ ಮತ್ತು ಇತರರು 5 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಸ್ಪಷ್ಟ ಬಹುಮತ ಸಾಧಿಸಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿಂದು ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಅನಂತಕುಮಾರ ಬುಗಡಿ, ಪ್ರವೀಣ ನಡಕಟ್ಟಿನ, ನವೀನಸಿಂಘ ರಜಪೂತ, ರೇವಣಸಿದ್ದಪ್ಪ ಹುಬ್ಬಳ್ಳಿ, ಹಸನಸಾಬ ಇನಾಮದಾರ, ಶಾಮ ನರಗುಂದ ಮತ್ತಿರರಿದ್ದರು.

ಪ್ರಿಯಾಂಕಾ ಗಾಂಧಿ ತಂತ್ರಗಾರಿಕೆ, ಯೋಗಿ ಹವಾ ಮುಂದೆ ನೆಲಕಚ್ಚಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಮುಖಭಂಗವಾಗಿದ್ದು, ಸ್ಥಳೀಯ ನಾಯಕತ್ವ ಅಷ್ಟೇ ಅಲ್ಲ, ಹೈಕಮಾಂಡ್ ನಾಯಕತ್ವ ಕೆಲಸ ಫಲಿಸಿಲ್ಲ. ಪ್ರಿಯಾಂಕಾ ಗಾಂಧಿ ಹೋದ ಕಡೆ ಜನ ಸಾಗರ ಸೇರುತ್ತಿತ್ತು. ಉತ್ತರ ಪ್ರದೇಶದಲ್ಲಿ ಭರ್ಜರಿ ಪ್ರಚಾರ ಮಾಡಿದ್ರೂ ಮತದಾರರು ಮಾತ್ರ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮನ್ನಣೆ ನೀಡಿಲ್ಲ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಬಹುಮತ ಗಳಿಸುವ ಮೂಲಕ 1985ರ ಬಳಿಕ ಇದೇ ಮೊದಲ ಬಾರಿಗೆ ಆಡಳಿತ ಪಕ್ಷವೇ ಚುನಾವಣೆಯಲ್ಲಿ ಗೆದ್ದು ಸತತ ಎರಡನೇ ಬಾರಿಗೆ ಅಧಿಕಾರಕ್ಕೇರಿದಂತಾಗಿದ ಯೋಗಿ ಆದಿತ್ಯನಾಥ್ ಅವರೇ ಇನ್ನೊಂದು ಅವಧಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದರೆ ಅದೂ ಸಹ ದಾಖಲೆಯಾಗಲಿದೆ. 1950ರ ಬಳಿಕ ಇದೇ ಮೊದಲ ಬಾರಿಗೆ, ಐದು ವರ್ಷಗಳ ಪೂರ್ಣಾವಧಿ ಆಡಳಿತ ನಡೆಸಿದ ಬಳಿಕ ಮತ್ತೆ ಅಧಿಕಾರ ಉಳಿಸಿಕೊಂಡ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಗುರುತಿಸಿಕೊಳ್ಳಲಿದ್ದಾರೆ. 1950ರಿಂದ 54ರ ವರೆಗೆ ಗೋವಿಂದ ವಲ್ಲಭ ಪಂತ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. 1955ರಿಂದ 61 ರವರೆಗೆ ಅವರೇ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿದ್ದರು.

administrator

Related Articles

Leave a Reply

Your email address will not be published. Required fields are marked *